"ವಿವಾದಕ್ಕೀಡಾಗಯತ್ತಿರುವ ಪ್ರತಿಷ್ಠಿತರ ಹೇಳಿಕೆಗಳು"

"ವಿವಾದಕ್ಕೀಡಾಗುತ್ತಿರುವ ಪ್ರತಿಷ್ಠಿತರ ಹೇಳಿಕೆಗಳು":



ಕಳೆದ ಒಂದು ವಾರದಿಂದ ಪ್ರತಿಷ್ಠಿತ ವ್ಯಕ್ತಿಗಳು ನೀಡುತ್ತಿರುವ ಹೇಳಿಕೆಗಳು ಅಪಾರ ವಿವಾದಕ್ಕೆ ಒಳಗಾಗುತ್ತಿದೆ, ಕಾಶ್ಮೀರದಲ್ಲಿ ಕಿಡಿಗೇಡಿಗಳು ಸೈನಿಕರ ಮೇಲೆ ಕಲ್ಲು ತೂರುತ್ತಿರುವ ಹಾಗೂ ಹಲ್ಲೆ ಮಾಡುತ್ತಿರುವ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಭಾರತೀಯ ಪ್ರಜೆಗಳು ಇದನ್ನು ಕಂಡು ಉರಿದುಬಿದ್ದಿದ್ದಾರೆ, ನಮ್ಮ ದೇಶದ ಸೈನಿಕರಿಂದ ಸಕಲ ಸಹಾಯವನ್ನು ಅಪೇಕ್ಷಿಸುವ ಕಾಶ್ಮೀರದ ಕೆಲ ರಾಷ್ಟ್ರದ್ರೋಹಿಗಳ ಈ ನೀಚ ನಡೆ ಖಂಡನಾರ್ಹ. ಪ್ರತ್ಯೇಕವಾದಿಗಳ ಈ ನಡೆಯನ್ನು ಟೀಕಿಸುತ್ತಾ 'ಗೌತಮ್ ಗಂಭೀರ್' ಹೀಗೆ ನುಡಿದರು " ನಮ್ಮ ಜವಾನರ ಮೇಲೆ ಬೀಳುವ ಒಂದೊಂದು ಏಟಿಗೆ ಪ್ರತಿಯಾಗಿ ನೂರು ಜಿಹಾದಿಗಳ ತಲೆ ಉರುಳುತ್ತದೆ, ಆಜಾದಿದೆಗಳೇ ದೇಶಬಿಟ್ಟು ತೊಲಗಿ,ಕಶ್ಮೀರ ನಮ್ಮದು". ಈ ಹೇಳಿಕೆ ಹೊರಬರುತ್ತಿದ್ದಂತೆ 'ಬರ್ಖಾ ದತ್, ಸಾಗರಿಕ ಹಾಗೂ ರಾಣಾ ಅಯೂಬ್' ರಂತಹ ಪತ್ರಕರ್ತರು ಗಂಭೀರ್ ಮೇಲೆ ಮುಗಿಬಿದ್ದರು, ದೇಶದ್ರೋಹಿಗಳ ಪರ ವಕಾಲತ್ತು ವಹಿಸುವುದು ಈ ಪತ್ರಕರ್ತರ ಆದ್ಯ ಕರ್ತವ್ಯವೇ ಆಗಿರುವಾಗ ಇವರಿಂದ ಇನ್ನೇನನ್ನು ತಾನೇ ಆಪೇಕ್ಷಿಸಲಾದೀತು?? ದೇಶದ ಪರ ಮಾತನಾಡಿದ ಗೌತಮ್ ಗೆ ಎದುರಾದ ವಿರೋಧ ಹಲವು ದೇಶಭಕ್ತರನ್ನು ಕೆರಳಿಸಿದ್ದಂತೂ ನಿಜ. ಗಂಭೀರ್ ಹೇಳಿಕೆ ನೀಡುತ್ತಿದ್ದಂತೆ ಅದರ ಪರ ನಿಂತಿದ್ದು ಭಾರತದ ಮತ್ತೊಬ್ಬ ಆಟಗಾರ 'ವಿರೇಂದ್ರ್ ಸೆಹ್ವಾಗ್', ಆಟದ ಮೈದಾನದಲ್ಲಿ ಎದುರಾಳಿಗಳಿಗೆ ಬ್ಯಾಟ್ ಮೂಲಕ ಪ್ರತಿಕ್ರಿಯುಸುತ್ತಿದ್ದ ಈ ಆಟಗಾರರು ಇತ್ತೀಚಿನ ದಿನಗಳಲ್ಲಿ ದೇಶದ್ರೋಹಿಗಳ ವಿರುದ್ಧ ಬ್ಯಾಟ್ ಬೀಸುವುದರ ಮೂಲಕ ಸುದ್ಧಿಯಲ್ಲಿದ್ದಾರೆ .

ಸ್ನ್ಯಾಪ್ ಚಾಟ್ ಸಂಸ್ಥೆ ಭಾರತೀಯರನ್ನು ಬಡವರು ಎಂದು ಟೀಕಿಸಿದನ್ನು ಖಂಡಿಸಿ ಖ್ಯಾತ ಗಾಯಕ 'ಅದ್ನಾನ್ ಸಾಮಿ'   ಸ್ನ್ಯಾಪ್ ಚಾಟ್ ಅನ್ನು ತಮ್ಮ ಚೂಟಿಯುಲಿ(ಸ್ಮಾರ್ಟ್ ಪೋನ್) ಯಿಂದ ನಿಷ್ಷ್ಕ್ರಿಯಗೊಳಿಸುವ ಮೂಲಕ ತಮ್ಮ ಅತೃಪ್ತಿಯನ್ನು ಹೊರ ಹಾಕಿದರು,ಭಾರತವನ್ನು ಬೆಂಬಲಿಸಿದ ಅದ್ನಾನ್ ಸಾಮಿಯ ವಿರುದ್ಧ  ಕುಪಿತಗೊಂಡ ಕೆಲ ಪಾಕಿಸ್ತಾನಿಗಳು
ಸಾಮಾಜಿಕ ಜಾಲತಾಣಗಳಲ್ಲಿ ಸಾಮಿಯನ್ನು ಟೀಕಿಸಿದರು, ನಾನು ವಿರೋಧಿಸಿದ್ದು ಪಾಕಿಸ್ತಾನವನ್ನಲ್ಲ ಸ್ನಾಪ್ ಚಾಟ್ ಅನ್ನು ,ಅದಕ್ಕಾಗಿ ನೀವು ಭಾವುಕರಾಗಬೇಕಿಲ್ಲವೆಂದು ಹೇಳುವ ಮೂಲಕ ಸಾಮಿ ಪಾಕಿಸ್ತಾನಿಗಳ ಕಾಲೆಳೆದರು, ಪಾಕಿಸ್ತಾನ ಮೂಲದ ಗಾಯಕ ಭಾರತದ ಪರ ಮಾತಾಡಿದ್ದು ಪಾಕಿಗಳಿಗೆ ನುಂಗಲಾರದ ತುತ್ತಾಗಿಯೇ ಪರಿಣಮಿಸಿದೆ.

ಬೆಳಿಗ್ಗೆ ಸಮಯದಲ್ಲಿ ಪ್ರಾರ್ಥನೆಯ ಸಲುವಾಗಿ ಕೇಳಿಬರುವ ಧ್ವನಿವರ್ಧಕದ ಸದ್ದು ಎಲ್ಲರ ನಿದ್ದೆಯನ್ನೇಕೆ ಕೆಡಿಸಬೇಕು, ಮುಸಲ್ಮಾನರಲ್ಲದವರು ಏಕೆ ಅದಕ್ಕಾಗಿ ಎಚ್ಚರವಾಗಬೇಕು?? ಈ ರೀತಿಯ ಬಲಾತ್ಕಾರದ ಪ್ರಕ್ರಿಯೆ ಎಷ್ಟು ಸರಿ ಎಂದು ಪ್ರಶ್ನಿಸಿದ 'ಸೋನು ನಿಗಂ' ಅವರ ಹೇಳಿಕೆ ಸಹ ವಿವಾದಕ್ಕೀಡಾಯ್ತು, ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು,ಸೋನು ನಿಗಂ ಪರ ವಹಿಸಿದ 'ವಿವೇಕ್ ಅಗ್ನಿಹೋತ್ರಿ' ಎಂಬ ನಿರ್ದೇಶಕನಿಗೆ 'ಜಕ್ಕಾ ಜೇಕಬ್' ಎಂಬಾತ  'ನೀವೇಕೆ ಮಸೀದಿ ಬಳಿ ಇದ್ದೀರಾ?? ನಿಮ್ಮ ಮನೆಯನ್ನು ಸ್ಥಳಾಂತರಿಸಿ ಬಿಡಿ' ಎಂದು ಬಿಟ್ಟ!! ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪುಟಗಟ್ಟಲೆ ಮಾತನಾಡುವ ಜನ ಇಂತಹ ಸಂದರ್ಭಗಳಲ್ಲಿ ಮೌನಕ್ಕೆ ಶರಣಾಗಿರುವುದನ್ನು ಕಂಡರೆ ಬೇಸರವಾಗದೆ ಇರದು.
ಸುಪ್ರೀತ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???