ಪೋಸ್ಟ್‌ಗಳು

ಡಿಸೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪರಾಧಿಗಳಿಗೆ ರಕ್ಷೆ, ನಿರಪರಾಧಿಗಳಿಗೆ ಶಿಕ್ಷೆ, ನ್ಯಾಯ ಎಲ್ಲಿದೆ ?

ಇಮೇಜ್
              ೨ಜಿ ಹಗರಣದ ಅಂತಿಮ ತೀರ್ಪು ನೆನ್ನೆಯಷ್ಟೇ ಹೊರಬಿದ್ದಿದ್ದು ಹಗರಣದಲ್ಲಿ ಭಾಗಿಯಾಗಿದ್ದ ೧೭ ಮಂದಿಗಳು ಸಾಕ್ಷಾಧಾರದ ಕೊರತೆಯ ಫಲವಾಗಿ ದೋಷಮುಕ್ತರಾಗಿದ್ದಾರೆ,೨ಜಿ ಹಗರಣದಿಂದ ದೇಶದ ಬೊಕ್ಕಸಕ್ಕೆ ೧.೭೬ ಲಕ್ಷ ಕೋಟಿ ನಷ್ಟವಾಗಿತ್ತೆಂಬ ಸತ್ಯಾಂಶ ಚಿಕ್ಕ ಪುಟ್ಟ ಮಕ್ಕಳಿಗೂ ಸಹ ಗೊತ್ತಿತ್ತು! ಅಂದಿನ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಸಮಯದಲ್ಲಿ ಎ ರಾಜ ಟೆಲಿಕಾಂ ಸಚಿವರಾಗಿದ್ದರು,೨ಜಿ ತರಂಗ ಗುಚ್ಛಗಳ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮಾಯವಾಗಿ ಭ್ರಷ್ಟಾಚಾರ ತಾಂಡವವಾಡಿತ್ತು,ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಹುತೇಕ ಕಂಪನಿಗಳು ಸರ್ಕಾರದ ನೀತಿ ನಿಯಮಗಳನ್ನೆಲ್ಲಾ ಮುರಿದಿದ್ದವು,ಅನರ್ಹ ಸಂಸ್ಥೆಗಳಿಗೆ ಸಹಾಯ ಮಾಡಿದ ರಾಜ ಹಾಗೂ ಅವರ ತಂಡ ತನಗಿಷ್ಟ ಬಂದಂತೆ ಲೈಸನ್ಸ್ ನೀಡಿತ್ತು, ಮೊದಲು ಬಂದವರಿಗೆ ಮೊದಲ ಆದ್ಯತೆ ಹಾಗೂ ನ್ಯಾಯ ಸಮ್ಮತವಾಗಿ ಆಗಬೇಕಿದ್ದ ೨ಜಿ ಹಂಚಿಕೆ ಪ್ರಕ್ರಿಯೆ ಆಗಾಗಲೇ ಹಳ್ಳ ಹಿಡಿದಿತ್ತು, ಈ ಪ್ರಕರಣದ ಕುರಿತಾಗಿ ಸಾಕಷ್ಟು ಅಧ್ಯಯನ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಪ್ರಧಾನಿಗಳಿಗೆ ಈ ಕುರಿತು ಪತ್ರ ಬರೆದಿದ್ದರು ಹಾಗೂ ಪ್ರತಿಕ್ರಿಯೆ ಬರುವುದುದು ತಡವಾದಾಗ ಕೋರ್ಟ್ ಮೆಟ್ಟಿಲೇರಲು ತಯಾರಾಗಿದ್ದರು.ಇದರ ಕುರಿತು ಸಿ ಎ ಜಿ ಕೂಡ ವರದಿಯೊಂದನ್ನು ಸಿದ್ದ ಪಡಿಸಿತ್ತು, ವರದಿಯ ಮೂಲಕ ತಿಳಿದುಬಂದಿದ್ದೇನೆಂದರೆ...