"ಕೋಟಿ ವೃಕ್ಷ ಆಂದೋಲನದ ಮಹತ್ವ "

ಬೆಂಗಳೂರಿನಿಂದ ೫೦ ಕಿಲೋಮೀಟರ್ ದೂರ ಇರುವ ತುಮಕೂರು ನಗರದಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ,ಎರಡು ಅಥವಾ ಮೂರು ಮನೆ ಬಾಡಿಗೆ ಕೊಟ್ಟಿರುವ ಮನೆ ಮಾಲೀಕ ೧೦ ದಿನಕ್ಕೊಮ್ಮೆ ಐನೂರು ಅಥವಾ ಆರು ನೂರು ರೂಪಾಯಿಗಳನ್ನು ಕೊಟ್ಟು ನೀರನ್ನು ಕೊಂಡುಕೊಳ್ಳಬೇಕಾದ ದುಸ್ಥಿತಿ ಬಂದಿದೆ,ಸುತ್ತ ಮುತ್ತ ಇರುವ ನದಿ.ಬಾವಿ,ಕೆರೆಗಳೆಲ್ಲ ಬತ್ತು ಹೋಗಿದ್ದು ನೀರಿನ ಹಾಹಾಕಾರದಿಂದ ಜನ ಬಳಲುತ್ತಿದ್ದಾರೆ,ಗತ ಕಾಲದಿಂದ ಉಚಿತವಾಗಿ ದೊರಕುತ್ತಿದ್ದ ಕುಡಿಯುವ ನೀರಿಗೂ ಸಹ ಇಂದು ದುಡ್ಡು ಕೊಟ್ಟು ಕೊಂಡು ಕೊಳ್ಳಬೇಕಾಗಿದೆ, ಎಲ್ಲಿ ನೋಡಿದರಲ್ಲಿ ನೀರಿನ ಪ್ಲಾಂಟ್ ಗಳು ತಲೆ ಎತ್ತುತ್ತಿದೆ, ೨೫ ಲೀಟರ್ ಕುಡಿಯುವ ನೀರಿನ ಬೆಲೆ(ಐದು ರೂಪಾಯಿ ಇಂದ ಎಪ್ಪತ್ತು ರೂಪಾಯಿ)!!, ಕುಡಿಯುವ ನೀರಿಗಾಗಿ ಹಣ ಕೊಡುತ್ತಿದ್ದ ಜನ ಇಂದು ಮನೆ ಕಾರ್ಯಗಳಿಗೆ ಬಳಸುವ ನೀರಿಗೂ ಸಹ ದುಡ್ಡು ಕೊಡಬೇಕಾಗಿ ಬಂದಿದೆ, ದುರಾಸೆ ಮಾನವನನ್ನು ಆವರಿಸುವ ಮುನ್ನ ಜಗತ್ತು ಸುಂದರವಾಗಿತ್ತು, ಗಿಡ ಮರಗಳನ್ನು ಬೆಳೆಸಿ ಪೋಷಿಸುತ್ತಿದ್ದ ಅಂದಿನ ಪರಿಸರ ಸ್ನೇಹಿ ಜನಗುಂಪು ಲಕ್ಷಾಂತರ ಗಿಡಗಳನ್ನು ನೆಟ್ಟಿತ್ತು, ಅದರ ಪರಿಣಾಮವಾಗಿಯೇ ಇಂದು ನಮ್ಮೆದುರಿಗೆ ಸಾವಿರಾರು ಮರಗಳು ಉಸಿರಾಡುತ್ತಿರುವುದು! ಜನ ಸಂಖ್ಯೆ ಹೆಚ್ಚಾದಂತೆ ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಲಕ್ಷಾಂತರ ಮರಗಳು ಧರೆಗುರುಳಿದವು,ಮುಂದೆ ಉಂಟಾಗುವ ದುಷ್ಪರಿಣಾಮಗಳನ್ನು ಯೋಚಿಸದೆ ಏಕಾಏಕಿ ಮರಗಳನ್ನು ಕತ್ತರಿಸಿದ್ದಕ್ಕೆ ದುಬಾರಿ ಬೆಲೆ ತರಬೇಕಾಗಿದೆ,ಹಲವು ವರ್ಷಗಳ ಹಿಂದೆ ಮನುಷ್ಯ ಹಾಗೂ ಮರ ಗಿಡಗಳ ನಡುವಿನ ಅನುಪಾತ "೧:೧" ರಷ್ಟಿತ್ತು(ಒಬ್ಬನಿಗೆ ಒಂದು ಮರ),ಇಂದು ಏಳು ಅಥವಾ ಎಂಟು ಜನರಿಗೆ ಒಂದು ಗಿಡ/ಮರವಿದೆ,ಸಮರ್ಪಕ ಆಕ್ಸಿಜನ್ ಲಭ್ಯವಾಗಬೇಕೆಂದರೆ ಪ್ರತಿ ಒಬ್ಬ ವ್ಯಕ್ತಿಗೂ ಏಳು ಮರಗಳ ಅವಶ್ಯಕತೆಯಿದೆ(ಸಂಶೋಧನೆಯ ಮೂಲಕ ದೃಢಪಟ್ಟಿದೆ), "ಸಾಲು ಮರದ ತಿಮ್ಮಕ್ಕ"ನಂತಹ ಪರಿಸರಪ್ರೇಮಿಗಳು ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸಿರಬೇಕಾದರೆ ಜನ ಸಾಮಾನ್ಯರು ಒಂದಾದರೂ ಗಿಡ ನೆಟ್ಟು ಭೂಮಿ ತಾಯಿಯ ಋಣ ತೀರಿಸಬೇಕಲ್ಲವೆ??

ಪರಿಸರ ನಾಶದ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ, ಮಳೆ ನೀರನ್ನು ಎತ್ತೇಚ್ಛವಾಗಿ ಹಿಡಿದಿಟ್ಟುಕೊಳ್ಳುತ್ತಿದ್ದ ಬೃಹದಾಕಾರದ ಮರಗಳು ಈಗೀಗ ಕಣ್ಮರೆಯಾಗುತ್ತಿದೆ, ಇದರ ಪರಿಣಾಮವಾಗಿ ಅಂತರ್ಜಲ ಪ್ರಮಾಣ ಕುಸಿಯುತ್ತಿದ್ದು ಸಾವಿರ ಅಡಿ ಕೊರೆದರು ಕೂಡ ನೀರು ಸಿಗುತ್ತಿಲ್ಲ, ಹೆಚ್ಚೆಚ್ಚು ಮರ ಗಿಡಗಳಿದ್ದ ಭೂಭಾಗಗಳಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಿರುವ ಕಾರಣ ಕೆಲವೇ ಅಡಿ ಕೊರೆದರೆ ನೀರು ಸಿಗುತ್ತಿತ್ತು, ಈ ಭೂ ಭಾಗಗಳಲ್ಲೂ ಸಹ ಮರ ಕಡಿಯುವ ಕಾರ್ಯ ಎಗ್ಗಿಲ್ಲದಂತೆ ನೆಡೆಯುತ್ತಿದ್ದು ಕೆಲವೇ ವರ್ಷಗಳಲ್ಲಿ ಅಲ್ಲಿಯೂ ಸಹ ಅಂತರ್ಜಲ ಪ್ರಮಾಣ ಕುಸಿಯಲಿದೆ,ಮರಗಳ ಸಂಖ್ಯೆ ಕಡಿಮೆ ಆದಂತೆಲ್ಲಾ ಉಷ್ಣಾಂಶ ಹೆಚ್ಚಾಗುತ್ತಿದೆ,ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು ೪೦ ಡಿಗ್ರಿ ಯನ್ನು ದಾಟುತ್ತಿದೆ! ಕಾಲ ಕಾಲಕ್ಕೆ ಮಳೆಯಾಗುತ್ತಿದ್ದಾಗ ಅನ್ನದಾತನಾದ ರೈತ ಉತ್ತಮ ಸ್ಥಿತಿಯಲ್ಲಿದ್ದ, ಅಕಾಲಿಕ ಮಳೆಯ ಪರಿಣಾಮ ರೈತಾಪಿ ಜನಗಳ ಜೀವನ ಸ್ಥಿತಿ ತೀರಾ ಹದಗೆಟ್ಟಿದೆ,ಮರ ಇಲ್ಲದೆ ಮಳೆ ಇಲ್ಲ, ಮಳೆ ಇಲ್ಲದೆ ಬೆಳೆ ಇಲ್ಲ,ಬೆಳೆ ಇಲ್ಲದೆ ಜೀವನವೇ ಇಲ್ಲ! ಹೀಗೆ ಅರಣ್ಯ ನಾಶದ ಪರಿಣಾಮ ಮಾನವನ ಮೇಲಷ್ಟೇ ಬೀರುವುದಿಲ್ಲ ಮೂಕ ಪ್ರಾಣಿ ಪಕ್ಷಿಗಳ ಮೇಲೂ ಬೀರುತ್ತದೆ,ನೀರನ್ನು ಅರಸಿ ಹೋಗುವ ಎಷ್ಟೋ ಪ್ರಾಣಿ ಪಕ್ಷಿಗಳಿಗೆ ಇಂದು ನೀರೇ ಸಿಗುತ್ತಿಲ್ಲ, ಅಲ್ಲಿ ನೀರು ಸಿಗದ ಪರಿಣಾಮ ಪ್ರಾಣಿ ಪಕ್ಷಿಗಳು ನಗರ ಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ,ನೀರು ಇಲ್ಲದ ಕಾರಣ ಮೇವಿಗೂ ಸಹ ಸಮಸ್ಯೆ ಎದುರಾಗುತ್ತಿದೆ,ಮೇವು ಸಿಗುತ್ತಿದ್ದ ಸಮಯದಲ್ಲಿ ಪ್ರಾಣಿಗಳ ಸ್ಥಿತಿ ಚೆನ್ನಾಗಿಯೇ ಇತ್ತು,ಮೇವು ಸಿಗದ ಕಾರಣ ಸಾವಿರಾರು ಗೋವುಗಳು ಚಿಂತಾಜನಕ ಪರಿಸ್ಥಿತಿಯಲ್ಲಿದೆ,ಇಷ್ಟೆಲ್ಲಾ ಸಂಗತಿಗಳು ಬಹುಪಾಲು ಜನರ ನಿದ್ದೆ ಕೆಡಿಸಿದೆ,ಸರ್ಕಾರಗಳು ಸಹ ಜಾಗೃತಗೊಂಡು ಅರಣ್ಯ ವೃದ್ಧಿ ಮಾಡುವ ಕಾರ್ಯಕ್ಕೆ ಕೈ ಹಾಕಿದೆ, ಪರಿಸರಕ್ಕೆ ಹಾನಿಕಾರಿಯಾಗುವಂತಹ ಮರಗಳಾದ ಅಕೇಶಿಯಾ ಹಾಗೂ ನೀಲಗಿರಿ ಅಂತಹ ಹಲವು ಮರಗಳನ್ನು ಸರ್ಕಾರ ಇನ್ನು ಮುಂದೆ ಬೆಳೆಸದಿರಲು ನಿರ್ಧರಿಸಿರುವುದು ಪರಿಸರ ಸ್ನೇಹಿಗಳ ಪಾಲಿಗೆ ಖುಷಿ ತಂದಿದೆ,ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಡುವ ಕಾರ್ಯ ಅನಿವಾರ್ಯವಾಗಿದೆ, ಸಸಿ ನೆಡುವ ಕಾರ್ಯದಲ್ಲಿ ಹಲವಾರು ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸಿವೆ, ವಿವೇಕ ಬ್ಯಾಂಡ್ ಮೂಲಕ ಯುವಕರನ್ನು ಪ್ರೇರೇಪಿಸಿದ್ದ "ಸಮರ್ಥ ಭಾರತ" ಸಂಸ್ಥೆ ಪ್ರಸಕ್ತ ವರ್ಷದಲ್ಲಿ ಕೋಟಿ ಸಸಿ ನೆಡುವ ಕೋಟಿ ವೃಕ್ಷ ಆಂದೋಲನಕ್ಕೆ ಜೂನ್ ೫ ರಂದು ಚಾಲನೆ ನೀಡಿದೆ, ಕರ್ನಾಟಕದಲ್ಲಿ ಒಂದು ಕೋಟಿ ಸಸಿಗಳನ್ನು ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿಯನ್ನು ಸ್ಥಳೀಯರಿಗೆ/ಸ್ಥಾನೀಯರಿಗೆ ನೀಡುವ ಯೋಜನೆಯಲ್ಲಿದೆ,ಬನ್ನಿ ಈ ಕೋಟಿ ವೃಕ್ಷ ಆಂದೋಲನದಲ್ಲಿ ನಾವು ಭಾಗಿಯಾಗೋಣ ಹಾಗೂ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಜಾಗೃತರಾಗೋಣ.

ವೃಕ್ಷೋ ರಕ್ಷತಿ ರಕ್ಷಿತಃ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???