ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???
ಕಳೆದ ಕೆಲ ತಿಂಗಳಿಂದ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಚಲನಚಿತ್ರ ಶುರುವಾಗುವ ಮುನ್ನ ಪ್ರಸಾರ ಮಾಡಲಾಗುತ್ತಿದೆ, ರಾಷ್ಟ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಎದ್ದು ನಿಲ್ಲಬೇಕೆ ಎಂಬ ಚರ್ಚೆ ಕೂಡ ಬಹಳಷ್ಟು ಸಮಯದಿಂದ ನಡೆಯುತ್ತಿದೆ, ನಾಲ್ಕು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಈ ಕುರಿತಾಗಿ ಮಹತ್ವವಾದ ತೀರ್ಪೊಂದನ್ನು ನೀಡಿತು, ಆ ತೀರ್ಪು ಏನೆಂದರೆ ರಾಷ್ಟ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಎದ್ದು ನಿಲ್ಲಬೇಕೆಂಬೆದು ಕಡ್ಡಾಯವೇನಲ್ಲ, ಅವರವರ ಇಷ್ಟಕ್ಕೆ ಬಿಟ್ಟಿದ್ದು !! ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ವ್ಯಕ್ತಿ ಕುಳಿತ್ತಿದ್ದರೆ ಆ ವ್ಯಕ್ತಿಗೆ ರಾಷ್ಟಪ್ರೇಮವಿಲ್ಲ ಎಂಬ ಗ್ರಹಿಕೆ ತಪ್ಪು ಎನ್ನುವುದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಂಬೋಣ, ಈ ತೀರ್ಪು ಹೊರಬಂದ ಕೂಡಲೇ ಪರ ಹಾಗೂ ವಿರೋಧಗಳು ವ್ಯಕ್ತವಾದವು,ದೇಶಪ್ರೇಮದ ಕಥಾ ಹಂದರವುಳ್ಳ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಕಮಲ್ ಹಾಸನ್ ಈ ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸುತ್ತಾ " ಸುಪ್ರೀಂ ಕೋರ್ಟ್ ನ ತೀರ್ಮಾನವನ್ನು ಸ್ವಾಗತಿಸುತ್ತೇನೆ, ಸಿಂಗಾಪುರ್ ಅಲ್ಲಿ ರಾತ್ರಿಯ ವೇಳೆ ರಾಷ್ಟ್ರಗೀತೆ ಪ್ರಸಾರ ಮಾಡಲಾಗುತ್ತದೆ, ನಮ್ಮ ರಾಷ್ಟ್ರ ಗೀತೆಯನ್ನು ಸಹ ದೂರದರ್ಶನದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಪ್ರಸಾರ ಮಾಡಲಿ, ನನ್ನ ದೇಶಭಕ್ತಿಯನ್ನು ವಿವಿಧ ಸ್ಥಳಗಳಲ್ಲಿ ಹಾಗೂ ವಿವಿಧ ವೇಳೆಗಳಲ್ಲಿ ಪರೀಕ್ಷಿಸಬೇಡಿ " ಎಂದರು, ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು...