ಇಂದು ಸರ್ಕಾರ್ ಚಿತ್ರದ ಬಿಡುಗಡೆಗೆ ಇಷ್ಟೊಂದು ವಿರೋಧವೇಕೆ??
ಇಂದು ಸರ್ಕಾರ್ ಚಿತ್ರದ ಬಿಡುಗಡೆಗೆ ಇಷ್ಟೊಂದು ವಿರೋಧವೇಕೆ?? ಘಟನೆ ೧: ಕೆಲ ತಿಂಗಳುಗಳ ಹಿಂದೆ ಜೈಪುರದಲ್ಲಿ ಸಂಜಯ್ ಲೀಲಾ ಬನ್ಸಾಲಿ ಹಾಗೂ ಪದ್ಮಾವತಿ ಚಿತ್ರದ ತಂಡದ ಮೇಲೆ ರಜಪೂತರ ಕಾರ್ನಿ ಸೇನೆಯ ಕಾರ್ಯಕರ್ತರು ದಾಳಿ ನೆಡೆಸಿದ್ದರು, ಪದ್ಮಾವತಿ ಚಿತ್ರದಲ್ಲಿ ಪದ್ಮಾವತಿಯ ನೈಜ ಪಾತ್ರವನ್ನು ತಿರುಚಲಾಗಿದೆ ಹಾಗೂ ರಜಪೂತರ ಭಾವನೆಗಳಿಗೆ ಧಕ್ಕೆ ಬರುವಂತಹ ದೃಶ್ಯಗಳು ಇದೆ ಎಂಬುದು ಎಂಬುದು ರಜಪೂತರ ಸೇನೆಯ ಆರೋಪ,ಈ ಘಟನೆ ನೆಡೆದ ತರುವಾಯ ಹಿಂದಿ ಚಿತ್ರರಂಗದ ದಿಗ್ಗಜರು ಸಂಜಯ್ ಲೀಲಾ ಪರ ನಿಂತು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಘಟನೆ ೨: ಕರಣ್ ಜೋಹರ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಕೂಡ ನಾನಾ ತರದ ವಿವಾದಗಳಿಗೆ ಸಿಲುಕಿಕೊಂಡಿತ್ತು, ಪಾಕಿಸ್ತಾನ ಮೂಲದ ಫವಾದ್ ಖಾನ್ ಎಂಬ ನಟ ಈ ಚಿತ್ರದಲ್ಲಿ ಅಭಿನಯಿಸಿದ್ದು ಈ ವಿವಾದಕ್ಕೆ ಮೂಲ ಕಾರಣ,ಭಾರತದ ಮೇಲೆ ದ್ವೇಷ ಕಾರುವ ಪಾಕಿಸ್ತಾನ ಎದುರು ಬಂದು ಸೆಣಸಾಡಿದ್ದಕ್ಕಿಂತ ಹೇಡಿಯಂತೆ ಹಿಂದೆ ಇಂದ ದಾಳಿ ಮಾಡಿದ್ದೇ ಹೆಚ್ಚು, ಇಷ್ಟೆಲ್ಲಾ ದ್ರೋಹ ಬಗೆಯುವ ಪಾಕಿಸ್ತಾನದ ಬಗ್ಗೆ ಮೃದುವಾದ ಧೋರಣೆ ತೋರುವುದು ತರವಲ್ಲ,ಈ ವಿವಾದ ಭುಗಿಲ್ಲೆದ್ದಾಗ ಹಿಂದಿ ಚಿತ್ರದ ಸಲ್ಮಾನ್ ಖಾನ್ ಹಾಗೂ ಕೆಲ ನಟರು ಕರಣ್ ಪರ ನಿಂತರು, ಸೂಕ್ಷ್ಮವಾದ ವಿಚಾರಗಳನ್ನು ಅವಲೋಕಿಸದೆ ಶತ್ರು ರಾಷ್ಟ್ರದ ಕಲಾವಿದರನ್ನು ಬೆಂಬಲಿಸುವುದು ನಿಜಕ್ಕೂ ವಿಪರ್ಯಾಸ, ಈ ಸಂದ...