ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???
ಕಳೆದ ಕೆಲ ತಿಂಗಳಿಂದ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಚಲನಚಿತ್ರ ಶುರುವಾಗುವ ಮುನ್ನ ಪ್ರಸಾರ ಮಾಡಲಾಗುತ್ತಿದೆ, ರಾಷ್ಟ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಎದ್ದು ನಿಲ್ಲಬೇಕೆ ಎಂಬ ಚರ್ಚೆ ಕೂಡ ಬಹಳಷ್ಟು ಸಮಯದಿಂದ ನಡೆಯುತ್ತಿದೆ, ನಾಲ್ಕು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಈ ಕುರಿತಾಗಿ ಮಹತ್ವವಾದ ತೀರ್ಪೊಂದನ್ನು ನೀಡಿತು, ಆ ತೀರ್ಪು ಏನೆಂದರೆ ರಾಷ್ಟ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಎದ್ದು ನಿಲ್ಲಬೇಕೆಂಬೆದು ಕಡ್ಡಾಯವೇನಲ್ಲ, ಅವರವರ ಇಷ್ಟಕ್ಕೆ ಬಿಟ್ಟಿದ್ದು !! ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ವ್ಯಕ್ತಿ ಕುಳಿತ್ತಿದ್ದರೆ ಆ ವ್ಯಕ್ತಿಗೆ ರಾಷ್ಟಪ್ರೇಮವಿಲ್ಲ ಎಂಬ ಗ್ರಹಿಕೆ ತಪ್ಪು ಎನ್ನುವುದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಂಬೋಣ,ಈ ತೀರ್ಪು ಹೊರಬಂದ ಕೂಡಲೇ ಪರ ಹಾಗೂ ವಿರೋಧಗಳು ವ್ಯಕ್ತವಾದವು,ದೇಶಪ್ರೇಮದ ಕಥಾ ಹಂದರವುಳ್ಳ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಕಮಲ್ ಹಾಸನ್ ಈ ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸುತ್ತಾ " ಸುಪ್ರೀಂ ಕೋರ್ಟ್ ನ ತೀರ್ಮಾನವನ್ನು ಸ್ವಾಗತಿಸುತ್ತೇನೆ, ಸಿಂಗಾಪುರ್ ಅಲ್ಲಿ ರಾತ್ರಿಯ ವೇಳೆ ರಾಷ್ಟ್ರಗೀತೆ ಪ್ರಸಾರ ಮಾಡಲಾಗುತ್ತದೆ,ನಮ್ಮ ರಾಷ್ಟ್ರ ಗೀತೆಯನ್ನು ಸಹ ದೂರದರ್ಶನದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಪ್ರಸಾರ ಮಾಡಲಿ,ನನ್ನ ದೇಶಭಕ್ತಿಯನ್ನು ವಿವಿಧ ಸ್ಥಳಗಳಲ್ಲಿ ಹಾಗೂ ವಿವಿಧ ವೇಳೆಗಳಲ್ಲಿ ಪರೀಕ್ಷಿಸಬೇಡಿ " ಎಂದರು, ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ಗೌರವ ಸೂಚಿಸಲಾಗದ ವ್ಯಕ್ತಿ ರಾತ್ರಿಯ ಸಮಯದಲ್ಲಿ ರಾಷ್ಟ್ರಗೀತೆಗೆ ಗೌರವ ಸೂಚಿಸುವ ಕಥೆಯನ್ನು ನಂಬಬೇಕೋ ಬೇಡವೋ ಎಂಬ ವಿಚಾರ ನಿಮಗೆ ಬಿಟ್ಟಿದ್ದು !! ಚಲನಚಿತ್ರ ಮಂದಿರಗಳಲ್ಲಿ ಟಿಕೆಟ್ ಗಾಗಿ ಗಂಟೆಗಟ್ಟಲೆ ಕಾಯುವವರಿದ್ದಾರೆ, ಪಾಪ್ ಕಾರ್ನ್ ತಿನ್ನಲು ಕಾಯುವವರಿದ್ದಾರೆ, ಇದರ ಬಗ್ಗೆ ಇವರ್ಯಾರು ಚಕಾರವೆತ್ತುವುದಿಲ್ಲ, ನಮ್ಮ ದೇಶದ ಹೆಮ್ಮೆಯ ಸಂಕೇತವಾದ ರಾಷ್ಟ್ರಗೀತೆಯ ಬಗ್ಗೆ ಮಾತ್ರ ಮಾತನಾಡುತ್ತಾರೆ, ಈ ಮಹಾನ್ ನಟನ ಹೇಳಿಕೆ ಗಮನಿಸಿದರೆ ದೇಶಭಕ್ತಿ ಎಂಬುದು ಚಲನಚಿತ್ರದಲ್ಲಿನ ಪಾತ್ರಕ್ಕೆ ಮಾತ್ರ ಸೀಮಿತವಾ ಎಂದೆನಿಸದಿರದು. ಇನ್ನು ಕೆಲವರು ಚಲನಚಿತ್ರ ಮಂದಿರಗಳಲ್ಲೇಕೆ ರಾಷ್ಟ್ರ ಗೀತೆ ಪ್ರಸಾರ ಮಾಡಬೇಕು ಎಂದು ಕೇಳುತ್ತಿದ್ದಾರೆ?? ಪ್ರಶ್ನೆ ಚಲನಚಿತ್ರ ಮಂದಿರದ ಬಗ್ಗೆ ಆಗಿರದೆ ರಾಷ್ಟ್ರ ಗೀತೆಯ ಬಗ್ಗೆ ಆಗಿರಬೇಕು,ರಾಷ್ಟಗೀತೆ ಪ್ರಸಾರವಾಗುತ್ತಿರುವಾಗ ಪ್ರತಿಯೊಬ್ಬ ಭಾರತೀಯನು ಎದ್ದು ನಿಂತು ಗೌರವಿಸಬೇಕು,ಶಾಲೆಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಒಲಿಂಪಿಕ್ ವೇಳೆಯಲ್ಲಿ & ಪಂದ್ಯ ನಡೆಯುವ ವೇಳೆಯಲ್ಲಿ ಸಹ ರಾಷ್ಟ್ರ ಗೀತೆ ಪ್ರಸಾರವಾಗುವ ಸಮಯದಲ್ಲಿ ಗೌರವಸೂಚಕವಾಗಿ ಎದ್ದು ನಿಲ್ಲುವ ಸಂಪ್ರದಾಯ ಮೊದಲಿನಿಂದಲೂ ನಡೆದುಬಂದಿದೆ, ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಇಲ್ಲ ಸಲ್ಲದ ವಿಷಯಗಳಲ್ಲಿಯೂ ಸಹ ಸ್ವತಂತ್ರ ಬೇಕೆಂದು ಕಿರುಚಾಡುವ ಗುಂಪೊಂದು ನಿರ್ಮಾಣವಾಗಿಬಿಟ್ಟಿದೆ !!
ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಈ ತೀರ್ಪಿನ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸುತ್ತ ಮಾಲ್ ಗಳಲ್ಲಿ ಶಾಪಿಂಗ್ ಸಮಯದಲ್ಲಿ ನಿಮಿಷಗಳ ಕಾಲ ನಿಲ್ಲುವವರು ರಾಷ್ಟ್ರಗೀತೆ ಪ್ರಸಾರವಾಗುವಾಗ ೫೨ ಸೆಕೆಂಡ್ ಗಳ ಕಾಲ ನಿಲ್ಲಲಾರರೇ ಎಂದಿದ್ದಾರೆ, ಪಾಕಿಸ್ತಾನಿ ಮೂಲದ ಗಾಯಕ ಅದ್ನಾನ್ ಸಮಿ ಕೂಡ ರಾಷ್ಟ್ರಗೀತೆಗೆ ಗೌರವ ಸಲ್ಲಬೇಕು ಎಂದಿರುವುದು ಖುಷಿಯ ಸಂಗತಿ,ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಲ್ಲಬೇಕೆಂಬ ಸೂಕ್ಷ್ಮ ಪ್ರಜ್ಞೆ ಬಹುತೇಕ ಭಾರತೀಯರಲ್ಲಿ ಅಡಗಿದೆ, ಅಲ್ಲೋ ಇಲ್ಲೋ ಇದನ್ನು ವಿರೋಧಿಸುವ ಕೆಲವೇ ಕೆಲವು ಮಂದಿಗಳಿಂದ ಇದರ ಕುರಿತಾಗಿ ತಪ್ಪು ಅಭಿಪ್ರಾಯ ಜನಮಾನಸದಲ್ಲಿ ಮೂಡುತ್ತಿದೆ, ದಿನದ ೨೪ ತಾಸು ಗಡಿ ಕಾಯುವ ಯೋಧ ನಮ್ಮ ರಾಷ್ಟ್ರ ಗೀತೆಯನ್ನು ಗೌರವಿಸುವಾಗ ದೇಶದ ಒಳಗಿರುವ ಜನ ಸಾಮಾನ್ಯರೇಕೆ ರಾಷ್ಟ್ರಗೀತೆಯನ್ನು ಗೌರವಿಸಲಾರರು??

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ