"ಗೋವಿನ ನೋವಿಗೆ ಸ್ಪಂದಿಸುತ್ತಿರುವ ಸಹೃದಯಿಗಳು"

"ಗೋವಿನ ನೋವಿಗೆ ಸ್ಪಂದಿಸುತ್ತಿರುವ ಸಹೃದಯಿಗಳು" 

ಅನಾದಿ ಕಾಲದಿಂದ ಇಲ್ಲಿಯವರೆಗೂ ಗೋ ಮಾತೆಗೆ ಪೂಜನೀಯ ಸ್ಥಾನವನ್ನು ನೀಡಿರುವ ಈ  ಪುಣ್ಯಭೂಮಿ 
ಭಾರತ "ಅಸಂಖ್ಯಾತ ಗೋಪ್ರೇಮಿ"ಗಳನ್ನು ಜಗತ್ತಿಗೆ ನೀಡಿದೆ, ಹುಟ್ಟಿದ ತರುವಾಯ ಜೀವಿತಾವಧಿಯ ಬಹುಪಾಲು ಭಾಗ ಪರರ ಹಿತಕ್ಕಾಗಿ ಜೀವಿಸುವ ಮೂಕ ಪ್ರಾಣಿಯ ದೈವಿಕ ಸ್ವಭಾವವನ್ನು ಪೂಜಿಸುತ್ತಾ ಬಂದಿರುವ ಭಾರತೀಯರಿಗೆ ಹಸುವಿನ ಬಗ್ಗೆ ಅಪಾರ ಗೌರವವಿದೆ, ಹಸುವಿನ ಉತ್ಪನ್ನಗಳಾದ ಹಾಲು,ಮಜ್ಜಿಗೆ ಹಾಗು ತುಪ್ಪಕ್ಕೆ ವಿಶ್ವದಾದ್ಯಂತ ಅಪಾರ ಬೇಡಿಕೆಯಿದೆ,ಹಸುವಿನ ಗಂಜಲದಲ್ಲಿ ಔಷಧೀಯ ಗುಣಗಳಿದೆ ಎಂಬ ಸತ್ಯಾಂಶ   ವೈಜ್ಞಾನಿಕ ಸಂಶೋಧನೆಯ ಮೂಲಕ ಗೊತ್ತಾಗಿದೆ,ಸುತ್ತಮುತ್ತಲಿನ ಜಾಗ ಶುಚಿಗೊಳಿಸುವಲ್ಲಿಯೂ ಸಹ ಗಂಜಲ ಉಪಯೋಗಕಾರಿ,ಹಸುವಿನ ಗೊಬ್ಬರದಿಂದ ಉತ್ತಮ ಫಲವನ್ನು ಕಂಡಿರುವ ರೈತ ರಾಸಾಯನಿಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಬಲ್ಲವನಾಗಿದ್ದಾನೆ,ಕೃಷಿಕರ ಪಾಲಿಗೆ ಗೋವು ಅವಿಭಾಜ್ಯ ಅಂಗ. ಆಧುನಿಕತೆಯ ಪರಿಣಾಮವಾಗಿ ಹಸುಗಳ ಬದಲಾಗಿ ಯಂತ್ರಗಳ ಮೊರೆ ಹೋದ ರೈತ ಸಾಕಷ್ಟು ಪೆಟ್ಟನ್ನು ತಿಂದಿದ್ದಾನೆ,ಹಳೆಯ ಪದ್ದತಿಗಳ ಹಿಂದೆ ಹೋಗುವ ಯೋಚನೆಗಳು ರೈತನನ್ನು ಕಾಡದೆ ಇರದು. 

ಕೃಷಿ ಪ್ರಧಾನ ರಾಷ್ಟ್ರವಾಗಿರುವ ಭಾರತ ರೈತರನ್ನು ಹೆಚ್ಚಾಗಿ ಅವಲಂಭಿಸಿದೆ,ರೈತರಿಲ್ಲದ ನಾಡಿನಲ್ಲಿ ಬೆಳೆಯನ್ನು ಹೇಗೆ ತಾನೇ ಅಪೇಕ್ಷಿಲಾದೀತು?? ದುರಾಸೆಯ ಕಾರಣವಾಗಿ ಬಹುತೇಕ ಕಾಡುಗಳು ಹಾಗು ಕೃಷಿ ಭೂಮಿಗಳು ವಾಣಿಜ್ಯಾತ್ಮಕ  ಕೇಂದ್ರಗಳಾಗಿ ಮಾರ್ಪಾಡಾಗುತ್ತಿವೆ, ಗಿಡ ಮರಗಳಿಲ್ಲದೆ ಮಳೆ ಬೆಳೆ ಕ್ಷೀಣಿಸುತ್ತಿದೆ, ಮಳೆಯಿಲ್ಲದ ಕಾರಣ ಮೇವಿನ ಪೂರೈಕೆಯ ಕಾರ್ಯ ದುಸ್ಥಿತಿಯಲ್ಲಿದೆ, ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟದ ಸಮೀಪದ ಕಾಡುಗಳಲ್ಲಿ ಎಷ್ಟೋ ಗೋವುಗಳು ಮೇವಿಲ್ಲದೆ ಚಿಂತಾಜನಕ ಪರಿಸ್ಥಿತಿಯಲ್ಲಿದೆ, ಕೆಲ ಸೇವಾ ಸಂಸ್ಥೆಗಳು ಗೋವುಗಳಿಗೆ ನೆರವಾಗುವ ಸಲುವಾಗಿ ಕಾರ್ಯಪ್ರವೃತ್ತರಾಗುತ್ತಿದೆ, ಮೊದಲಿನಿಂದಲೂ ಗೋ ಸೇವೆಯಲ್ಲಿ ತೊಡಗಿರುವ ರಾಮಚಂದ್ರಾಪುರ ಮಠದ "ರಾಘವೇಶ್ವರ ಶ್ರೀಗಳು" ಗೋ ಮಾತೆಯ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ,ಶ್ರೀಗಳ ಮಾರ್ಗದರ್ಶನದಲ್ಲಿ ಗೋ ಭಕ್ತರ ನೆರವಿನಿಂದ ಬೆಂಗಳೂರಿನಿಂದ ಕೊಳ್ಳೇಗಾಲದ ಕಡೆಗೆ ಟನ್ ಗಟ್ಟಲೆ ಮೇವು ಈಗಾಗಲೇ ರವಾನೆಯಾಗಿದೆ,ಈ ಸತ್ಕಾರ್ಯದಲ್ಲಿ ಇತರ ಮಠಾಧಿಪತಿಗಳು ಸಹ ಭಾಗಿಯಾಗಿದ್ದಾರೆ,ಸಾಮಾಜಿಕ ಜಾಲತಾಣಗಳಲ್ಲಿ ಗೋ ಮಾತೆಯ ಸಂಕಷ್ಟದ ಬಗ್ಗೆ  ಅರಿವು ಮೂಡಿಸುವ ನಿಟ್ಟಿನಲ್ಲಿ "#giveupmeal" ಎಂಬ ಹ್ಯಾಷ್ ಟ್ಯಾಗ್ ಮೂಲಕ  ಸಾವಿರಾರು ಟ್ವೀಟ್ ಮಾಡಲಾಯಿತು, ಗೋ ಮಾತೆಗೆ ಮೇವು ನೀಡುವ ಸಲುವಾಗಿ ಒಂದೊತ್ತು ಊಟ ತ್ಯಜಿಸಿ ಎಂಬುವುದು ಎಂಬುದು ಇದರ ಹಿಂದಿನ  ಉದ್ಧೇಶ,೬೦ ರ ದಶಕದಲ್ಲಿ ದೇಶ ಕಷ್ಟದಲ್ಲಿದಾಗ 'ಲಾಲ್ ಬಹದ್ಧುರ್ ಶಾಸ್ತ್ರೀ' ಅವರು ಒಂದೊತ್ತು ಊಟ ತ್ಯಜಿಸಿ ಎಂದಿದ್ದಾಗ ಎಷ್ಟೋ ಮಂದಿ ಭಾರತೀಯರು ಊಟ ತ್ಯಜಿಸಿದ್ದರು,ರಾಘವೇಶ್ವರ ಶ್ರೀಗಳು  ಗೋವಿಗಾಗಿ ಊಟ ತ್ಯಜಿಸಿ ಎಂದಾಗಲೂ ಸಹ ಎಷ್ಟೋ ಮಂದಿ ಊಟ ಬಿಟ್ಟರು. 

ತ್ರಿವಿಧ ದಾಸೋಹಿ 'ಸಿದ್ದಗಂಗ ಶ್ರೀಗಳ' ೧೧೦ ನೇ ಜನ್ಮದಿನೋತ್ಸವದ ಅಂಗವಾಗಿ ೧೧೦  ಕೆ ಜಿ ಮೇವನ್ನು ಹಸುಗಳಿಗಾಗಿ ಒದಗಿಸಲಾಯಿತು, ಕರ್ನಾಟಕ ರತ್ನ 'ಡಾ ರಾಜಕುಮಾರ್' ಅವರ ೮೯ ನೇ ಜನ್ಮದಿನೋತ್ಸವದ ಪ್ರಯುಕ್ತ ೮೯ ಕೆ ಜಿ ಮೇವನ್ನು ಗೋವುಗಳಿಗೆ ಒದಗಿಸಲಾಯಿತು, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ 'ಯಶ್' ರವರು ಸ್ವತಃ ಹನೂರು ಸುತ್ತ ಮುತ್ತಲಿನ ಗೋ ಶಾಲೆಗಳಿಗೆ ಭೇಟಿ ಕೊಟ್ಟು ಹಸುಗಳಿಗೆ ನೆರವಾದರು, ಕೊಳ್ಳೇಗಾಲದ ಸುತ್ತ ಮುತ್ತ ಗೋವುಗಳಿಗೆ ನೆರವಾಗುತ್ತಿರುವ 'ಧ್ಯಾನ್ ಫೌಂಡೇಶನ್' ಸಹ ಮೇವು ಪೂರೈಕೆ ಕಾರ್ಯದಲ್ಲಿ ಸಕ್ರಿಯವಾಗಿದೆ,ಜನ ಸಾಮಾನ್ಯರು ಸಹ ತಮ್ಮ ತನು ಮನ ಹಾಗು ಧನವನ್ನು ಗೋ ಸೇವೆಗಾಗಿ ಅರ್ಪಿಸುತ್ತಿದ್ದಾರೆ, ಗೋ ಮಾತೆಯಿಂದ ಸಕಲವನ್ನೂ ಪಡೆಯುವ ಮಾನವ ಗೋವುಗಳಿಗೆ ಸಂಕಷ್ಟ ಒದಗಿ ಬಂದಾಗ ಸುಮ್ಮನಿರದೆ ಅದರ ಸಹಾಯಕ್ಕೆ ಧಾವಿಸುವುದು ನಿಜವಾದ ಮಾನವೀಯತೆಯನ್ನು ತೋರುತ್ತದೆ,ಗೋ ಸೇವೆಗಾಗಿ ಭಗವಂತ ಇನ್ನಷ್ಟು ಜನರನ್ನು ಪ್ರೇರೇಪಿಸಲಿ. 

ವಂದೇ ಗೋ ಮಾತರಂ,ಗಾವೋ ವಿಶ್ವಸ್ಯ ಮಾತರಂ 

ಸುಪ್ರೀತ್ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???