ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ಹಿಂದೂಗಳ ಪಾಲಿಗೆ ದೊಡ್ಡ ಹಬ್ಬವಾದ ದೀಪಾವಳಿ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ, ಹಬ್ಬದ ಸಿದ್ಧತೆ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ, ಹಬ್ಬ ಆಚರಿಸಲು ಸಿದ್ಧರಿದ್ದ ದೆಹಲಿಯ ಜನರಿಗೆ ಸುಪ್ರೀಂ ಕೋರ್ಟ್ ದೊಡ್ಡ ಶಾಕ್ ನೀಡಿದೆ, ಪಟಾಕಿಗಳನ್ನು ನಿಷೇಧಿಸುವ ಸುಪ್ರೀಂ ಕೋರ್ಟ್ ನ ನಿಯಮ ಈಗಾಗಲೇ ಬಹಳಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದೆ, ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ, ದೀಪಾವಳಿ ಅಂದರೆ ನಮಗೆ ನೆನಪಾಗುವುದು ಆನೆ ಪಟಾಕಿ, ಲಕ್ಷ್ಮಿ ಪಟಾಕಿ, ಬಾಂಬ್, ೧೦೦ ವಾಲಾ, ೧೦೦೦ ವಾಲಾ,ಸುರು ಸುರು ಬತ್ತಿ, ಮತಾಪು, ಸೆವೆನ್ ಶಾಟ್ಸ ಹಾಗೂ ಇತರ ಪಟಾಕಿ ಗಳು, ದೀಪಾವಳಿ ಹಾಗೂ ಬಾಲ್ಯದ ನಡುವಿನ ಸಂಬಂಧ ಅದ್ಭುತವಾದದ್ದು, ಅಪ್ಪನ ನೆರವಿನಿಂದಲೋ, ಮಾವನ ನೆರವಿನಿಂದಲೋ, ಸ್ನೇಹಿತನ ನೆರವಿನಿಂದಲೋ ಪಟಾಕಿ ಹೊಡೆದಿದ್ದ ದಿನಗಳನ್ನು ಹೇಗೆ ತಾನೆ ಮರೆಯಲು ಸಾಧ್ಯ, ಪಟಾಕಿ ಪೆಟ್ಟಿಗೆಗಾಗಿ ಅಪ್ಪನೊಂದಿಗೆ ಹಾಗೂ ತಾತನೊಂದಿಗೆ ಕಚ್ಚಾಡಿದ ಕ್ಷಣಗಳು ನೆನಪಿನ ಪುಟದಿಂದ ದೂರ ಸರಿಯಲಾರದಂತದ್ದು, ಪಕ್ಕದ ಮನೆಯ ಸ್ನೇಹಿತ ಹೆಚ್ಚು ಪಟಾಕಿ ಹೊಡೆಯುತಿರುವುದನ್ನು ಕಂಡು ಹೊಟ್ಟೆ ಉರಿದುಕೊಂಡವರ ಪಟ್ಟಿ ಏನು ಕಡಿಮೆಯೇ ?? ದೀಪಾವಳಿ ಹಬ್ಬ ಬಂತೆಂದರೆ ಮನೆ ಮಂದಿಗಳೆಲ್ಲ ಒಟ್ಟಾಗಿ ಸೇರುತ್ತಿದ್ದರು, ಅಭ್ಯಂಜನ ಸ್ನಾನ ( ಎಣ್ಣೆ ಸ್ನಾನ ) ದೊಂದಿಗೆ ಹಬ್ಬ ಆರಂಭವಾಗುತ್ತಿತ್ತು ,ದೀಪಾವಳಿಗೆಂದೇ ತಯಾರಿಸಿದ್ದ ವಿವಿಧ ರೀತಿಯ ಸಿಹಿ ಖಾದ್ಯಗಳು ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುತ್ತಿತ್ತು,ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟಾಕಿ ಗಳು ಮನೆಯಲಿರುತ್ತಿದ್ದ ಕಾರಣ ಪಟಾಕಿಗಳನ್ನು ಹಬ್ಬದ ಮೊದಲೇ ಹೊಡೆಯಬೇಕೆಂಬ ಇರಾದೆ ಚಿಕ್ಕ ಮಕ್ಕಳ ಮನದಲ್ಲಿರುತ್ತಿತ್ತು, ಅಲ್ಪ ಸ್ವಲ್ಪ ಮೊತ್ತದ ಪಟಾಕಿಗಳು ಮೊದಲೇ ಖಾಲಿಯಾಗುವುದಕ್ಕೆ ಇದೇ ಕಾರಣ, ಕಣ್ಣಿನ ಮುಂದೆ ರುಚಿಕರ ತಿಂಡಿ ತಿನಿಸುಗಳಿರುವಾಗ ನಮ್ಮ ಮನಸ್ಸು ಹೇಗೆ ಅದರೆಡೆಗೆ ಸೆಳೆಯಲ್ಪಡುತ್ತದೆಯೋ ಹಾಗೆ ಪಟಾಕಿಗಳೆಡೆಗೂ ವಾಲುತ್ತಿತ್ತು, ಯಾವ ಚಿಂತೆಯೂ ಇಲ್ಲದ ಚಿಕ್ಕ ವಯಸ್ಸಿನಲ್ಲಿ ಎಲ್ಲರೊಡನೆ ಸೇರಿ ಪಟಾಕಿ ಹೊಡೆಯುವುದು ನಿಜಕ್ಕೂ ಮನಸ್ಸಿಗೆ ಹಿಡಿಸಿದ ವಿಷಯವೇ ಆಗಿತ್ತು, ಹೆಣ್ಣು ಮಕ್ಕಳು ಚಿಕ್ಕ ಚಿಕ್ಕ ಪಟಾಕಿ ಹೊಡೆಯುವುದರಲ್ಲಿ ನಿರತವಾಗಿದ್ದರೆ ಗಂಡು ಮಕ್ಕಳು ಭಯವಿಲ್ಲದೆ ದೊಡ್ಡ ದೊಡ್ಡ ಪಟಾಕಿ ಹೊಡೆಯುವ ಸಾಹಸಕ್ಕೆ ಕೈ ಹಾಕುತ್ತಿದ್ದರು,ಹಿರಿಯರ ಮಾರ್ಗದರ್ಶನದಲ್ಲಿ ಆಚರಿಸಲಾಗುತ್ತಿದ್ದ ದೀಪಾವಳಿ ಹಬ್ಬ ಸುರಕ್ಷಿತವಾಗಿರುತ್ತಿತ್ತು. ಚಿಕ್ಕ ವಯಸ್ಸಿನಲ್ಲಿ ಪಟಾಕಿ ಹೊಡೆದು ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತಿದ್ದ ಎಷ್ಟೋ ಮಂದಿ ತಾರುಣ್ಯಾವಸ್ಥೆಯ ನಂತರ ಪಟಾಕಿ ಹೊಡೆಯುವ ಪದ್ದತಿಗೆ ತಿಲಾಂಜಲಿ ನೀಡಿರುವ ಉದಾಹರಣೆಗಳು ಸಾಕಷ್ಟಿವೆ, ತನ್ನಲೇ ಆದ ಬದಲಾವಣೆಯ ಕಾರಣ ಪಟಾಕಿ ಹೊಡೆಯುವುದನ್ನು ನಿಲ್ಲಿಸಿದರೆಂದರೆ ಅದು ಅವರವರಿಗೆ ಬಿಟ್ಟಿದ್ದು. 

ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಆಚರಿಸುವ ಹಬ್ಬಗಳ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗುತ್ತಿದೆ, ಕೆಲ ದಿನಗಳ ಹಿಂದಷ್ಟೆ ಮಮತಾ ಬ್ಯಾನರ್ಜಿ ಆಡಳಿತದ ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಸಮಯದಲ್ಲಿ ಕಾಳಿ ಮೂರ್ತಿ ವಿಸರ್ಜನೆ ಗೆ ನಿರ್ಬಂಧ ಹೇರಲಾಗಿತ್ತು,ಮಮತ ಬ್ಯಾನರ್ಜಿ ಸರ್ಕಾರದ ಸರ್ವಾಧಿಕಾರಿ  ಧೋರಣೆಗೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು,ಈ ಪ್ರಕರಣದ ಮಧ್ಯ ಪ್ರವೇಶಿಸಿದ ಸರ್ವೋಚ್ಚ ನ್ಯಾಯಾಲಯ ಹಿಂದೂಗಳ ಪರ ತೀರ್ಪು ನೀಡಿ ಮೂರ್ತಿ ವಿಸರ್ಜನೆಗೆ ಅನುವು ಮಾಡಿಕೊಟ್ಟಿತ್ತು, ಹಿಂದೂಗಳ ಹಬ್ಬಗಳಲ್ಲಿ ಮೂಗು ತೋರಿಸುವ ಮಮತಾ ಬ್ಯಾನರ್ಜಿ ಅವರು ಇತರ ಧರ್ಮಗಳ ವಿರುದ್ಧ ತುಟಿ ಪಿಟಿಕ್ ಎನ್ನಲಾರರು,ಇತರ ಧರ್ಮದವರಿಗೆ ಹಬ್ಬ ಆಚರಿಸಲು ಇರುವ ಸ್ವಾತಂತ್ರ್ಯ ನಮ್ಮ ಧರ್ಮದವರಿಗೇಕಿಲ್ಲ ??  ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ಮಾತ್ರ ರಾಜಕಾರಣಿಗಳ ಪರಮೋಚ್ಚ ಕೆಲಸವೇ ?? ಶ್ರೀ  ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಹೊಡೆಯುವ ಆಚರಣೆ ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ, ಕಳೆದ ವರ್ಷ ಇದರ ಆಚರಣೆಗೂ ಸಹ ಮೂಗುದಾರ ಹಾಕಲಾಯಿತು,ಗಣೇಶ ವಿಸರ್ಜನೆಯ ವೇಳೆ ಹೆಚ್ಚು ಜನ ಸೇರುವುದಕ್ಕೂ ವಿರೋಧ ವ್ಯಕ್ತವಾಗುತ್ತದೆ, ಹೀಗೆ ಒಂದಾದ ಮೇಲೊಂದರಂತೆ ಹಿಂದೂ ಹಬ್ಬಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ, ಹಿಂದೂಗಳನ್ನೂ ಪರಮ ಸಹಿಷ್ಣುಗಳೆಂದು ಇಲ್ಲಷ್ಟೆ ???

ಕ್ರಿಕೆಟ್ ಪಂದ್ಯದಲ್ಲಿ ಗೆದ್ದಾಗ, ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದಾಗ, ಹೊಸ ವರ್ಷದ ಆಚರಣೆಯ ಸಮಯದಲ್ಲಿ ವಿಶ್ವದಾದ್ಯಂತ ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತದೆ, ಈ ಎಲ್ಲ ಸಮಯಗಳಲ್ಲಿಯೂ ಸಮಾಧಾನವಾಗಿರುವ ವ್ಯಕ್ತಿಗಳು ದೀಪಾವಳಿ ಬಂದಾಗ ಮಾತ್ರ ಎಚ್ಚರವಾಗುತ್ತಾರೆ, ದೀಪಾವಳಿಯಲ್ಲಿ ಮಾತ್ರ ಪಟಾಕಿ ಹೊಡೆಯಬಾರದಂತೆ!!!! 


 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???