ಪದ್ಮಾವತಿ ಚಿತ್ರದ ವಿವಾದದಿಂದ ಲಾಭ ಪಡೆಯುತ್ತಿರುವವರು ಯಾರು ??
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗೂ ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಪದ್ಮಾವತಿ ಚಿತ್ರ ಚಿತ್ರೀಕರಣ ಆರಂಭಗೊಂಡ ಮೊದಲ ದಿನದಿಂದಲೂ ಒಂದಿಲ್ಲೊಂದು ವಿವಾದಕ್ಕೆ ತುತ್ತಾಗುತ್ತಿದೆ, ಚಿತ್ರೀಕರಣದ ವೇಳೆ ಕರ್ಣಿ ಸೇನೆಯ ಕಾರ್ಯಕರ್ತರು ಚಿತ್ರತಂಡದ ಮೇಲೆ ದಾಳಿ ನೆಡೆಸಿದ್ದು ಹಾಗೂ ಸೆಟ್ ಅನ್ನು ಧ್ವಂಸ ಗೊಳಿಸಿದ್ದು ಭಾರಿ ಸುದ್ದಿ ಆಗಿತ್ತು, ಭಾರತೀಯ ಇತಿಹಾಸದಲ್ಲಿ ರಾಣಿ ಪದ್ಮಾವತಿಗೆ ತನ್ನದೇ ಆದ ಗೌರವಯುತ ಹಾಗು ಪೂಜನೀಯ ಸ್ಥಾನವಿದೆ, ತ್ಯಾಗದ ಸಂಕೇತವೇ ಆದ ಪದ್ಮಾವತಿಯನ್ನು ಗೌರವಿಸುವುದು ಈ ಮಣ್ಣಿನಲ್ಲಿ ಹುಟ್ಟಿದ ಭಾರತೀಯರ ಆದ್ಯ ಕರ್ತವ್ಯವೆಂದು ಭಾವಿಸಿದರೆ ತಪ್ಪಾಗಲಾರದು,ಇತಿಹಾಸದಲ್ಲಿ ಹಾಗೂ ಜನಮಾನಸದಲ್ಲಿ ಅಚ್ಚಾಗಿ ಉಳಿದಿರುವ ರಾಣಿ ಪದ್ಮಾವತಿಯ ಕುರಿತಾಗಿ ಚಿತ್ರ ನಿರ್ಮಿಸಬೇಕಾದರೆ ಇತಿಹಾಸದ ಜ್ಞಾನವಿರಬೇಕು ಹಾಗೂ ರಾಣಿ ಪದ್ಮಾವತಿಯ ನೈಜ ಕಥೆಯನ್ನಷ್ಟೇ ತೆರೆಯ ಮೇಲೆ ತೋರಿಸಬೇಕು, ಚಲನಚಿತ್ರ ಎಂಬುದು ವಾಣಿಜ್ಯಾತ್ಮಕ ದೃಷ್ಟಿಕೋನವನ್ನು ಹೊಂದಿದ್ದರೂ ಸಹ ಈ ರೀತಿಯ ಚಿತ್ರಗಳನ್ನು ನಿರ್ಮಿಸುವಾಗ ವಿಶಿಷ್ಟ ಕಾಳಜಿ ಇರಬೇಕು ಹಾಗು ಚಿತ್ರದಿಂದ ಯಾರ ಮನಸ್ಸಿಗೂ ನೋವಾಗದಂತೆ ಚಿತ್ರಿಸಬೇಕು, ಪದ್ಮಾವತಿ ಚಿತ್ರದ ಪೋಸ್ಟರ್ ಹಾಗೂ ಒಂದು ಹಾಡು ಬಹುತೇಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಂತೂ ಸತ್ಯ, ರಾಣಿ ಪದ್ಮಾವತಿ ಪಾ...