ಮೋದಿಜೀ ಅವರ ಪರೀಕ್ಷಾ ಚರ್ಚೆ ಕಾರ್ಯಕ್ರಮ ಇಂದಿನ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ"
ಇನ್ನೆರಡು ತಿಂಗಳಲ್ಲಿ ದೇಶದ ವಿವಿಧೆಡೆ ಲಕ್ಷಾಂತರ ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ವಾರ್ಷಿಕ ಪರೀಕ್ಷೆಯನ್ನು ಎದುರಿಸಲಿದ್ದಾರೆ, ವಿದ್ಯಾರ್ಥಿಗಳಲ್ಲಿ ಮೂಡಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಿ ಅವರಲ್ಲಿರುವ ಆತ್ಮಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಟ್ಟಿರುವ ಮಾನ್ಯ ಪ್ರಧಾನ ಸೇವಕರು ನಿನ್ನೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ ನು ಉದ್ದೇಶಿಸಿ ಪರೀಕ್ಷೆಯ ಕುರಿತಾಗಿ ಪ್ರೇರಣಾದಾಯಕ ನುಡಿಗಳನ್ನಾಡಿದರು. ತಿಂಗಳುಗಳ ಕಾಲ ಕಷ್ಟ ಪಟ್ಟು ಓಧುವ ವಿದ್ಯಾರ್ಥಿಗಳು ಪರೀಕ್ಷೆಯ ಸಮಯ ಹತ್ತಿರ ಬರುತ್ತಿದ್ದಂತೆ ವಿಚಲಿತರಾಗುವುದು ಸಹಜ,ಶಾಲೆ ಶುರುವಾದಾಗ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಸಮಯ ಸನಿಹವಾಗುತ್ತಿದ್ದಂತೆ ಆಟಗಳಿಗೆ ವಿರಾಮ ಹೇಳಿ ಬಿಡುತ್ತಾರೆ, ಮನುಷ್ಯನ ಜೀವನವು ಪಂಚಭೂತಗಳೊಂದಿಗೆ ವಿಶೇಷವಾದ ಸಂಬಂಧವನ್ನು ಹೊಂದಿದೆ, ಮನೆಯೊಳಗೆ ಸೆಕೆಯಾದಾಗ ಕಿಟಾಗಿ ಬಳಿ ಹೋಗಿ ನಿಂತಾಗ ಮನಸಿಗೆ ಉಲ್ಲಾಸವಾಗುತ್ತದೆ, ಮನೆಯ ಹೊರಗೆಯೋ ಅಥವಾ ಶಾಲಾ ಆವರಣದಲ್ಲೋ ಮಣ್ಣಿನಲ್ಲಿ ಸಹಪಾಠಿಗರೊಂದಿಗೆ ಆಟವಾಡಿದಾಗ ಹೊಸದಾದ ಉತ್ಸಾಹ ಮನಸಿನಲ್ಲಿ ಮೂಡದೆ ಇರದು! ಆಟಕ್ಕಾಗಿ ಮೀಸಲಿಟ್ಟ ಸಮಯದಲ್ಲಿ ಆಟವಾಡಬೇಕು, ಓದುವುದಕ್ಕೆ ಮುಡಿಪಿಟ್ಟ ಸಮಯದಲ್ಲಿ ಓದಬೇಕು,ದಿನ ಆಟವಾಡುವ ವಿದ್ಯಾರ್ಥಿ ಆಟಕ್ಕೆಂದು ಮೀಸಲಾಗಿರುವ ಸಮಯದಲ್ಲಿ ಪರೀಕ್ಷೆ ಸಮಯದಲ್ಲಿಯೂ ಸಹ ಆಟವಾಡಿದರೆ ತಪ್ಪೇನಾಗದು,ಅಭ್ಯಾಸ ತಪ್ಪಬಾರದಷ್ಟೆ??ನಿರ್ದಿಷ್ಟ ವಿಷಯದ ಕುರಿತಾಗಿ ಮನಸ್ಸನ್ನು ಫೋಕಸ್ ಮಾಡಬೇಕು, ಆ ವಿಷಯದ ಕುರಿತು ಸಮರ್ಪಕ ಅಧ್ಯಯನವಾದ ನಂತರ ಡಿ ಫೋಕಸ್ ಮಾಡುವ ಗುಣವನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಈಗಿನಂದಲೇ ರೂಢಿಸಿಕೊಳ್ಳುವುದು ಉತ್ತಮ, ಈ ಪ್ರಕ್ರಿಯೆ ಪುನರಾವರ್ತಿತವಾಗುವ ಕಾರಣ ವಿದ್ಯಾರ್ಥಿಗಳಲ್ಲಿ ಈ ರೀತಿಯ ಮನೋಭಾವವಿರಬೇಕಾದುದು ಅವಶ್ಯ,.
ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ ವಿದ್ಯಾ
ರ್ಥಿಗಳಲ್ಲಿ ಒತ್ತಡ ಹೆಚ್ಚಾಗುತ್ತದೆ,೭೫ ಅಂಕ ಪಡೆದ ವಿದ್ಯಾರ್ಥಿಗೆ ೮೦ ಅಂಕ ಪಡೆಯಲಿಲ್ಲವೇಕೆಂಬ ಪ್ರಶ್ನೆ,೯೫ ಪ್ರತಿಶತ ಫಲಿತಾಂಶ ಪಡೆದ ಬಾಲಕನಿಗೆ ೯೮ ಪ್ರತಿಶತ ಫಲಿತಾಂಶ? ಈ ಪ್ರಶ್ನೆ ಕೇಳಿದ ವ್ಯಕ್ತಿಗಳ ಬಳಿ ನೀವೆಷ್ಟು ಅಂಕ ಗಳಿಸಿದಿರೆಂದು ಕೇಳಿದರೆ ತಬ್ಬಿಬ್ಬಾಗುತ್ತಾರೆ! ಯೋಗದಿಂದ ಪರೀಕ್ಷಾ ಸಮಯದಲ್ಲಿ ಆಗಬಹುದಾದ ಉಪಯೋಗಗಳ ಕುರಿತು ವಿದ್ಯಾರ್ಥಿಯೊಬ್ಬರು ಮೋದಿ ಅವರ ಬಳಿ ಪ್ರಶ್ನೆ ಕೇಳಿದಾಗ ಮೋದಿ ಉತ್ತರಿಸಿದ್ದು ಹೀಗೆ " ನಿಮಗೆ ಗೊತ್ತಿರುವ ಆಸನವನ್ನು ಅಭ್ಯಾಸ ಮಾಡಿ, ವಿದ್ಯಾರ್ಥಿಗಳು ಉದ್ಧವಾಗಬೇಕೆಂಬ ಉದ್ದೇಶದಿಂದ ತಾಡಾಸನ ಅಭ್ಯಸಿಸುತ್ತಿದ್ದರೆ, ನಿರ್ಧಿಷ್ಟ ಭಂಗಿಯಲ್ಲಿ ಉಂಟಾಗುವ ಕಷ್ಟವನ್ನು ಅನುಭವಿಸುವುದು ಸಹ ಯೋಗವೇ, ಯೋಗವೆಂದರೆ ದೇಹವನ್ನು ಬಾಗಿಸುವುದು ಅಷ್ಟೇ ಅಲ್ಲ. ಗುರು ಹಾಗೂ ಶಿಷ್ಯರ ನಡುವಿನ ಸಂಭಂದ ಅತ್ಯಂತ ಶ್ರೇಷ್ಠವಾದದ್ದು, ಒಬ್ಬ ಗುರು ತನ್ನ ಮಗನ ಯಶಸ್ಸಿಗಿಂತ ಶಿಷ್ಯನ ಯಶಸ್ಸಿಗೆ ಹೆಚ್ಚು ಶ್ರಮಿಸುತ್ತಾನೆ, ಶಿಷ್ಯನ ಏಳ್ಗೆಗೆ ಮುಖ್ಯವಾದ ಕಾರಣ ಗುರು. ಹಿಂದಿನ ದಿನಗಳಲ್ಲಿ ಶಿಕ್ಷಕರು ಹಾಗೂ ಪೋಷಕರ ನಡುವೆ ಉತ್ತಮ ಸಂಭಂದವಿತ್ತು, ಪ್ರತಿ ವಿದ್ಯಾರ್ಥಿಯ ಬಗ್ಗೆಯೂ ಶಿಕ್ಷಕರಿಗೆ ಕಾಳಜಿ ಇರುತಿತ್ತು, ವಿದ್ಯಾರ್ಥಿಗಳ ಅಂಕು ಡೊಂಕು ತಿದ್ದುವಲ್ಲಿ ಪೋಷಕರು ಸಹ ಶಿಕ್ಷಕರಿಗೆ ನೆರವಾಗುತ್ತಿದ್ದರು, ಈಗಿನ ದಿನಗಳಲ್ಲಿ ಶಿಕ್ಷಕರ ಹಾಗು ಪೋಷಕರ ನಡುವಿನ ಸಂಬಂಧ ಮೊದಲಿನಷ್ಟು ಗಟ್ಟಿಯಾಗಿಲ್ಲ, ಮಗನನ್ನು ಥಳಿಸಿದ ಕಾರಣಕ್ಕಾಗಿಯೋ ಅಥವಾ ಗಲಾಟೆಯ ವಿಷಯವಾಗಿಯೋ ಪೋಷಕರು ಶಾಲೆಗೇ ಬರುವಂತಾಗಿದೆ, ಪೋಷಕರ ಹಾಗು ಶಿಕ್ಷಕರ ಸಂಬಂಧ ಗಟ್ಟಿಯಾಗಬೇಕು, ಕೆಲ ವರ್ಷಗಳ ಹಿಂದೆ ಮೋದಿ ಅವರು ಪ್ರತಿಷ್ಠಿತ ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಆ ಶಾಲೆಯ ಶಿಕ್ಷಕರ ಬಳಿ ನಿಮ್ಮ ವಿದ್ಯಾರ್ಥಿಗಳ ಈಗಿನ ಸ್ಥಿತಿಯ ಬಗ್ಗೆ ನಿಮಗೆ ಅರಿವಿದೆಯೇ ಎಂದು ಕೇಳಿದಾಗ ಶಿಕ್ಷಕರಿಂದ ಬಂಡ ಉತ್ತರವೇನೆಂದರೆ "ಇಲ್ಲ "! ವಿದ್ಯಾರ್ಥಿ ಯಶಸ್ಸಿನ ತುತ್ತ ತುದಿಯನೇ ಮುಟ್ಟಿರಬಹುದು ಅಥವಾ ಅಪರಾಧದಿಂದ ಪ್ರಪಾತಕ್ಕೆ ಬಿದ್ದಿರಬಹುದು,ಅದರ ಬಗ್ಗೆ ತಿಳಿದಿರಬೇಕಲ್ಲವೇ? ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಮುಖ್ಯವಾಗಿರುವಂತದ್ದು. ವಿದ್ಯಾರ್ಥಿಗಳು ಓಧುವ ವಿಷಯದಲ್ಲಿ ಇತರರೊಡನೆ ಸ್ಪರ್ಧೆಗೆ ಬೀಳುವುದಕ್ಕಿಂತ ಮುಖ್ಯ ತನ್ನೊಡನೆಯೇ ಸ್ಪರ್ಧೆಗೆ ಇಳಿಯಬೇಕು ಹಾಗು ತನ್ನನ್ನೇ ತಾನು ಪ್ರತಿ ಬಾರಿ ಗೆಲ್ಲಬೇಕು.
ಪರೀಕ್ಷೆ ಭಯದಿಂದ ಪಾರಾಗಲು ಪ್ರಧಾನ ಸೇವಕರು ಹಲವಾರು ಟಿಪ್ಸ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ, ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಸಮಂಜಸ ಉತ್ತರ ನೀಡಿದ್ದಾರೆ, ಪರೀಕ್ಷಾ ಭಯ ದೂರವಾಗಲಿ, ವಿದ್ಯಾರ್ಥಿಗಳು ಪರೀಕ್ಷೆ ಎಂಬ ಯುದ್ಧ ಜಯಿಸಲಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ