"ಗುರುವಿನ ಗುಲಾಮನಾಗದ ತನಕ ದೊರಕದಯ್ಯ ಮುಕುತಿ"
"
"ಗುರುವಿನ ಗುಲಾಮನಾಗದ ತನಕ ದೊರಕದಯ್ಯ ಮುಕುತಿ"
"ಗುರುವಿನ ಗುಲಾಮನಾಗದ ತನಕ ದೊರಕದಯ್ಯ ಮುಕುತಿ"
ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುವ ಶ್ಲೋಕದೊಂದಿಗೆ ಶುರುವಾಗುವ ಪೂಜಾ ಸಂಸ್ಕಾರಗಳಲ್ಲಿ ತಾಯಿ ಹಾಗು ತಂದೆಯ ನಂತರ ಪೂಜ್ಯ ಸ್ಥಾನವನ್ನು ಅಲಂಕರಿಸಿರುವವರೆಂದರೆ ಗುರುಗಳು, ಆಷಾಡ ಮಾಸದ ಹುಣ್ಣಿಮೆಯಂದು ಗುರು ಪೌರ್ಣಮಿಯನ್ನು ಶ್ರದ್ಧಾ ಭಕ್ತಿಯಿಂದ ದೇಶದೆಲ್ಲೆಡೆ ಆಚರಿಸಲಾಗುತ್ತದೆ, ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳನ್ನು ಪರಮ ಗುರುಗಳೆಂದೇ ಪರಿಗಣಿಸಲಾಗುತ್ತದೆ, ಆದ ಕಾರಣದಿಂದಲೇ ಗುರು ಪೌರ್ಣಮಿ ಯನ್ನು ವ್ಯಾಸ ಪೌರ್ಣಮಿ ಎಂದು ಸಹ ಕರೆಯಲಾಗುತ್ತದೆ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಗುರು ಹಾಗು ಶಿಷ್ಯರ ನಡುವಿನ ಸಂಬಂಧಕ್ಕೆ ಶ್ರೇಷ್ಠ ಉದಾಹಾರಣೆಗಳಿವೆ,ದ್ರೋಣಾಚಾರ್ಯರನ್ನು ಗುರುಗಳೆಂದು ಸ್ವೀಕರಿಸಿ ಅವರನ್ನು ಮನದಲ್ಲಿ ಭಕ್ತಿಯಿಂದ ನೆನೆದು ಬಿಲ್ವಿದ್ಯೆ ಕಲಿತ ಏಕಲವ್ಯನದು ಅಪ್ರತಿಮ ಗುರು ಭಕ್ತಿ, ಗುರು ದಕ್ಷಿಣೆಯಾಗಿ ಎಬ್ಬೆರಳನ್ನು ಕೇಳಿದಾಗ ಮರು ಕ್ಷಣ ಯೋಚಿಸದೆ ಎಬ್ಬೆರಳನ್ನು ನೀಡುವ ಮೂಲಕ ಗುರುಭಕ್ತಿಯ ಪರಾಕಾಷ್ಠೆಯನ್ನೇ ಮೆರೆದ, ವಿಜಯನಗರದ ಹಕ್ಕ ಬುಕ್ಕರು ವಿದ್ಯಾರಣ್ಯರನ್ನು ಗುರುಗಳಾಗಿ ಸ್ವೀಕರಿಸಿದರು, ಗುರುಗಳ ಮಾರ್ಗದರ್ಶನಕ್ಕೂ ಮೊದಲು ನಾನಾ ಗೊಂದಲಗಳ ಗೂಡಾಗಿದ್ದ ವಿಜಯನಗರ ಸಾಮ್ರಾಜ್ಯ ಗುರುಗಳ ಆಗಮನದ ತರುವಾಯ ವೈಭವಯುತ ಸಾಮ್ರಾಜ್ಯವಾಗಿ ಮಾರ್ಪಾಡುಗೊಳ್ಳುತ್ತದೆ, ಹಿಂದೆ ಗುರು ಹಾಗೂ ಮುಂಧೆ ಗುರಿ ಇರಬೇಕೆಂಬ ನಾಣ್ನುಡಿ ಇಲ್ಲಿ ಅನುವಹಿಸುತ್ತದೆ, ಮರಾಠಿಗರು ಮೊಘಲರ ದಬ್ಬಾಳಿಕೆ ಇಂದ ಅಪಾರವಾಗಿ ನೊಂದಿದ್ದ ಸಮಯದಲ್ಲಿ ಅವರನ್ನು ಸಂಕಷ್ಟದಿಂದ ಪಾರು ಮಾಡಿ ಸನಾತನ ಸಂಸ್ಕೃತಿಯನ್ನು ದೇಶದಾದ್ಯಂತ ಪುನರ್ ಪ್ರತಿಷ್ಠಾಪಿಸಲು ಧರೆಗಿಳಿದು ಬಂದವನೇ ಛತ್ರಪತಿ ಶಿವಾಜಿ ಮಹಾರಾಜ, ಸಮರ್ಥ ರಾಮದಾಸರ ಶಿಷ್ಯನಾಗಿದ್ದ ಶಿವಾಜಿ ಶತ್ರುಪಡೆಗೆ ಚಳ್ಳೆ ಹಣ್ಣು ತಿನ್ನಿಸಬಲ್ಲಿ ಅಪ್ರತಿಮ ಪರಾಕ್ರಮಿ ಆಗಿದ್ದ, ತನ್ನ ಜೀವನದಲ್ಲಿ ಆತ ಕಂಡ ಅತ್ಯದ್ಭುತ ಯಶಸ್ಸಿಗೆ ಆತನ ತಾಯಿ ಹಾಗೂ ಆತನ ಗುರುಗಳು ಸಹ ಕಾರಣವೆಂದರೆ ಅತಿಶಯೋಕ್ತಿಯಾಗದು.
ದೇಶ ವಿದೇಶಗಳಿಗೆ ತೆರಳಿ ಸನಾತನ ಸಂಸ್ಕೃತಿಯ ಸಾರವನ್ನು ಸಾರಿದ ಸ್ವಾಮಿ ವಿವೇಕಾನಂದರ ಗುರು ನಿಷ್ಠೆಯೂ ಸಹ ಅತ್ಯಂತ ಶ್ರೇಷ್ಠವಾದದ್ದು, ದೇವರ ಬಗ್ಗೆ ಇದ್ದ ತನಗಿದ್ದ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ತರುಣನಾಗಿದ್ದ ನರೇಂದ್ರ ಅನೇಕರ ಬಳಿ ಮೊರೆ ಹೋದ,ಎಲ್ಲಿಯೂ ಸಮಂಜಸ ಉತ್ತರ ಕಂಡುಕೊಳ್ಳದ ನರೇಂದ್ರ ಕಾಳಿ ಮಾತೆಯ ಉಪಾಸಕರಾದ ಶ್ರೀ ರಾಮಕೃಷ್ಣ ಪರಮಹಂಸರ ಬಳಿ ತೆರಳಿದ, ದೇವರ ಬಗ್ಗೆ ಇದ್ದ ಗೊಂದಲಗಳನ್ನೆಲ್ಲ ದೂರ ಮಾಡಿದ ರಾಮಕೃಷ್ಣರನ್ನು ಗುರುವಾಗಿ ಸ್ವೀಕರಿಸಿದ, ಗುರುಗಳಿಗೆ ಶಿಷ್ಯನನ್ನು ಕಂಡರೆ ಅಪಾರ ಪ್ರೀತಿ, ಶಿಷ್ಯನಿಗೆ ಗುರುಗಳನ್ನು ಕಂಡರೆ ಅಪಾರ ಭಕ್ತಿ ಹಾಗು ನಿಷ್ಠೆ, ಗುರುವೂ ಶ್ರೇಷ್ಠ ಆತನ ಶಿಷ್ಯನು ಶ್ರೇಷ್ಠ ಎಂಬುದು ರಾಮಕೃಷ್ಣ- ವಿವೇಕಾನಂದರ ಜೀವನವನ್ನು ಬಲ್ಲವರಿದೆ ಅರಿವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಾಧಿಸಿದ ಸಾಧಕರನ್ನು ನೀವು ಸೂಕ್ಷ್ಮವಾಗಿ ಪರಿಶೀಲಿಸಿದ್ದೆ ಆದರೆ ಗುರುಗಳ ಮಹತ್ವ ತಿಳಿಯುತ್ತದೆ, ಕ್ರಿಕೆಟ್ ಸಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಸಚಿನ್ ತೆಂಡೂಲ್ಕರ್ ಸಹ ತಮ್ಮ ಗುರುಗಳಾದ ರಮಾಕಾಂತ್ ಆಚ್ರೆಕರ್ ಅವರನ್ನು ಇಂಧಿಗೂ ಸಹ ಸ್ಮರಿಸುತ್ತಾರೆ ಹಾಗೂ ಗೌರವಿಸುತ್ತಾರೆ.ಆದಿ ಗುರು ಶ್ರೀ ಶಂಕರಾಚಾರ್ಯರಿಂದ ಹಿಡಿದು ಆರ್ಟ್ ಆ ಲೀವಿಂಗ್ ನ ರವಿಶಂಕರ್ ಗುರೂಜಿಗಳ ವರೆಗೂ ಸಾಕ್ಷ್ಟು ಗುರುಗಳ ಭೋಧನೆ ಹಾಗೂ ಆಶೀರ್ವಚನ ಪಡೆದ ಈ ಭರತ ಭೂಮಿ ನಿಜಕ್ಕೂ ಧನ್ಯ. ಗುರುವಿನ ಮಹತ್ವ ಅರಿತಿದ್ದ ದಾಸರು ಜೀವನದಲ್ಲಿ ಮುಕ್ತಿಯನ್ನು ಹೊಂದಬೇಕಾದರೆ ಗುರುವಿಗೆ ಗುಲಾಮನಾಗಬೇಕಯ್ಯಾ ಎಂದು ಅಂದೇ ಸಾರಿದ್ದರು.
ಜೈ ಶ್ರೀ ಗುರುದೇವ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ