"ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಕೇಸರಿ ಭಯೋತ್ಪಾದನೆ ಎಂಬ ಹುಸಿ ಪರಿಕಲ್ಪನೆ "


ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಒಂದಿಲ್ಲೊಂದು ತಕರಾರು ನಡೆಯುತ್ತಲೇ ಬಂದಿದೆ, ಹಲವು ಬಾರಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿದ್ದರು ಸಹ  ಉಭಯ ರಾಜ್ಯಗಳಿಗೆ ಅದರಿಂದ ಸಮಾಧಾನಕರವಾದ ಪರಿಹಾರ ದೊರೆತಿಲ್ಲ, ಕಾವೇರಿ ವಿಚಾರವಾಗಿ ಹಲವಾರು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಜನ ಸಾಮಾನ್ಯರ ಹಿತವನ್ನು ಬದಿಗಿಟ್ಟು ಜನಗಳನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದು ನಮ್ಮೆಲ್ಲರಿಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ,ಚುನಾವಣೆ ಸಮೀಪವಾಗುತ್ತಿದ್ದಂತೆ ಈ ಓರಾಟದ ಕಿಡಿ ಹೆಚ್ಚಾಗುತ್ತದೆ! ಕಳೆದ ವಾರ ಎಲ್ಲೆಡೆ ಐ ಪಿ ಲ್ ಪಂದ್ಯಾವಳಿ ಶುರುವಾಯಿತು, ತಮಿಳುನಾಡಿನ ಬಹುತೇಕ ರಾಜಕಾರಣಿಗಳು ಹಾಗೂ ಚಿತ್ರ ನಟರ ಗುಂಪೊಂದು  ಐ ಪಿ ಲ್ ಪಂದ್ಯವನ್ನು ಚೆನ್ನೈ ನಲ್ಲಿ ಬಹಿಷ್ಕರಿಸಬೇಕೆಂದು ಒಟ್ಟಾಗಿ ಕೂಗಿದರು, ಚೆನ್ನೈ ಪರ ಆಡುವ ಆಟಗಾರರು ಕಪ್ಪು ಪಟ್ಟಿ ಧರಿಸಬೇಕೆಂದು, ಪಂದ್ಯ ನೋಡಲು ಹೋಗುವ ಅಭಿಮಾನಿಗಳು ಸಹ ಕಪ್ಪು ಪಟ್ಟಿ ಧರಿಸಬೇಕೆಂದು ಒತ್ತಾಯಿಸಿದರು, ಓರಾಟದ ನೇತೃತ್ವ ವಹಿಸಿದ್ದ ಕೆಲವರು ಅಭಿಮಾನಿಗಳೊಡನೆ ಅನುಚಿತವಾಗಿ ವರ್ತಿಸಿದ್ದ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿತ್ತು,ತಮಿಳುನಾಡಿನೆಗೆ ದೇಶದ ದೃಷ್ಟಿಯನ್ನು ತಿರುಗಿಸಬೇಕೆಂಬ ಹಂಬಲದಲ್ಲಿದ್ದ ಓರಾಟಗಾರರಿಗೆ   ಐ ಪಿ ಲ್ ವರವಾಗಿ ಪರಿಣಮಿಸಿತು. ಇಷ್ಟೆಲ್ಲಾ ನಡೆಯುತ್ತಿರುವಾಗ ತಮಿಳಿನ ಚಿತ್ರ ನಟ ಸಿಂಬು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕನ್ನಡಿಗರು ಹಾಗೂ ತಮಿಳಿಗರು ಅಣ್ಣ ತಮ್ಮಂದಿರಿದ್ದಂತೆ, ತಮಿಳುನಾಡಿನಲ್ಲಿ ಕನ್ನಡಿಗರ ಕುರಿತಂತೆ ದ್ವೇಷ ಭಾವನೆ ಮೂಡಿಸಿರುವುದನ್ನು ನಾವಿನ್ನು ಅಳಿಸಬೇಕಾಗಿದೆ ಹಾಗೂ ಕನ್ನಡ ನಾಡಿನ ತಾಯಂದಿರನ್ನು ನಾವು ನೀರು ಕೊಡುವಂತೆ ವಿನಂತಿಸಿದರೆ ಅವರು ನೀರನ್ನು ನೀಡುತ್ತಾರೆ, ಅವರಿಗೆ ನೀರಿಲ್ಲದಿರುವಾಗ ನಮಗೆ ಹೇಗೆ ತಾನೆ ನೀರು ನೀಡಿಯಾರು ಎಂದರು? ಕನ್ನಡಿಗರು ಒಂದು ಲೋಟ ನೀರನ್ನು ತಮಿಳಿಗರಿಗೆ ನೀಡುವ ವಿಡಿಯೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕೆಂದು ಸಹ ಹೇಳಿದರು ಇದಕ್ಕೆ ಪ್ರತಿಯಾಗಿ ಹಲವಾರು ಕನ್ನಡಿಗರು ಸಿಂಬು ಪರ ನಿಂತರು, ದ್ವೇಷದಿಂದ ಗೆಲ್ಲಲಾರದ ಎಷ್ಟೋ ಸಮರಗಳನ್ನು ಪ್ರೀತಿಯಿಂದ ಗೆಲ್ಲಬಹುದೆಂಬ ಸಣ್ಣ ಸಂಗತಿ ಸಿಂಬುಗೆ ತಿಳಿದಿರುವಷ್ಟು ಇತರರಿಗೆ ತಿಳಿದರೆ ಒಳಿತು, ಇತ್ತ ಕರ್ನಾಟಕದಲ್ಲಿ ಹಿರಿಯ ನಟ ಅನಂತ್ ನಾಗ್ ಈ ಕುರಿತಾಗಿ ಪ್ರತಿಕ್ರಿಯುಸುತ್ತಾ ರಾಜಕಾರಣಿಗಳು ರಾಜಕೀಯ ಪ್ರೇರಿತರಾಗಿ ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಹೊರತು ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುತ್ತಿಲ್ಲ ಎಂದು ಬೇಸರಗೊಂಡರು. ಕಾವೇರಿಯ ವಿಚಾರವಾಗಿ ನ್ಯಾಯಯುತ ಹಾಗೂ ಸೌಹಾರ್ದಯುತ ತೀರ್ಮಾನ ಹೊರ ಬೀಳಲಿ ಎಂಬುದು ಎಲ್ಲರ ಆಶಯ. 
ಕೆಲವು ವರ್ಷಗಳ ಹಿಂದೆ ಮಸೀದಿ ಸ್ಫೋಟ ಪ್ರಕರಣವೊಂದರಲ್ಲಿ ಹಿಂದೂ ಸಂಘಟನೆಗೆ ಸೇರಿದ ಕೆಲ ಮುಖಂಡರನ್ನು ಸಾಕ್ಷಾಧಾರಗಳಿಲ್ಲದೆ ಬಂಧಿಸಲಾಗಿತ್ತು, ಈ ಕುರಿತು ನ್ಯಾಯಾಲಯದಿಂದ ತೀರ್ಪು ಹೊರಬಿದ್ದಿದ್ದು ನ್ಯಾಯಕ್ಕೆ ಜಯ ದೊರೆತಿದೆ, ಕೇಸರಿ ಭಯೋತ್ಪಾದನೆ ಎಂಬ ಹುಸಿ ಪರಿಕಲ್ಪನೆಗೆ ಬಣ್ಣ ಕಟ್ಟಿದ್ದ ಕೆಲ ರಾಜಕಾರಣಿಗಳ ಬಣ್ಣ ಬಯಲಾಗಿದೆ, ದೇಶದಲ್ಲಿ ವಾಸಿಸುತ್ತಿರುವ ಬಹುಸಂಖ್ಯಾತರ ವಿರುದ್ಧ ವ್ಯವಸ್ಥಿತ ಷಡ್ಯಂತರ ರೂಪಿಸಿದ್ದ ಕೀಳು ರಾಜಕಾರಣಿಗಳ ದುರ್ನಡತೆಗೆ ದೇಶದೆಲ್ಲಡೆ ವಿರೋಧ ವ್ಯಕ್ತವಾಗುತ್ತಿದ್ದೆ, ರಾಷ್ಟ್ರ ಭಕ್ತರನ್ನು ಹುಸಿ ಆರೋಪದ ಅಡಿಯಲ್ಲಿ ಬಂಧಿಸಿ ಹಲವು ವರ್ಷಗಳ ಕಾಲ ನಾನಾ ತರ ಹಿಂಸಿಸಿದ್ದ ರಾಜಕಾರಣಿಗಳ ಪಡೆ ನ್ಯಾಯಾಲದ ತೀರ್ಪಿನಿಂದ ತಬ್ಬಿಬಾಗಿದೆ!  ಹೋಳಿ ಆಚರಣೆ ಸಮಯದಲ್ಲಿ ವಿವಾದವೊಂದು ಸೃಷ್ಟಿಯಾಗಿತ್ತು, ಸಾಗರಿಕ ಘೋಸ್ ಎಂಬ ಬು(ಲ)ದ್ದಿವಂತ ಪತ್ರಕರ್ತೆ ಹೋಳಿಯಾಡುವಾಗ ಹೋಳಿಯ ಬಣ್ಣಗಳೊಡನೆ ವೀರ್ಯಾಣುಗಳನ್ನು ತುಂಬಲಾಗಿದೆಯಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು, ಈ ಕುರಿತು ಲ್ಯಾಬ್ ಒಂದು ಸಂಶೋಧನೆ ನಡೆಸಿದ್ದು ಆ ಹೋಳಿ ಬಣ್ಣಗಳಲ್ಲಿ ಯಾವುದೇ ರೀತಿಯ ವೀರ್ಯಾಣುಗಳು ಕಂಡುಬಂದಿಲ್ಲವೆಂದು ಸ್ಪಷ್ಟಪಡಿಸಿದೆ, ಹಿಂದೂಗಳ ಹಬ್ಬ ಹಾಗೂ ಆಚರಣೆಯ ಕುರಿತು ಬೊಬ್ಬೆ ಒಡೆಯುವ ಈ ಪತ್ರಕರ್ತರ ದಿಂಡು ಬೇರೆ ಸಮಯದಲ್ಲಿ ಸೈಲೆಂಟ್ ಮೂಡ್ ನಲ್ಲಿರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???