"ನದಿಗಳನ್ನು ರಕ್ಷಿಸಿ ಎಂಬ ಬೃಹತ್ ಅಭಿಯಾನದ ಮಹತ್ವ"
"ನದಿಗಳನ್ನು ರಕ್ಷಿಸಿ ಎಂಬ ಬೃಹತ್ ಅಭಿಯಾನದ ಮಹತ್ವ" 'ಗಂಗೇಚ ಯಮುನೇಚ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿದಿಂ ಕುರುಮ್ ' ಎಂಬ ಶ್ಲೋಕದಲ್ಲಿ ಪ್ರಸ್ತಾಪವಾಗಿರುವಂತೆ ಪವಿತ್ರವಾದ ನದಿಗಳು ನಮ್ಮ ಜೀವನಾಡಿಗಳೇ ಆಗಿವೆ, ನದಿಗಳನ್ನು ದೇವರಂತೆ ಪೂಜಿಸುತ್ತಾ ಬಂದಿರುವ ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ತನ್ನದೇ ಆದ ಶ್ರೇಷ್ಠ ಸ್ಥಾನಮಾನವಿದೆ, ಶತಮಾನಗಳಿಂದ ನಮ್ಮ ಪೂರ್ವಜರು ನದಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ, ಕಳೆದ ೫೦ ವರ್ಷಗಳಿಂದ ನದಿಗಳ ಸ್ಥಿತಿ ಚಿಂತಾಜನಕವಾಗಿದೆ, ಜೀವಜಲವಾದ ನೀರಿನ ಮೂಲಗಳಾಗಿದ್ದ ಕಾವೇರಿ, ಕೃಷ್ಣ, ಗೋದಾವರಿ ನದಿಗಳು ೨೦ ಪ್ರತಿಶತಕ್ಕೂ ಹೆಚ್ಚು ಬತ್ತಿ ಹೋಗಿವೆ, ಕಾವೇರಿ ಬತ್ತು ಹೋದ ಪರಿಣಾಮ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ರೈತಾಪಿ ವರ್ಗ ಹಾಗೂ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿರುವುದು ನಮ್ಮ ಕಣ್ಣಿಗೆ ಗೋಚರಿಸುತ್ತಿದೆ, ಕರ್ನಾಟಕ & ತಮಿಳುನಾಡು ಅಷ್ಟೇ ಅಲ್ಲದೆ ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದಷ್ಟು ಕೆಟ್ಟದಾಗಿದೆ,ನೂರಾರು ವರ್ಷಗಳಿಂದ ಕೃಷಿಯನ್ನು ಮೂಲಕಸುಬನ್ನಾಗಿಸಿಕೊಂಡಿರುವ ಕೃಷಿಕರು ೫೦ ವರ್ಷಗಳ ಹಿಂದೆ ಎಷ್ಟು ನೀರನ್ನು ಬಳಸುತ್ತಿದ್ದರೋ ಅದೇ ಪ್ರಮಾಣದ ನೀರನ್ನು ಇಂದಿಗೂ ಸಹ ಬಳಸುತ್ತಿದ್ದಾರೆ, ಆ ಒಟ್ಟು ಪ್ರಮಾಣದ ಶೇಖಡಾ ೩೦ ರಷ್ಟು ನೀರನ್ನು ಬಳಸಿ ಉತ್ತಮವಾಗಿ ಕೃಷಿ ಮಾಡಬ...