ಪದ್ಮಾವತಿ ಚಿತ್ರದ ವಿವಾದದಿಂದ ಲಾಭ ಪಡೆಯುತ್ತಿರುವವರು ಯಾರು ??
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗೂ ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಪದ್ಮಾವತಿ ಚಿತ್ರ ಚಿತ್ರೀಕರಣ ಆರಂಭಗೊಂಡ ಮೊದಲ ದಿನದಿಂದಲೂ ಒಂದಿಲ್ಲೊಂದು ವಿವಾದಕ್ಕೆ ತುತ್ತಾಗುತ್ತಿದೆ, ಚಿತ್ರೀಕರಣದ ವೇಳೆ ಕರ್ಣಿ ಸೇನೆಯ ಕಾರ್ಯಕರ್ತರು ಚಿತ್ರತಂಡದ ಮೇಲೆ ದಾಳಿ ನೆಡೆಸಿದ್ದು ಹಾಗೂ ಸೆಟ್ ಅನ್ನು ಧ್ವಂಸ ಗೊಳಿಸಿದ್ದು ಭಾರಿ ಸುದ್ದಿ ಆಗಿತ್ತು, ಭಾರತೀಯ ಇತಿಹಾಸದಲ್ಲಿ ರಾಣಿ ಪದ್ಮಾವತಿಗೆ ತನ್ನದೇ ಆದ ಗೌರವಯುತ ಹಾಗು ಪೂಜನೀಯ ಸ್ಥಾನವಿದೆ, ತ್ಯಾಗದ ಸಂಕೇತವೇ ಆದ ಪದ್ಮಾವತಿಯನ್ನು ಗೌರವಿಸುವುದು ಈ ಮಣ್ಣಿನಲ್ಲಿ ಹುಟ್ಟಿದ ಭಾರತೀಯರ ಆದ್ಯ ಕರ್ತವ್ಯವೆಂದು ಭಾವಿಸಿದರೆ ತಪ್ಪಾಗಲಾರದು,ಇತಿಹಾಸದಲ್ಲಿ ಹಾಗೂ ಜನಮಾನಸದಲ್ಲಿ ಅಚ್ಚಾಗಿ ಉಳಿದಿರುವ ರಾಣಿ ಪದ್ಮಾವತಿಯ ಕುರಿತಾಗಿ ಚಿತ್ರ ನಿರ್ಮಿಸಬೇಕಾದರೆ ಇತಿಹಾಸದ ಜ್ಞಾನವಿರಬೇಕು ಹಾಗೂ ರಾಣಿ ಪದ್ಮಾವತಿಯ ನೈಜ ಕಥೆಯನ್ನಷ್ಟೇ ತೆರೆಯ ಮೇಲೆ ತೋರಿಸಬೇಕು, ಚಲನಚಿತ್ರ ಎಂಬುದು ವಾಣಿಜ್ಯಾತ್ಮಕ ದೃಷ್ಟಿಕೋನವನ್ನು ಹೊಂದಿದ್ದರೂ ಸಹ ಈ ರೀತಿಯ ಚಿತ್ರಗಳನ್ನು ನಿರ್ಮಿಸುವಾಗ ವಿಶಿಷ್ಟ ಕಾಳಜಿ ಇರಬೇಕು ಹಾಗು ಚಿತ್ರದಿಂದ ಯಾರ ಮನಸ್ಸಿಗೂ ನೋವಾಗದಂತೆ ಚಿತ್ರಿಸಬೇಕು, ಪದ್ಮಾವತಿ ಚಿತ್ರದ ಪೋಸ್ಟರ್ ಹಾಗೂ ಒಂದು ಹಾಡು ಬಹುತೇಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಂತೂ ಸತ್ಯ, ರಾಣಿ ಪದ್ಮಾವತಿ ಪಾತ್ರಧಾರಿ ದೀಪಿಕಾ ಪಡುಕೋಣೆ ಹಾಡೊಂದರಲ್ಲಿ ಕವಾಲಿ ಹಾಡಿಗೆ ನೃತ್ಯ ಮಾಡುತ್ತಿರುವುದು ಬಹುತೇಕರ ಟೀಕೆಗೆ ಗುರಿಯಾಗಿದೆ, ಮನರಂಜನೆಯ ಭರದಲ್ಲಿ ಸಂಜಯ್ ಲೀಲಾ ಬನ್ಸಾಲಿ ಇತಿಹಾಸವನ್ನು ತಿರುಚಿದರೆ ಎಂಬ ಪ್ರಶ್ನೆ ಮನಸಿನಲ್ಲಿ ಮೂಡುತ್ತದೆ ??
ಸ್ವತಃ ರಾಜಸ್ಥಾನದ ರಾಜ ವಂಶಸ್ಥರು ಹಾಗೂ ರಾಜಸ್ಥಾನಿಗಳು ಚಿತ್ರವನ್ನು ವಿರೋಧಿಸುತ್ತಿದ್ದಾರೆ, ಪದ್ಮಾವತಿ ಅಂತಹ ಚಿತ್ರವನ್ನು ನಿರ್ಮಿಸಿರುವ ಸಂಜಯ್ ಲೀಲಾ ಬನ್ಸಾಲಿ ಅವರ್ಯಾರಿಗೂ ಚಿತ್ರದ ಬಗ್ಗೆ ಸಮಜಾಯಿಷಿ ನೀಡಿಲ್ಲದಿರುವುದು ದುಃಖಕರ ಸಂಗತಿ, ಇನ್ನೂ ದೀಪಿಕಾ ಪಡುಕೋಣೆಯನ್ನು ಕೊಂದವರಿಗೆ ಕೋಟಿಗಟ್ಟಲೆ ಬಹುಮಾನವನ್ನು ಘೋಷಿಸಿರುವವರ ಕುರಿತು ಪರ ವಿರೋಧದ ಚರ್ಚೆ ನೆಡೆಯುತ್ತಿದೆ, ಇದೆ ಚಿತ್ರ ಮುಸ್ಲಿಂ ಅಥವಾ ಕ್ರೈಸ್ತ ಧರ್ಮದ ಕುರಿತಾಗಿದ್ದರೆ ಇಲ್ಲಿಯವರೆಗೂ ಎಷ್ಟೊಂದು ಹಿಂಸಾತ್ಮಕ ಕೃತ್ಯ ನೆಡೆದಿರುತ್ತಿತ್ತೋ ?? ಚಿತ್ರದ ವಿರುದ್ಧ ಬಹುಸಂಖ್ಯಾತರು ಪ್ರತಿಭಟಿಸುತ್ತಿರುವುದು ಸೆಕ್ಯುಲರ್ ಗಳಿಗೆ ಸರಿತೋರುತ್ತಿಲ್ಲವೆಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಮಧ್ಯ ಪ್ರದೇಶದ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ , ಪಂಜಾಬ್ ಮುಖ್ಯ ಮಂತ್ರಿ ಕ್ಯಾಪ್ಟನ್ ಅಮರಿಂದೆರ್ ಸಿಂಗ್ ಈ ಕುರಿತಾಗಿ ಪ್ರತಿಕ್ರಿಯುಸುತ್ತಾ 'ಇತಿಹಾಸ ತಿರುಚುವುಂತಹ ಚಿತ್ರಗಳಿಗೆ ನಮ್ಮ ವಿರೋಧವಿದೆ' ಎಂದಿದ್ದಾರೆ, ಇತೀಚೆಗಷ್ಟೇ ತಮಿಳಿನಲ್ಲಿ ಮೆರಸಲ್ ಎಂಬ ಚಿತ್ರ ಬಿಡುಗಡೆ ಆಗಿತ್ತು, ಚಿತ್ರದ ಬಗ್ಗೆ ತಮಿಳುನಾಡಿನ ರಾಜಕೀಯ ಪಕ್ಷದ ಮುಖಂಡರು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು, ಈ ವಿವಾದದಿಂದಲೇ ಚಿತ್ರಕ್ಕೆ ಪುಕ್ಕಟ್ಟೆ ಪ್ರಚಾರ ಸಿಕ್ಕಿತ್ತು !! ಈಗ ಪದ್ಮಾವತಿ ಚಿತ್ರದ ಸರದಿ, ನಾನಾ ವಿವಾದಗಳ ಗೂಡಾಗಿರುವ ಪದ್ಮಾವತಿ ಚಿತ್ರಕ್ಕೆ ಎಲ್ಲೆಡೆ ಪುಕ್ಕಟ್ಟೆ ಪ್ರಚಾರ ಸಿಗುತ್ತಿದೆ, ಒಂದು ವಾರದಿಂದ ಎಲ್ಲ ಸುದ್ಧಿ ವಾಹಿನಿಗಳು ಹಾಗೂ ಪತ್ರಿಕೆಗಳು ಇದರ ಕುರಿತಾಗಿ ಸಾಕಷ್ಟು ಸುದ್ದಿಗಳನ್ನು ಬಿತ್ತರಿಸುತ್ತಿರುವುದು ಚಿತ್ರಕ್ಕೆ ಅಪರೋಕ್ಷವಾಗಿ ಪ್ರಚಾರ ಗಿಟ್ಟಿಸಿಕೊಡುತ್ತಿದೆ, ಕನ್ನಡದ ವರನಟ ಡಾ ರಾಜಕುಮಾರ್ ಅವರು ಸಹ ಪೌರಾಣಿಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದವರು, ಅವರು ಅಭಿನಯಿಸಿದ ಎಷ್ಟೋ ಚಿತ್ರಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ, ಇತಿಹಾಸ ತಿರುಚದೆ ಜನಮಾನಸ ಗೆದ್ದಿದ್ದ ಅಣ್ಣಾವ್ರಿಂದ ಬಾಲಿವುಡ್ ಮಂದಿ ಕಲಿಯುವುದು ಸಾಕಷ್ಟಿದೆ, ಚಿತ್ರದ ನಿರ್ದೇಶಕ ಅಥವಾ ನಾಯಕ/ನಾಯಕಿಯ ಪಾತ್ರ ಕ್ಷಣಿಕ,ತ್ಯಾಗದ ಪ್ರತೀಕವಾದ ರಾಣಿ ಪದ್ಮಾವತಿ ಎಂದೆಂದಿಗೂ ಅಮರ ..

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ