ಮೋದಿಜೀ ಅವರ ಪರೀಕ್ಷಾ ಚರ್ಚೆ ಕಾರ್ಯಕ್ರಮ ಇಂದಿನ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ"
ಇನ್ನೆರಡು ತಿಂಗಳಲ್ಲಿ ದೇಶದ ವಿವಿಧೆಡೆ ಲಕ್ಷಾಂತರ ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ವಾರ್ಷಿಕ ಪರೀಕ್ಷೆಯನ್ನು ಎದುರಿಸಲಿದ್ದಾರೆ, ವಿದ್ಯಾರ್ಥಿಗಳಲ್ಲಿ ಮೂಡಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಿ ಅವರಲ್ಲಿರುವ ಆತ್ಮಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಟ್ಟಿರುವ ಮಾನ್ಯ ಪ್ರಧಾನ ಸೇವಕರು ನಿನ್ನೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ ನು ಉದ್ದೇಶಿಸಿ ಪರೀಕ್ಷೆಯ ಕುರಿತಾಗಿ ಪ್ರೇರಣಾದಾಯಕ ನುಡಿಗಳನ್ನಾಡಿದರು. ತಿಂಗಳುಗಳ ಕಾಲ ಕಷ್ಟ ಪಟ್ಟು ಓಧುವ ವಿದ್ಯಾರ್ಥಿಗಳು ಪರೀಕ್ಷೆಯ ಸಮಯ ಹತ್ತಿರ ಬರುತ್ತಿದ್ದಂತೆ ವಿಚಲಿತರಾಗುವುದು ಸಹಜ,ಶಾಲೆ ಶುರುವಾದಾಗ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಸಮಯ ಸನಿಹವಾಗುತ್ತಿದ್ದಂತೆ ಆಟಗಳಿಗೆ ವಿರಾಮ ಹೇಳಿ ಬಿಡುತ್ತಾರೆ, ಮನುಷ್ಯನ ಜೀವನವು ಪಂಚಭೂತಗಳೊಂದಿಗೆ ವಿಶೇಷವಾದ ಸಂಬಂಧವನ್ನು ಹೊಂದಿದೆ, ಮನೆಯೊಳಗೆ ಸೆಕೆಯಾದಾಗ ಕಿಟಾಗಿ ಬಳಿ ಹೋಗಿ ನಿಂತಾಗ ಮನಸಿಗೆ ಉಲ್ಲಾಸವಾಗುತ್ತದೆ, ಮನೆಯ ಹೊರಗೆಯೋ ಅಥವಾ ಶಾಲಾ ಆವರಣದಲ್ಲೋ ಮಣ್ಣಿನಲ್ಲಿ ಸಹಪಾಠಿಗರೊಂದಿಗೆ ಆಟವಾಡಿದಾಗ ಹೊಸದಾದ ಉತ್ಸಾಹ ಮನಸಿನಲ್ಲಿ ಮೂಡದೆ ಇರದು! ಆಟಕ್ಕಾಗಿ ಮೀಸಲಿಟ್ಟ ಸಮಯದಲ್ಲಿ ಆಟವಾಡಬೇಕು, ಓದುವುದಕ್ಕೆ ಮುಡಿಪಿಟ್ಟ ಸಮಯದಲ್ಲಿ ಓದಬೇಕು,ದಿನ ಆಟವಾಡುವ ವಿದ್ಯಾರ್ಥಿ ಆಟಕ್ಕೆಂದು ಮೀಸಲಾಗಿರುವ ಸಮಯದಲ್ಲಿ ಪರೀಕ್ಷೆ ಸಮಯದಲ್ಲಿಯೂ ಸಹ ಆಟವಾಡಿದರೆ ತಪ್ಪೇನಾಗದು,ಅಭ್...