ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರನ್ನು ಶಿಕ್ಷಿಸಿದರೆ ತಪ್ಪೇನು?

ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರನ್ನು ಶಿಕ್ಷಿಸಿದರೆ ತಪ್ಪೇನು?

ಒಂದು ತಿಂಗಳ ಹಿಂದೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಚುನಾವಣೆ ನಡೆಯುತಿತ್ತು, ಚುನಾವಣೆ ವೇಳೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಸಿ ಆರ್ ಪಿ ಎಫ್ ಯೋಧರ ಪಡೆಯನ್ನು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು, ಕಾಶ್ಮೀರದಲ್ಲಿ ಬಹುತೇಕ ಸಮಯ ಶಾಂತಿಯನ್ನು ಕದಡುವ ರಾಷ್ಟ್ರ ದ್ರೋಹಿಗಳ ಗುಂಪು ಸದಾ ಎಚ್ಚರವಾಗಿಯೇ ಇರುತ್ತದೆ, ಪ್ರತ್ಯೇಕವಾದಿಗಳಿಂದ ನೆರವು ಪಡೆಯುವ ಪುಂಡರು ಕಾಶ್ಮೀರದಲ್ಲಿ ಪುಂಡಾಟ ನಡೆಸುತ್ತಾರೆ, ಕಾಶ್ಮೀರಿ ಜನಗಳ ಸೇವೆಗೆಂದೇ ನಿಯೋಜಿತರಾಗಿರುವ ಸೈನಿಕರ ವಿರುದ್ಧ ತಿರುಗಿ ಬೀಳುವ ಈ ಗುಂಪು ಸೈನಿಕರರಿಗೆ ನಾನಾ ವಿಧದ ಕಾಟ ಕೊಡುತ್ತಾ ಬಂದಿದೆ,ಸೈನ್ಯದ ವಿರುದ್ಧ ಕಲ್ಲು ತೂರುವ ದೃಶ್ಯಗಳು ಸುದ್ಧಿ ವಾಹಿನಿಗಳಲ್ಲಿ ಬಿತ್ತರವಾಗಿದ್ದನ್ನು ಕಂಡು ಮರುಗದವರಿಲ್ಲ,ಇದೇ ರೀತಿಯ ಕಲ್ಲು ತೂರುವ ಹೇಡಿ ಕೃತ್ಯ ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ಜರುಗಿತ್ತು, ಕಲ್ಲು ತೂರಾಟ ತಡೆಯಲು "ಮೇಜರ್ ಗೊಗೋಯ್" ಅವರು ಒಂದು ಉಪಾಯ ಮಾಡುತ್ತಾರೆ, ಆ ಉಪಾಯವೇನೆಂದರೆ ಕಲ್ಲು ತೂರಾಟ ಮಾಡುತ್ತಿರುವ ಗುಂಪಿನಿಂದ ಒಬ್ಬನನ್ನು ಗುರುತಿಸುವುದು ಹಾಗೂ ಅವನನ್ನು ಸೇನಾ ವಾಹನವಾದ ಜೀಪಿನ ಮುಂಬದಿಯಲ್ಲಿ ಕಟ್ಟುವುದು, ಕಶ್ಮೀರ ಮತ್ತಷ್ಟು ಉದ್ವಿಗ್ನವಾಗದಿರಲೆಂದು ಈ ಉಪಾಯ ಮಾಡಿದ ಮೇಜರ್ ಗೊಗೋಯ್ ಅವರ ದಿಟ್ಟ ನಡೆಯನ್ನು ನಾವೆಲ್ಲಾ ಮೆಚ್ಚಲೇಬೇಕು, ಅವರ ಧೈರ್ಯಕ್ಕೆ ನಮ್ಮದೊಂದು ಸಲಾಂ, ಈ ರೀತಿ ಮಾಡಿದ್ದರಿಂದ ಕಲ್ಲು ತೂರಾಟ ಕಡಿಮೆಯಾಯಿತು ಹಾಗೂ ಪರಿಸ್ಥಿತಿ ಶಾಂತವಾಯಿತು, ಈ ದಿಟ್ಟ ನಡೆಯನ್ನು ಸಮರ್ಥಿಸಿಕೊಂಡ ಜನರಲ್ "ಬಿಪಿನ್ ರಾವತ್" ಮೇಜರ್ ಗೊಗೋಯ್ ಅವರನ್ನು ಗೌರವಿಸುತ್ತಾರೆ ಹಾಗೂ ಅವರ ಪರವಾಗಿ ನಿಲ್ಲುತ್ತಾರೆ. 

ಮೇಜರ್ ಗೊಗೋಯ್ ಅವರ ಈ ನಡೆ ಕೆಲ ಸ್ವಾರ್ಥಿಗಳ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ, ರಾಜಕೀಯ ನಾಯಕರಾದ 'ರಾಜ' ಹಾಗೂ 'ಶರದ್ ಯಾದವ್' ಮೇಜರ್ ಗೊಗೋಯ್ ಹಾಗು ಸೈನ್ಯದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ,ಸೈನ್ಯ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಶ್ನಿಸುತ್ತಾರೆ, ದೇಶ ಸೇವೆಯಲ್ಲಿ ನಿರತರಾಗಿರುವ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುವ ಈ ನಾಯಕರುಗಳಿಗೆ ನೈತಿಕತೆಯೇ ಇಲ್ಲವೇನೋ ಎನಿಸುತ್ತದೆ. ಸದಾ ವಿವಾದದಲ್ಲಿ ಸಿಲುಕಿರುವ 'ಶೋಭಾ ಡೇ' ಮೇಜರ್ ಗೊಗೋಯ್ ಬಗ್ಗೆ ಹಗುರವಾಗಿ ಮಾತನಾಡುತ್ತಾ ಈ ನಡೆಯ ಬಗ್ಗೆ ಸಾರ್ವಜನಿಕವಾಗಿ ಸಮೀಕ್ಷೆ ಆಗ ಬೇಕು ಎನ್ನುವ ದರ್ಪ ನುಡಿಗಳನ್ನು ಆಡುತ್ತಾರೆ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ರಕ್ಷಣೆಯಲ್ಲಿ ನಿರತರಾಗಿರುವ ಸೈನಿಕನಿಗೆ ಕೆಲ ಲೇಖಕರು ಕೊಡುವ ಬೆಲೆ ಇದು! 'ಅರುಂಧತಿ ರಾಯ್' ಎಂಬ ಸ್ವಯಂಘೋಷಿತ ಹೋರಾಟಗಾರ್ತಿಯ ಬಗ್ಗೆ ಹಿಂದಿ ಚಿತ್ರರಂಗದ ನಟ 'ಪರೇಶ್ ರಾವಲ್' ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತು, ಕಾಶ್ಮೀರಿ ಯುವಕನ ಬದಲಿಗೆ ಅರುಂಧತಿ ರಾಯ್ ಅವರನ್ನು ಜೀಪಿಗೆ ಕಟ್ಟಿದ್ದರೆ ಸರಿ ಹೋಗುತ್ತಿತ್ತು ಎಂದಿದ್ದ ಪರೇಶ್ ಅವರ ಪರವಾಗಿ ಕೆಲವರು ನಿಂತರೆ ಅವರ ವಿರುದ್ಧವಾಗಿ ಕೆಲವರು ನಿಂತರು, ಪ್ರತ್ಯೇಕವಾದಿಗಳಿಂದ ಹಾಗು ವಿದೇಶಿ ಎನ್ ಜಿ ಒ ಗಳಿಂದ ನೆರವು ಪಡೆಯುವ ಅರುಂಧತಿ ರಾಯ್  ರಂತಹ ಹೋರಾಟಗಾರರು ಕಾಶ್ಮೀರದಲ್ಲಿ ದಂಗೆ ಹೆಚ್ಚಾಗಲು ಕಾರಣವಾಗಿರುತ್ತಾರೆ, ಸದಾ ಪ್ರತ್ಯೇಕವಾದಿಗಳ ಹಾಗೂ ಭಯೋತ್ಪಾದಕರ ಪರ ನಿಲ್ಲುವ ಸೆಕ್ಯುಲರ್ ಗಳನ್ನೂ ಖಂಡಿಸಿದರೆ ಇಷ್ಟೊಂದು ರಾದ್ಧಾಂತಗಳಾಗುತ್ತದೆ ಎಂದರೆ ಅವರ  ದುಷ್ಟ ಪ್ರಭಾವ ಇನ್ನೆಷ್ಟಿರಬೇಡ. 

 ಮಾನವ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಪುಟಗಟ್ಟಲೆ ಮಾತನಾಡುವ ಚಿಂತಕರು ಇಂತಹ ಸಮಯದಲ್ಲಿ ಎಲ್ಲಿ ಮಾಯವಾಗಿ ಬಿಡುತ್ತಾರೋ ಎನ್ನುವುದ್ದನ್ನು ಭಗವಂತನೇ ಬಲ್ಲ! ಬರ್ಖಾ, ಸಾಗರಿಕ, ಸಬಾ ನಖ್ವಿ, ಶೋಭಾ ಡೇ, ರಾಣಾ ಅಯುಬ್ಬ್ ರಿಗೆ ಒಂದು ನ್ಯಾಯ? ಸೋನು ನಿಗಮ್, ಪರೇಶ್ ರಾವಲ್, ಅಭಿಜೀತ್, ರವೀನಾ ಟಂಡನ್, ಸೆಹ್ವಾಗ್ ಹಾಗು ಗಂಭೀರ್ ಅವರಿಗೆ ಇನ್ನೊಂದು ನ್ಯಾಯ??  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಯೋಗ"

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???