"ಕುತೂಹಲ ಮೂಡಿಸುತ್ತಿರುವ ಅರ್ನಬ್ ಗೋಸ್ವಾಮಿ ಪುನರಾಗಮನ"

 "ಕುತೂಹಲ ಮೂಡಿಸುತ್ತಿರುವ ಅರ್ನಬ್ ಗೋಸ್ವಾಮಿ ಪುನರಾಗಮನ" 

ಪ್ರತಿ ದಿನ ರಾತ್ರಿ ೯ ಆಯಿತೆಂದರೆ "ಅರ್ನಬ್ ಗೋಸ್ವಾಮಿ" ಅವರ ಪ್ರಸಿದ್ಧ ಕಾರ್ಯಕ್ರಮ "ನೇಶನ್ ವಾಂಟ್ಸ್ ಟು ನೊವ್" ಟೈಮ್ಸ್ ನೌ ಸುದ್ಧಿವಾಹಿನಿಯ ಮೂಲಕ ದೇಶ ವಿದೇಶದಾದ್ಯಂತ ಬಿತ್ತರಿ ಆಗುತಿತ್ತು, ಈ ಕಾರ್ಯಕ್ರಮವನ್ನು ಜನ ಅತಿಯಾಗಿಯೇ ಮೆಚ್ಚಿದ್ದರು,ಬೇರೆ ಕಾರ್ಯಕ್ರಮಗಳನ್ನು ನೋಡದಿದ್ದಾಗ ಬೇಸರವಾಗದ ಜನ ಈ ಕಾರ್ಯಕ್ರಮವನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡವರಂತೆ ಭಾವುಕರಾಗುತ್ತಿದರು,ಕೆಲ ತಿಂಗಳುಗಳ ಹಿಂದೆ ನಾನಾ ಕಾರಣಗಳಿಂದ ಅರ್ನಬ್ ಟೈಮ್ಸ್ ನೌ ಸಮೂಹವನ್ನು ತೊರೆದರು, ಅರ್ನಬ್  ನಿರ್ಗಮನದ ಬಳಿಕ ಸುದ್ಧಿ ಮಾಧ್ಯಮದ ಅಭಿಮಾನಿಗಳಿಗಾದ ಬೇಸರವನ್ನು ಹೇಳತೀರದು,ದಿನಂಪ್ರತಿ ಅರ್ನಬ್ ಅನ್ನು ನೆನೆಯುತ್ತಿದ್ದ ಜನ ಟ್ವಿಟ್ಟರ್ ಹಾಗು ಫೇಸ್ ಬುಕ್ ಮೂಲಕ ಅರ್ನಾಬ್ ಕುರಿತಾದ ಮೆಮೆ ಗಳನ್ನು ಪ್ರಕಟ ಪಡಿಸುತ್ತಿದರು,ದೇಶದಲಾಗುತ್ತಿರುವ ದೇಶದ್ರೋಹಿ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಅರ್ನಬ್ ರಾಷ್ಟ್ರದ್ರೋಹಿಗಳನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು,ಅರ್ನಬ್ ರಂತೆ ನೇರವಾಗಿ ಹಾಗು ದಿಟ್ಟವಾಗಿ ಮಾತನಾಡಬಲ್ಲಂತಹ ನಿರೂಪಕರ ಸಂಖ್ಯೆ ಭಾರತೀಯ ಪತ್ರಿಕೋದ್ಯಮದಲ್ಲಿ ಅತಿ ವಿರಳವೆಂದರೆ ಅತಿಶಯೋಕ್ತಿಯೇನಾಗದು?? ಆದ ಕಾರಣವಾಗಿಯೇ ಭಾರತೀಯ ವೀಕ್ಷಕರು ಅರ್ನಬರನ್ನು ಈ ಪರಿ ನೆನೆಸಿಕೊಳ್ಳುತ್ತಿರುವುದು ಹಾಗೂ ಮಿಸ್ ಮಾಡಿಕೊಳ್ಳುತ್ತಿರುವುದು. 

ಒಂದು ವರ್ಷದ ಹಿಂದೆ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶದ್ರೋಹದ ಘಟನೆ ಜರುಗಿತ್ತು,ಸಂಸತ್ ಮೇಲೆ ದಾಳಿ ನಡೆಸಿದ್ದ ದೇಶದ್ರೋಹಿ ಆಫ್ಜಲ್ ಗುರುವನ್ನು ವೈಭವೀಕರಿಸಲಾಗಿತ್ತು ದೇಶದ್ರೋಹಿಗಳನ್ನು ಹೀರೋಗಳಂತೆ ಬಿಂಬಿಸುವ ಕೆಲಸವನ್ನು ಆರಂಭದಿಂದಲೂ ಮಾಡುತ್ತಾ ಬಂದಿರುವ ನಿರೂಪಕರಾದ ಬರ್ಖಾ ದತ್, ಸಾಗರಿಕ ಹಾಗೂ ರಾಜದೀಪ್ ಅಂತಹವರು ಎಂದಿನಂತೆಯೇ ಆಜಾದಿ ಬಳಗದ(ಉಮರ್,ಲೆನಿನ್ ಹಾಗೂ ಸಂಗಡಿಗರು) ಪರ ವಹಿಸಿ ಅವರನ್ನು ದೇಶ ಪ್ರೇಮಿಗಳಂತೆ ಬಿಂಬಿಸಿದರು, ಇದನ್ನು ಕಂಡ ಸಾಮಾನ್ಯ ಪ್ರಜೆ ಕಂಗಾಲಾದ, ಆ ಸಮಯದಲ್ಲಿ ರಾಷ್ಟ್ರ ದ್ರೋಹಿಗಳನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಕೆಲವು ನಿರೂಪಕರಲ್ಲಿ ಅರ್ನಬ್ ಗೋಸ್ವಾಮಿ ಸಹ ಒಬ್ಬರು, ಟೈಮ್ಸ್ ನೌ ವಾಹಿನಿಯಲ್ಲಿ ನೆಡದ ಚರ್ಚೆಯಲ್ಲಿ ದೇಶದ್ರೋಹದ ಆರೋಪ ಹೊತ್ತಿದ್ದ ಹಾಗೂ ಅವರ ಪರ ನಿಂತಿದ್ದ ಕೆಲ ವಿಶ್ವಾಸಘಾತಕರು ತಳಬುಡ ವಿಲ್ಲದ ಅಂಕಿಅಂಶಗಳ ಮೂಲಕ ತಮ್ಮ ನೀಚ ಕೃತ್ಯವನ್ನು ಸಮರ್ಥಿಸಿಕೊಂಡು ವಾದ ಮಾಡುತಿದ್ದರು ಇದನ್ನು ಕಂಡು ಕೆಂಡಾಮಂಡಲವಾದ ಅರ್ನಬ್ ಆಜಾದಿ ಬಳಗದ ಬೆವರಿಳಿಸಿದ್ದರು, ಭಾರತದಿಂದ ಸಕಲ ಸೌಕರ್ಯಗಳನ್ನು ಪಡೆದು ಈ ಮಣ್ಣಿನಲ್ಲೇ ವಾಸಿಸುವ ನಿಮಗೆ ಶತ್ರು ರಾಷ್ಟ್ರವನ್ನು ಓಲೈಸುವ ಮನಸ್ಸಾದರೂ ಹೇಗೆ ತಾನೇ ಬಂದೀತು ಎಂದು ಪ್ರಶ್ನಿಸಿದ ಅರ್ನಬ್ ನಿಮ್ಮ ಹಿಂದೆ ಯಾರೆಲ್ಲ ದೇಶ ದ್ರೋಹಿಗಳಿದ್ದಾರೆ ಎಂಬುದು ನಮಗೂ ಗೊತ್ತು,ನಿಮಗೆ ಅವರಿಂದ ಸಂದಾಯವಾಗುತ್ತಿರುವ ಹಣದ ಮೂಲದ ಬಗ್ಗೆಯೂ ಗೊತ್ತು ಎಂದು ಅವರ ಜನ್ಮ ಜಾಲಾಡಿದ್ದರು.ಮಾನವ ಹಕ್ಕುಗಳ ಪರ, ಪರಿಸರದ ಪರ ಹಾಗೂ ಕಾನೂನಿನ ಪರ ಹೋರಾಡುತ್ತೇವೆಂದು ನಾಟಕವಾಡುವ ರಾಷ್ಟ ವಿರೋಧಿಗಳ ಮುಖವಾಡ ಬಯಲು ಮಾಡಿದ ಅರ್ನಬ್ ನಿಜಕ್ಕೂ ಧೈರ್ಯವಂತ.
ಪಾಕಿಸ್ತಾನಿ ಪಾಪಿಗಳು ಭಾರತದ ಗಡಿಯಲ್ಲಿ ಅಮಾನವೀಯ ಕೃತ್ಯಗಳನ್ನು ಎಸಗುತ್ತಿದ್ದಾರೆ,ವರ್ಷದ ಹಿಂದೆ ಭಯೋತ್ಪಾದಕರು ಉರಿಯಲ್ಲಿ ಯೋಧರ ಮೇಲೆ ದಾಳಿ ಮಾಡಿದರು,ಈ ದಾಳಿಯಲ್ಲಿ ಹಲವು ವೀರ ಯೋಧರು ಮೃತಪಟ್ಟರು,ಪೈಶಾಚಿಕ ಉರಿ ದಾಳಿಯ ನಂತರ  ಕೆಲ ಸಂಘಟನೆಗಳು ಪಾಕಿಸ್ತಾನಿ ಕಲಾವಿದರನ್ನು ಬಹಿಸ್ಕರಿಸಬೇಕೆಂದು,ಭಾರತೀಯ ಚಿತ್ರಗಳಲ್ಲಿ ನಟಿಸಲು ಬಿಡಬಾರದೆಂದು ಪಟ್ಟು ಹಿಡಿದವು, ಈ ಸಂಬಂಧವಾಗಿ ಟೈಮ್ಸ್ ನೌ ವಾಹಿನಿಯಲ್ಲಿ ಚರ್ಚೆ ಏರ್ಪಟ್ಟಿತ್ತು ,ಕೆಲ ಕಲಾವಿದರು ಪಾಕಿಸ್ತಾನಿ ಕಲಾವಿದರ ಪರವಾಗಿ ನಿಂತರು,ಅರ್ನಬ್ ಗೋಸ್ವಾಮಿ ಮಾತನಾಡುತ್ತಾ 'ಪಾಕಿಸ್ತಾನಿಗಳು ಎಲ್ಲಿಯವರೆಗೂ ನಮ್ಮ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಪಾಕಿಸ್ತಾನಿ ಕಲಾವಿದರನ್ನು ಬಹಿಷ್ಕಾರ ಮಾಡಬೇಕೆಂದು' ಖಡಕ್ ಆಗಿ ನುಡಿದರು, ಇದರಿಂದ ಕೋಪಗೊಂಡ ಹಿಂದಿ ಚಿತ್ರರಂಗದ ನಿರ್ದೇಶಕ ಕರಣ್ ಜೋಹರ್ ಟೈಮ್ಸ್ ನೌ ಮುಖ್ಯ ಸಂಪಾದಕರಿಗೆ ಅರ್ನಬ್ ಬಗ್ಗೆ ಚಾಡಿ ಹೇಳಿರುವುದು ಪತ್ರಿಕೋದ್ಯಮದ ಪೆಡಸಾಲೆಗಳಲ್ಲಿ ಪ್ರಮುಖ ಸುದ್ದಿಯೇ ಆಗಿತ್ತು, ಇದಾದ ಕೆಲವೇ ದಿನಗಳಲ್ಲಿ ಅರ್ನಬ್ ಗೋಸ್ವಾಮಿ ಟೈಮ್ಸ್ ನೌ ಸಂಸ್ಥೆಯನ್ನು ತೊರೆದರು, ಟೈಮ್ಸ್ ನೌ ತೊರೆದ ಮೇಲೆ ರಿಪಬ್ಲಿಕ್ ಟಿವಿ  ಎಂಬ ಹೊಸ ಸುದ್ಧಿ ವಾಹಿನಿ ಪ್ರಾರಂಭಿಸುವ ಸನ್ನಾಹದಲ್ಲಿದ್ದಾರೆ, ಅರ್ನಬ್ ಬಳಸುತ್ತಿದ್ದ 'ನೇಶನ್ ವಾಂಟ್ಸ್ ಟು ನೊವ್' ಎಂಬ ವಾಕ್ಯವನ್ನು ಬಳಸುವಂತಿಲ್ಲವೆಂದು ಹಳೆಯ ಸಂಸ್ಥೆಯವರು ಖ್ಯಾತೆ ತೆಗೆದಿದ್ದಾರೆ, ಟೈಮ್ಸ್ ನೌ ಗೆ ಭೇಟಿ ನೀಡಲು ತೆರಳಿದ್ದ ಅರ್ನಬ್ ರನ್ನು ಅಲ್ಲಿನ ಸಿಬ್ಬಂಧಿ ಬರಮಾಡಿಕೊಳ್ಳಲಾಗದ  ಸಂಕಷ್ಟದಲ್ಲಿ ಸಿಲುಕಿದ್ದು ದುಃಖಕರ ವಿಷಯ. 
ಪತ್ರಿಕೋದ್ಯಮದ ಪ್ರಮುಖರಾದ ವಿಕ್ರಂ ಸಂಪತ್, ಪ್ರಿಯ ಮುಖರ್ಜಿ,ಚಿತ್ರ ಸುಬ್ರಮಣಿಯನ್,ಮೇಜರ್ ಗೌರವ್ ಆರ್ಯ ಹಾಗೂ  ಮಿನ್ಹಾಜ್ ಮರ್ಚೆಂಟ್ ಅವರು ರಿಪಬ್ಲಿಕ್ ಟಿವಿ ಸೇರಿದ್ದಾರೆ, ಅರ್ನಬ್ ಅವರ ನೂತನ ಪ್ರಯತ್ನಕ್ಕೆ ಶುಭ ಹಾರೈಕೆಗಳು.

ಸುಪ್ರೀತ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???