ಇಂದು ಸರ್ಕಾರ್ ಚಿತ್ರದ ಬಿಡುಗಡೆಗೆ ಇಷ್ಟೊಂದು ವಿರೋಧವೇಕೆ??

ಇಂದು ಸರ್ಕಾರ್ ಚಿತ್ರದ ಬಿಡುಗಡೆಗೆ ಇಷ್ಟೊಂದು ವಿರೋಧವೇಕೆ??

ಘಟನೆ ೧: ಕೆಲ ತಿಂಗಳುಗಳ ಹಿಂದೆ ಜೈಪುರದಲ್ಲಿ ಸಂಜಯ್ ಲೀಲಾ ಬನ್ಸಾಲಿ ಹಾಗೂ ಪದ್ಮಾವತಿ ಚಿತ್ರದ ತಂಡದ ಮೇಲೆ ರಜಪೂತರ ಕಾರ್ನಿ ಸೇನೆಯ ಕಾರ್ಯಕರ್ತರು ದಾಳಿ ನೆಡೆಸಿದ್ದರು, ಪದ್ಮಾವತಿ ಚಿತ್ರದಲ್ಲಿ ಪದ್ಮಾವತಿಯ ನೈಜ ಪಾತ್ರವನ್ನು ತಿರುಚಲಾಗಿದೆ ಹಾಗೂ ರಜಪೂತರ ಭಾವನೆಗಳಿಗೆ ಧಕ್ಕೆ ಬರುವಂತಹ ದೃಶ್ಯಗಳು ಇದೆ ಎಂಬುದು ಎಂಬುದು ರಜಪೂತರ ಸೇನೆಯ ಆರೋಪ,ಈ ಘಟನೆ ನೆಡೆದ ತರುವಾಯ ಹಿಂದಿ ಚಿತ್ರರಂಗದ ದಿಗ್ಗಜರು ಸಂಜಯ್ ಲೀಲಾ ಪರ ನಿಂತು ಘಟನೆಯನ್ನು ತೀವ್ರವಾಗಿ ಖಂಡಿಸಿದರು.  
ಘಟನೆ ೨: ಕರಣ್ ಜೋಹರ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಕೂಡ ನಾನಾ ತರದ ವಿವಾದಗಳಿಗೆ ಸಿಲುಕಿಕೊಂಡಿತ್ತು, ಪಾಕಿಸ್ತಾನ ಮೂಲದ ಫವಾದ್ ಖಾನ್ ಎಂಬ ನಟ ಈ ಚಿತ್ರದಲ್ಲಿ ಅಭಿನಯಿಸಿದ್ದು ಈ ವಿವಾದಕ್ಕೆ ಮೂಲ ಕಾರಣ,ಭಾರತದ ಮೇಲೆ ದ್ವೇಷ ಕಾರುವ ಪಾಕಿಸ್ತಾನ ಎದುರು ಬಂದು ಸೆಣಸಾಡಿದ್ದಕ್ಕಿಂತ ಹೇಡಿಯಂತೆ ಹಿಂದೆ ಇಂದ ದಾಳಿ ಮಾಡಿದ್ದೇ ಹೆಚ್ಚು, ಇಷ್ಟೆಲ್ಲಾ ದ್ರೋಹ ಬಗೆಯುವ ಪಾಕಿಸ್ತಾನದ ಬಗ್ಗೆ ಮೃದುವಾದ ಧೋರಣೆ ತೋರುವುದು ತರವಲ್ಲ,ಈ ವಿವಾದ ಭುಗಿಲ್ಲೆದ್ದಾಗ ಹಿಂದಿ ಚಿತ್ರದ ಸಲ್ಮಾನ್ ಖಾನ್  ಹಾಗೂ ಕೆಲ ನಟರು ಕರಣ್ ಪರ ನಿಂತರು, ಸೂಕ್ಷ್ಮವಾದ ವಿಚಾರಗಳನ್ನು ಅವಲೋಕಿಸದೆ ಶತ್ರು ರಾಷ್ಟ್ರದ ಕಲಾವಿದರನ್ನು ಬೆಂಬಲಿಸುವುದು ನಿಜಕ್ಕೂ ವಿಪರ್ಯಾಸ, ಈ ಸಂದರ್ಭದಲ್ಲಿ ಅಜಯ್ ದೇವ್ಗನ್  ಪ್ರತಿಕ್ರಿಯಿಸಿದ್ದು ಹೀಗೆ-ನಾನು ಎಂದಿಗೂ ಪಾಕಿಸ್ತಾನಿ ಕಲಾವಿದರೊಂದಿಗೆ ನಟಿಸುವುದಿಲ್ಲ & ನಮ್ಮ ಸೇನೆಯನ್ನು ಕೆಣಕುವ ಪಾಕಿಸ್ತಾನದ ನಿಲುವನ್ನು ಖಂಡಿಸುತ್ತೇನೆ. ಪಾಕಿಸ್ತಾನಿ ಕಲಾವಿದರ ನಿಷೇಧದ ಬಗ್ಗೆ ಇಡೀ ಚಿತ್ರರಂಗವೇ ದನಿ ಎತ್ತಬೇಕಿತ್ತು ಆದರೆ ಅಲ್ಲೊಬ ಇಲ್ಲೊಬ್ಬ ಎಂಬಂತೆ ಕೆಲವೇ ಕೆಲವರು ಧನಿಗೂಡಿಸಿದರು.ಭಾರತ ಚಿತ್ರರಂಗದಿಂದ ಸಕಲವನ್ನೂ ಪಡೆದಿರುವ ಪಾಕಿಸ್ತಾನಿ ಕಲಾವಿದರು ಎಂದಾದರೂ ಭಾರತದ ಪರ ಮಾತನಾಡಿದ್ದಾರೆಯೇ?? ಭಾರತದದಲ್ಲಿ ನೆಡೆದ ಭಯೋತ್ಪಾದಕ ದಾಳಿಗಳನ್ನು ಖಂಡಿಸಿದ್ದಾರೆಯೇ?? ಕಾಶ್ಮೀರದಲ್ಲಿ ನೆಡೆಯುತ್ತಿರುವ ಹಿಂಸಾಚಾರವನ್ನು ವಿರೋದಿಸಿದ್ದಾರೆಯೇ?? ಇದೇ ಪಾಕಿಸ್ತಾನಿ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಲು ದೆಹಲಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ನಾ ಮುಂದು ತಾ ಮುಂದು ಎನ್ನುವಂತೆ ಪೈಪೋಟಿ ಬೀಳುತ್ತಾರೆ!! ತಾಯ್ನಾಡಿನಿಂದ ಸಕಲವನ್ನೂ ಪಡೆಯುವವರು ಮಾತೃಭೂಮಿಗೆ ನಿಷ್ಠರಾಗಿರಬೇಕಲ್ಲವೇ??  

ಘಟನೆ ೩: ಮುಂದಿನ ಶುಕ್ರವಾರ ಮಧುರ್ ಭಂಡಾರ್ಕರ್ ಅವರ ಇಂದು ಸರ್ಕಾರ್ ಎಂಬ ಚಿತ್ರ ದೇಶ ವಿದೇಶದಾದ್ಯಂತ ಬಿಡುಗಡೆಯಾಗಲಿದೆ,೧೯೭೫ ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಚಿತ್ರಿಸುವ ಈ ಚಿತ್ರ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ, ಇಂದಿರಾ ಗಾಂಧಿ ಹಾಗೂ ಸಂಜಯ್ ಗಾಂಧಿ ಅವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿಲಾಗಿದೆ ಎಂದು ಕಾಂಗ್ರೆಸ್ ಪಕ್ಷದವರು ಪ್ರತಿಭಟಿಸುತ್ತಿದ್ದಾರೆ, ಸಂಜಯ್ ಲೀಲಾ ಬನ್ಸಾಲಿ ಅವರನ್ನು ಬೆಂಬಲಿಸಿದ ಚಿತ್ರರಂಗದ ಕಲಾವಿದರ ಗುಂಪು ಈ ವಿಚಾರದ ಬಗ್ಗೆ ಮೌನ ತಾಳಿದೆ, ಈ ಕುರಿತು ಪ್ರತಿಕ್ರಿಯಿಸಿದ ಮಧುರ್ " ರಾಜಕೀಯ ಹಾಗೂ ಬಣ್ಣದ ಲೋಕದಲ್ಲಿ ಇದೆಲ್ಲವೂ ಸಹಜವೆನ್ನುತ್ತ ಲತಾ ದೀದಿ ಅವರ "ಕಿತ್ನೆ ಅಜೀಬ್ ರಿಸ್ತೆ ಹೈ ಯಹಾಂ ಫೆ" ಅವರ ಹಾಡನ್ನು ಉದಾಹರಣೆ ಕೊಟ್ಟರು. ಪುಣೆಯಲ್ಲಿ ಮಧುರ್ ಭಂಡಾರ್ಕರ್ ಪರ ಕೆಲ ಸಂಘಟನೆಗಳು ನಿಂತಿರುವುದು ನಿರ್ದೇಶಕನಿಗೆ ಮತ್ತಷ್ಟು ಬಲ ನೀಡಿದೆ. ಹಿಂದಿ ಚಿತ್ರರಂಗದ ಕೃಪಾ ಪೋಷಿತ ನಾಟಕ ಮಂಡಳಿಯ ಕಲಾವಿದರು ಮಧುರ್ ಪರ ನಿಲ್ಲದಿರುವುದರಲ್ಲಿ ಆಶ್ಚರ್ಯವೇನಿಲ್ಲ!!!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???