ಅಪರಾಧಿಗಳನ್ನು ಆರಾಧಿಸುವ ಅಂಧಾಭಿಮಾನಿಗಳನ್ನು ಕಂಡು ನಗಬೇಕೋ,ಅಳಬೇಕೋ ??
ಹಿಂದಿ ಚಿತ್ರರಂಗದ ಕಲಾವಿದರಾದ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ ಹಾಗು ಟಬು ಇಪ್ಪತ್ತು ವರ್ಷಗಳ ಹಿಂದೆ ಚಿತ್ರೀಕರಣದ ಪ್ರಯುಕ್ತ ಕಾಡಿನಲ್ಲಿದ್ದ ಸಮಯದಲ್ಲಿ ಅಳಿವಿನಂಚಿನಲ್ಲಿದ್ದ ಕೃಷ್ಣ ಮೃಗವನ್ನು ಭೇಟೆಯಾಡಿ ಕೊಂಡಿದ್ದರು, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿಯಲ್ಲಿ ಹಾಗೂ ಭೇಟೆಯಾಡಿದ ಆರೋಪದಡಿಯಲ್ಲಿ ಸಲ್ಮಾನ್ ಖಾನ್ ಗೆ ನ್ಯಾಯಾಲಯ ೫ ವರ್ಷಗಳ ಸಜೆ ಘೋಷಿಸಿತು, ತಪ್ಪು ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ ಎಂದು ಅರಿಯದ ಆತನ ಅಂಧಾಭಿಮಾನಿಗಳು & ಆತನ ಸಹೋದ್ಯೋಗಿಗಳು ತಪ್ಪು ಮಾಡಿದವನ ಪರ ನಿಂತರು, ಈ ಕುರಿತು ಸುದ್ದಿ ವಾಹಿನಿ ಒಂದರಲ್ಲಿ ಚರ್ಚೆಯಾಗುತ್ತಿದ್ದಾಗ ತಲೆಯಲ್ಲಿ ಬುದ್ಧಿಯೇ ಇಲ್ಲದ ನಟಿಮಣಿಯೊಬ್ಬಳು ನಮ್ಮ ದೇಶದಲ್ಲಿ ಬಹುತೇಕ ಮಂದಿ ಮಾಂಸಾಹಾರಿಗಳಿದ್ದಾರೆ, ಈ ತಪ್ಪಿಗೆ ಶಿಕ್ಷೆ ಏಕೆ ಎಂದು ಪ್ರಶ್ನಿಸಿದಳು, ಆಕೆ ಪ್ರಾಣಿಪ್ರಿಯಳಂತೆ !! ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮದಲ್ಲಿ ತೊಡಗಿರುವ ನಟರನ್ನು ಬೆಂಬಲಿಸುವ ಸಹನಟರ ಸಂಖ್ಯೆ ಕಡಿಮೆ ಇರುವ ಈ ಸಮಯದಲ್ಲಿ ಅಕ್ರಮ ಶಸ್ತ್ರಾಸ್ತ್ರ,ಭೇಟೆ,ಭಯೋತ್ಪಾದನೆ ಹಾಗೂ ಇತರ ಆರೋಪದಲ್ಲಿ ಭಾಗಿಯಾಗಿರುವ ನಟರನ್ನು ಬೆಂಬಲಿಸುವ ಸಹನಟರ ದೊಡ್ಡದೊಂದೇ ಗುಂಪಿದೆ, ಇವರ ನಿಷ್ಠೆಗೆ ಏನೆನ್ನಬೇಕೋ ??
ಈ ಹಿಂದೆ ೨ಜಿ ಹಗರಣದಲ್ಲಿ ಸಿಲುಕಿದ್ದ ಅಪರಾಧಿಗಳಾದ ರಾಜ ಹಾಗೂ ಕನಿಮೊಳಿ ಅಚಾನಕ್ಕಾಗಿ ಜೈಲಿನಿಂದ ಬಿಡುಗಡೆ ಆದಾಗ ಅವರದೇ ಪಕ್ಷದವರ ಅಂಧಾಭಿಮಾನಿಗಳ ಗುಂಪೊಂದು ಇಬ್ಬರನ್ನು ಹೀರೋಗಳಂತೆ ಸ್ವಾಗತಿಸಿತ್ತು, ದೇಶದ ಹಣ ಲೂಟಿ ಮಾಡಿದ ಅಪರಾಧಿಗಳಿಗೆ ಸಂದ ಗೌರವವಿದು! ನ್ಯಾಷನಲ್ ಹೆರಾಲ್ಡ್ ಹಗರಣದ ಸಲುವಾಗಿ ನ್ಯಾಯಾಲದ ಕಟಕಟೆಯಲ್ಲಿ ನಿಂತಿದ್ದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ತಮ್ಮ ಹೊಗಳುಭಟ್ಟರ ಪಡೆಯಿಂದ ನಕಲಿ ಜೈಕಾರ ಪಡೆದಿದ್ದನ್ನು ಮರೆಯಲಾದೀತೆ? ದೇಶದ ಹಿತಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿರುವ ಅಸಂಖ್ಯಾತ ಭಾರತೀಯರಿಗೆ ಸಿಗಬೇಕಾದ ಗೌರವ ಇತರರಿಗೆ ಸಿಗುತ್ತಿರುವುದನ್ನು ನೆನೆದರೆ ನಿಜಕ್ಕೂ ಮನಸಿಗೆ ಬೇಜಾರಾಗುತ್ತದೆ, ಕೆಲ ತಿಂಗಳುಗಳ ಹಿಂದೆ ಬಹುಕೋಟಿ ಮೇವಿನ ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ದೋಷಿಯಾಗಿರುವುದು ಸಾಬೀತಾಗಿದ್ದ ಕಾರಣ ಅವರಿಗೆ ಶಿಕ್ಷೆ ವಿಧಿಸಲಾಯಿತು, ಶಿಕ್ಷೆ ಹೊರಬೀಳುತ್ತಿದಂತೆ ಕೆಲ ನೌಟಂಕಿ ಪತ್ರಕರ್ತರು ತಮ್ಮ ಅಸಹನೆಯನ್ನು ಹೊರಹಾಕಿದರು,ಒಬ್ಬ ಪತ್ರಕರ್ತ ಲಾಲು ಪ್ರಸಾದ್ ಕೆಳಜಾತಿಗೆ ಸೇರಿದ ಕಾರಣ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ವ್ಯವಸ್ಥೆಯ ವಿರುದ್ಧ ಗುಡುಗಿದ,ಅಪರಾಧಿ ಯಾವ ಜಾತಿಗೆ ಸೇರಿದ್ದರೂ ಯಾವ ಧರ್ಮಕ್ಕೆ ಸೇರಿದ್ದರೂ ಅಪರಾಧಿಯೇ, ಇದನ್ನು ಸಾಮಾನ್ಯ ಜನರೇ ಅರ್ಥೈಸಿಕೊಂಡಿರುವಾಗ ಪತ್ರಿಕೋದ್ಯಮದಲ್ಲಿ ಪಳಗಿರುವ ಪತ್ರಕರ್ತರು ಅರ್ಥೈಸಿಕೊಳ್ಳಲಾರರೇ?? ಇತ್ತೀಚಿನ ದಿನಗಳಲ್ಲಿ ಫೇಕ್ ನ್ಯೂಸ್ ಕುರಿತಾಗಿ ಸಾಕಷ್ಟು ಸುದ್ದಿಗಳು ಹೊರಬೀಳುತ್ತಿದೆ,ಪೋಸ್ಟ್ ಕಾರ್ಡ್ ಪತ್ರಿಕೆಯ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಕರ್ನಾಟಕ ಸರ್ಕಾರ ಕಾಮಾಲೆ ಕಣ್ಣಿನ ನ್ಯಾಯದಡಿಯಲ್ಲಿ ಬಂಧಿಸಿದೆ, ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಸಾಕಷ್ಟು ಫೇಕ್ ನ್ಯೂಸ್ ಗಳನ್ನೂ ಹರಡಿ ವಿಷ ಬೀಜ ಬಿತ್ತಿರುವ ರಾಜದೀಪ್ ಸರ್ದೇಸಾಯಿ, ಸಾಗರಿಕ ಘೋಷ್, ಶೇಖರ್ ಗುಪ್ತ ಹಾಗೂ ಬರ್ಖಾ ದತ್ತ್ ರಂತಹ ಪತ್ರಕರ್ತರನ್ನು ಯಾವಾಗ ಬಂಧಿಸುತ್ತಾರೋ??

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ