"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"
ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಯೋಗವನ್ನು ಅಭ್ಯಾಸ ಮಾಡಿಕೊಂಡು ಬರಲಾಗುತ್ತಿದೆ,ಆದಿಯೋಗಿ ಎಂದೇ ಕರೆಯಲ್ಪಡುವ ಶಿವನು ಸಪ್ತರ್ಷಿಗಳಿಗೆ ಯೋಗದ ಕುರಿತಾದ ಶ್ರೇಷ್ಠ ಬೋಧನೆಗಳನ್ನು ಮಾಡುತ್ತಾನೆ ಹಾಗೂ ಅದನ್ನು ಕಲಿತ ಸಪ್ತರ್ಷಿಗಳು ಇತರರಿಗೆ ಯೋಗ ವಿದ್ಯೆಯ ವಿಚಾರಧಾರೆ ಎರೆಯುತ್ತಾರೆ, ಹೀಗೆ ಶಿವನಿಂದ ಶುರುವಾದ ಯೋಗವು ಋಷಿ ಮುನಿಗಳ ಮೂಲಕ ಅಸಂಖ್ಯಾತ ಯೋಗ ಪಟುಗಳನ್ನು ತಲುಪುತ್ತದೆ, ವಿಶ್ವಕ್ಕೆ ಭಾರತ ನೀಡಿರುವ ಅಮೂಲ್ಯಾಗ್ರ ಕೊಡುಗೆಗಳಲ್ಲಿ ಯೋಗವು ಸಹ ಒಂದು, ಯೋಗದಿಂದ ಉಂಟಾಗುವ ಸತ್ಪರಿಣಾಮಗಳನ್ನು ಅರಿತ ವಿದೇಶಿಯರು ಯೋಗದೆಡೆಗೆ ಸೆಳೆಯಲ್ಪಟ್ಟರು, ಭಾರತದಲ್ಲಿ ಯೋಗ ಕಲಿತ ಹಲವಾರು ಯೋಗ ಸಾಧಕರು ವಿದೇಶಗಳಿಗೆ ತೆರಳಿ ಯೋಗವನ್ನು ಪ್ರಸರಿಸಿ ವಿದೇಶಿಯರ ಮೆಚ್ಚುಗೆಗೆ ಪಾತ್ರವಾಗುತ್ತಾರೆ, ಭಾರತ ಸ್ವಾತಂತ್ರ್ಯ ಪಡೆದ ೫೮ ವರ್ಷಗಳ ತರುವಾಯ ವಿಶ್ವದೆಲ್ಲೆಡೆ ಜೂನ್ ೨೧ ರಂದು ಅಂತರರಾಷ್ಟೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೨೦೧೪ ರ ಸೆಪ್ಟೆಂಬರ್ ನಲ್ಲಿ ಈ ಕುರಿತಾದ ಪ್ರಸ್ತಾವನೆಯನ್ನು ಯುನೈಟೆಡ್ ನೇಷನ್ಸ್ ನ ಸಭೆಯಲ್ಲಿ ಮಂಡನೆ ಮಾಡುತ್ತದೆ, ವಿಶ್ವದ ೧೭೦ ಕ್ಕೂ ಹೆಚ್ಚು ರಾಷ್ಟ್ರಗಳು ಇದಕ್ಕೆ ಸಮ್ಮತಿಯನ್ನು ಸೂಚಿಸುವ ಮೂಲಕ ಯೋಗ ದಿನಾಚರಣೆಗೆ ಹಸಿರು ನಿಶಾನೆ ತೋರಿಸುತ್ತದೆ, ಪಂಚಾಂಗಗಳ ಪ್ರಕಾರ ಈ ದಿನವೇ ಶಿವನು ಯೋಗವನ್ನು ಹೇಳಿಕೊಡುವ ಪ್ರಕ್ರಿಯೆ ಶುರು ...