"ಟಾಯ್ಲೆಟ್ ಏಕ್ ಪ್ರೇಮ ಕಥಾ" ತರಹದ ಸಾಮಾಜಿಕ ಕಳಕಳಿಯುಳ್ಳಂತಹ ಚಿತ್ರಗಳು ತೆರೆಯ ಮೇಲೆ ಹೆಚ್ಚೆಚ್ಚು ಬರುವಂತಾಗಲಿ:

"ಟಾಯ್ಲೆಟ್ ಏಕ್ ಪ್ರೇಮ ಕಥಾ" ತರಹದ ಸಾಮಾಜಿಕ ಕಳಕಳಿಯುಳ್ಳಂತಹ ಚಿತ್ರಗಳು ತೆರೆಯ ಮೇಲೆ ಹೆಚ್ಚೆಚ್ಚು ಬರುವಂತಾಗಲಿ:

ಆಗಸ್ಟ್ ೧೧ ರಂದು ವಿಶ್ವದಾದ್ಯಂತ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಎಂಬ ಚಲನಚಿತ್ರ ಸಹಸ್ರಾರು  ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು,ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿರುವ ಈ ಚಿತ್ರ 'ಬಯಲು ಶೌಚ ಮುಕ್ತ' ಕಥಾಹಂದರವನ್ನು ಒಳಗೊಂಡಿದೆ, ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೦ ವರ್ಷಗಳಾದರೂ ಬಹಳಷ್ಟು ಹಳ್ಳಿಗಳಲ್ಲಿ ಶೌಚಾಲಯಗಳೇ ಇಲ್ಲ, ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದವರಂತೆ ಬಹಳಷ್ಟು ಮಂದಿ ಶೌಚಾಲಯಗಳನ್ನು ಬಳಸದೆ ಬಯಲಿಗೆ ಶೌಚಕ್ಕೆ ತೆರಳುತ್ತಾರೆ, ಇದರ ಕುರಿತಾಗಿ ಅರಿವು ಮೂಡಿಸಲು ಎಷ್ಟೋ ಮಂದಿ ಪ್ರಯತ್ನ ಪಟ್ಟಿದ್ದಾರೆ ಹಾಗೂ ಪ್ರಯತ್ನ ಪಡುತ್ತಲ್ಲೂ ಸಹ ಇದ್ದಾರೆ, ೫ ವರ್ಷಗಳ ಹಿಂದೆ ಭಾರತ-ನೇಪಾಳ ಗಡಿ ಭಾಗದ ಸಮೀಪವಿರುವ ಪುಟ್ಟ ಹಳ್ಳಿಯೊಂದರಲ್ಲಿ ಪ್ರಿಯ ಭಾರತಿ ಎಂಬ ದಿಟ್ಟ ಮಹಿಳೆ ಬಯಲು ಶೌಚ ವ್ಯವಸ್ಥೆಯ ವಿರುದ್ಧ ಟೊಂಕ ಕಟ್ಟಿ ನಿಂತು ಅತ್ತೆಯ ಮನೆಯ ಕಡೆ ಅವರಿಗೆ ಸೆಡ್ಡು ಹೊಡೆದಳು,ಮದುವೆಯ ನಂತರ ಮನೆಯಲ್ಲಿ ಶೌಚಾಲಯ ಇಲ್ಲದ ಕುರಿತು ಪ್ರಿಯ ಮರುಗುತ್ತಾಳೆ ,ಇದನ್ನು ಪ್ರಶ್ನಿಸಿದಾಗ,ಪ್ರಿಯಾಳ ಅತ್ತೆ ಆಕೆಯ ಕುರಿತು "ನಮ್ಮ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ, ನಾವೆಲ್ಲರೂ ಬಹಿರ್ದೆಸೆಗಾಗಿ ಬಯಲಿಗೆ ತೆರಳುತ್ತೇವೆ" ಎಂದರು, ಇದನ್ನು ಕಂಡು ಬೇಸರಗೊಂಡ ಪ್ರಿಯ ಗಂಡನ ಮನೆಯನ್ನು ಬಿಟ್ಟು ತನ್ನ ಹೆತ್ತವರ ಮನೆಗೆ ತೆರಳುತ್ತಾಳೆ,ಹಳ್ಳಿ ಪ್ರದೇಶದ ಎಷ್ಟೋ ಮನೆಗಳಲ್ಲಿ ಇಂದಿಗೂ ಸಹ ಶೌಚಾಲಯಕ್ಕೆ ಸರಿಯಾದ ವ್ಯವಸ್ಥೆಯೇ ಇಲ್ಲ, ಇದಕ್ಕೆ ಪ್ರತಿರೋಧ ಹೊಡ್ದುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ನಿಜಕ್ಕೂ ಆಶಾದಾಯಕ ಸಂಗತಿ, ಪ್ರಿಯ ಭಾರತಿ ಮನೆ ಬಿಟ್ಟು ಹೋದ ತರುವಾಯ ಗಂಡನ ಮನೆಯವರು ಕಂಗಾಲಾಗುತ್ತಾರೆ, ಹೆಚ್ಚೆತ್ತುಕೊಂಡ ಗಂಡನ ಮನೆಯವರು ಶೌಚಾಲಯ ನಿರ್ಮಾಣಕ್ಕೆ ಆಸಕ್ತಿ ತೋರುತ್ತಾರೆ, ಪ್ರಿಯಾಳ ಪುನರಾಗಮನವನ್ನು ಕಣ್ಣುತುಂಬಿಕೊಳ್ಳಲು ನೆರೆದಿದ್ದವರ ಸಂಖ್ಯೆ ೨೦೦೦!! ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆ ಅವರ ಕುಟುಂಬಕ್ಕೆ ನೆರವಾಗುತ್ತದೆ ಹಾಗೂ ವ್ಯವಸ್ಥೆಯ ವಿರುದ್ಧ ನಿಂತು ಇತರರನ್ನು ಪ್ರೇರೇಪಿಸಿದ ಪ್ರಿಯಾಳಿಗೆ ಸನ್ಮಾನ ಮಾಡುತ್ತದೆ, ಪ್ರಿಯಾಳಿಂದ ಪ್ರಭಾವಿತರಾದ ಇಬ್ಬರೂ ಮಹಿಳೆಯರು ಸಹ ಪ್ರಿಯಾಳ ಹಾದಿಯನ್ನೇ ಹಿಂಬಾಲಿಸಿ ಯಶಸ್ವಿ ಆಗುತ್ತಾರೆ. ವ್ಯವಸ್ಥೆಯ ವಿರುದ್ಧ ಸುಮ್ಮನಿದ್ದ ಇತರರಂತೆ ಪ್ರಿಯಾಳೂ ಸಹ ಇದ್ದಿದ್ದರೆ ಇಂತಹ ಕ್ರಾಂತಿಕಾರಕ ಸಂಗತಿ ಹುಟ್ಟಿಕೊಳ್ಳುತ್ತಿರಲಿಲ್ಲ!!
 
ಟಾಯ್ಲೆಟ್ ಏಕ್ ಪ್ರೇಮ್ ಕಥಾ ಚಿತ್ರಕಥೆಗೂ ಪ್ರಿಯಾಳ ಕಥೆಗೂ ಬಹಳಷ್ಟು ಸಾಮ್ಯತೆ ಇದೆ, ಮನೆಯಲ್ಲಿ ಶೌಚಾಲಯಕ್ಕೆ ವ್ಯವಸ್ಥೆಗಳಿಲ್ಲದ ಕಾರಣ ಚಿತ್ರದ ನಾಯಕಿ ಮನೆಯನ್ನು ತೊರೆಯುತ್ತಾಳೆ, ಇದನ್ನು ಕಂಡು ಕಂಗಾಲಾದ ಕಥಾ ನಾಯಕ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಕೈ ಹಾಕುತ್ತಾನೆ, ಮೊದ ಮೊದಲು ತನ್ನ ತಂದೆ ಹಾಗು ಇತರರಿಂದ ವಿರೋಧಗಳು ವ್ಯಕ್ತವಾಗುತ್ತದೆ, ನಾಯಕನ ತಾಯಿಗೆ ದುಸ್ಥಿತಿ ಒದಗಿಬಂದಾಗ ಇದರ ವಿರುದ್ಧ ಹೆಚ್ಚೆತುಕೊಳ್ಳುವ ನಾಯಕನ ತಂದೆ ಶೌಚಾಲಯ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸುತ್ತಾರೆ.ಈ ರೀತಿ ಆಗಿ ಸಾಗುವ ಚಿತ್ರಕಥೆ ಸ್ಪೂರ್ತಿದಾಯಕವಾಗಿ ತೆರೆ ಮೇಲೆ ಮೂಡಿ ಬಂದಿದೆ. ಚಲನಚಿತ್ರ ಮಾಧ್ಯಮ ಬಹುತೇಕರನ್ನು ತಲುಪುವ ಕಾರಣ ಈ ರೀತಿಯ ಚಿತ್ರಗಳ ಅವಶ್ಯಕತೆ ಇಂದಿನ ಸಮಾಜಕ್ಕೆ ಸಾಕಷ್ಟಿದೆ, ಈ ಚಿತ್ರವನ್ನು ನೋಡಿ ಅಲ್ಲೋ ಇಲ್ಲೋ ಒಂದಿಷ್ಟು ಬದಲಾವಣೆಗಳಾಗುತ್ತಿರುವುದು ಸಾರ್ಥಕತೆಯ ಫಲವಾಗಿದೆ. ಇಂತಹ ಕಥಾಹಂದರವನ್ನಿಟ್ಟುಕೊಂಡು ಸಮಾಜಕ್ಕೆ ಸಂದೇಶವನ್ನು ನೀಡುವ ಚಿತ್ರತಂಡದ ಉದ್ದೇಶ ಒಳ್ಳೆಯದಾಗಿದೆ,ಭಯೋತ್ಪಾದನೆ ಹಾಗು ಭ್ರಷ್ಟಾಚಾರದ ವಿರುದ್ಧ ಗುಡುಗುವ ಪಾತ್ರಗಳಲ್ಲಿ ಮಿಂಚಿರುವ ಅಕ್ಷಯ್ ಕುಮಾರ್ ಈ ರೀತಿಯ ಸಂವೇದನಾಶೀಲ ಚಿತ್ರಗಳಲ್ಲಿ ನಟಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ, ೨೦೨೨ ಕ್ಕೆ ಭಾರತವನ್ನು ಬಯಲು ಶೌಚ ಮುಕ್ತವಾಗಿಸುವ ಸಂಕಲ್ಪವನ್ನು ತೊಟ್ಟಿರುವ ಭಾರತದ ಪ್ರಧಾನ ಸೇವಕ ನರೇಂದ್ರ ಮೋದಿ ಅವರ ಈ ಸತ್ಕಾರ್ಯದಲ್ಲಿ ಎಲ್ಲರೂ  ಭಾಗಿಯೋಗೋಣ. 

ಸ್ವಚ್ಛ ಭಾರತ, ಶ್ರೇಷ್ಠ ಭಾರತ     

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???