ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಕೇಸರಿ ಭಯೋತ್ಪಾದನೆ ಎಂಬ ಹುಸಿ ಪರಿಕಲ್ಪನೆ "

ಇಮೇಜ್
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಒಂದಿಲ್ಲೊಂದು ತಕರಾರು ನಡೆಯುತ್ತಲೇ ಬಂದಿದೆ, ಹಲವು ಬಾರಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿದ್ದರು ಸಹ  ಉಭಯ ರಾಜ್ಯಗಳಿಗೆ ಅದರಿಂದ ಸಮಾಧಾನಕರವಾದ ಪರಿಹಾರ ದೊರೆತಿಲ್ಲ, ಕಾವೇರಿ ವಿಚಾರವಾಗಿ ಹಲವಾರು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಜನ ಸಾಮಾನ್ಯರ ಹಿತವನ್ನು ಬದಿಗಿಟ್ಟು ಜನಗಳನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದು ನಮ್ಮೆಲ್ಲರಿಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ,ಚುನಾ ವಣೆ ಸಮೀಪವಾಗುತ್ತಿದ್ದಂತೆ ಈ ಓರಾಟದ ಕಿಡಿ ಹೆಚ್ಚಾಗುತ್ತದೆ! ಕಳೆದ ವಾರ ಎಲ್ಲೆಡೆ ಐ ಪಿ ಲ್ ಪಂದ್ಯಾವಳಿ ಶುರುವಾಯಿತು, ತಮಿಳುನಾಡಿನ ಬಹುತೇಕ ರಾಜಕಾರಣಿಗಳು ಹಾಗೂ ಚಿತ್ರ ನಟರ ಗುಂಪೊಂದು   ಐ ಪಿ ಲ್ ಪಂದ್ಯವನ್ನು ಚೆನ್ನೈ ನಲ್ಲಿ ಬಹಿಷ್ಕರಿಸಬೇಕೆಂದು ಒಟ್ಟಾಗಿ ಕೂಗಿದರು, ಚೆನ್ನೈ ಪರ ಆಡುವ ಆಟಗಾರರು ಕಪ್ಪು ಪಟ್ಟಿ ಧರಿಸಬೇಕೆಂದು, ಪಂದ್ಯ ನೋಡಲು ಹೋಗುವ ಅಭಿಮಾನಿಗಳು ಸಹ ಕಪ್ಪು ಪಟ್ಟಿ ಧರಿಸಬೇಕೆಂದು ಒತ್ತಾಯಿಸಿದರು, ಓರಾಟದ ನೇತೃತ್ವ ವಹಿಸಿದ್ದ ಕೆಲವರು ಅಭಿಮಾನಿಗಳೊಡನೆ ಅನುಚಿತವಾಗಿ ವರ್ತಿಸಿದ್ದ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿತ್ತು,ತಮಿಳುನಾಡಿನೆಗೆ ದೇಶದ ದೃಷ್ಟಿಯನ್ನು ತಿರುಗಿಸಬೇಕೆಂಬ ಹಂಬಲದಲ್ಲಿದ್ದ ಓರಾಟಗಾರರಿಗೆ   ಐ ಪಿ ಲ್ ವರವಾಗಿ ಪರಿಣಮಿಸಿತು. ...

ಅಪರಾಧಿಗಳನ್ನು ಆರಾಧಿಸುವ ಅಂಧಾಭಿಮಾನಿಗಳನ್ನು ಕಂಡು ನಗಬೇಕೋ,ಅಳಬೇಕೋ ??

ಇಮೇಜ್
ಹಿಂದಿ ಚಿತ್ರರಂಗದ ಕಲಾವಿದರಾದ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ ಹಾಗು ಟಬು ಇಪ್ಪತ್ತು ವರ್ಷಗಳ ಹಿಂದೆ ಚಿತ್ರೀಕರಣದ ಪ್ರಯುಕ್ತ ಕಾಡಿನಲ್ಲಿದ್ದ ಸಮಯದಲ್ಲಿ ಅಳಿವಿನಂಚಿನಲ್ಲಿದ್ದ ಕೃಷ್ಣ ಮೃಗವನ್ನು ಭೇಟೆಯಾಡಿ ಕೊಂಡಿದ್ದರು, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿಯಲ್ಲಿ ಹಾಗೂ ಭೇಟೆಯಾಡಿದ ಆರೋಪದಡಿಯಲ್ಲಿ ಸಲ್ಮಾನ್ ಖಾನ್ ಗೆ ನ್ಯಾಯಾಲಯ ೫ ವರ್ಷಗಳ ಸಜೆ ಘೋಷಿಸಿತು, ತಪ್ಪು ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ ಎಂದು ಅರಿಯದ ಆತನ ಅಂಧಾಭಿಮಾನಿಗಳು & ಆತನ ಸಹೋದ್ಯೋಗಿಗಳು ತಪ್ಪು ಮಾಡಿದವನ ಪರ ನಿಂತರು, ಈ ಕುರಿತು ಸುದ್ದಿ ವಾಹಿನಿ ಒಂದರಲ್ಲಿ ಚರ್ಚೆಯಾಗುತ್ತಿದ್ದಾಗ ತಲೆಯಲ್ಲಿ ಬುದ್ಧಿಯೇ ಇಲ್ಲದ ನಟಿಮಣಿಯೊಬ್ಬಳು ನಮ್ಮ ದೇಶದಲ್ಲಿ ಬಹುತೇಕ ಮಂದಿ ಮಾಂಸಾಹಾರಿಗಳಿದ್ದಾರೆ, ಈ ತಪ್ಪಿಗೆ ಶಿಕ್ಷೆ ಏಕೆ ಎಂದು ಪ್ರಶ್ನಿಸಿದಳು, ಆಕೆ ಪ್ರಾಣಿಪ್ರಿಯಳಂತೆ !! ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮದಲ್ಲಿ ತೊಡಗಿರುವ ನಟರನ್ನು ಬೆಂಬಲಿಸುವ ಸಹನಟರ ಸಂಖ್ಯೆ ಕಡಿಮೆ ಇರುವ ಈ ಸಮಯದಲ್ಲಿ ಅಕ್ರಮ ಶಸ್ತ್ರಾಸ್ತ್ರ,ಭೇಟೆ,ಭಯೋತ್ಪಾದನೆ ಹಾಗೂ ಇತರ ಆರೋಪದಲ್ಲಿ ಭಾಗಿಯಾಗಿರುವ ನಟರನ್ನು ಬೆಂಬಲಿಸುವ ಸಹನಟರ ದೊಡ್ಡದೊಂದೇ ಗುಂಪಿದೆ, ಇವರ ನಿಷ್ಠೆಗೆ ಏನೆನ್ನಬೇಕೋ ?? ಈ ಹಿಂದೆ ೨ಜಿ ಹಗರಣದಲ್ಲಿ ಸಿಲುಕಿದ್ದ ಅಪರಾಧಿಗಳಾದ ರಾಜ ಹಾಗೂ ಕನಿಮೊಳಿ ಅಚಾನಕ್ಕಾಗಿ ಜೈಲಿನಿಂದ ಬಿಡುಗಡೆ ಆದಾಗ ಅವರದೇ ಪಕ್ಷದವರ ಅಂಧಾಭಿಮಾನಿಗಳ ಗುಂಪೊಂ...