"ನೂತನ ಅಧ್ಯಕ್ಷರ ಆಯ್ಕೆ ಹಾಗೂ ಅದರ ಪ್ರಭಾವಗಳು"
"ನೂತನ ಅಧ್ಯಕ್ಷರ ಆಯ್ಕೆ ಹಾಗೂ ಅದರ ಪ್ರಭಾವಗಳು"
ಸತತ ಭ್ರಷ್ಟಾಚಾರದಿಂದ ಕಂಗೆಟ್ಟಿದ್ದ ಭಾರತೀಯ ಸತ್ಪ್ರಜೆಗಳು ೨೦೧೪ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 'ಭಾರತೀಯ ಜನತಾ ಪಕ್ಷಕ್ಕೆ' ಬಹುಮತ ನೀಡಿದರು, ಬಹುತೇಕ ವರ್ಷಗಳ ನಂತರ ಭಾ ಜ ಪ ಸ್ವತಂತ್ರವಾಗಿ ಸರ್ಕಾರ ರಚಿಸುವ ಮಟ್ಟಿಗೆ ಶಕ್ತಿಶಾಲಿ ಪಕ್ಷವಾಗಿ ಹೊರಹೊಮ್ಮಿತ್ತು,ಮೇ ೨೬ ರಂದು 'ನರೇಂದ್ರ ದಾಮೋದರ್ ದಾಸ್ ಮೋದಿ' ಅವರು ಭಾರತದ ಪ್ರಧಾನಿಯಾಗಿ ಆಯ್ಕೆ ಆದರು, ಹತ್ತು ವರ್ಷಗಳ ಕಾಲ ನಡೆದ ದುರಾಡಳಿತ, ಅಸಮರ್ಥ ನಾಯಕತ್ವ, ಇತರರ ಕೈಗೊಂಬೆ ಆಗಿದ್ದ ಆಡಳಿತ ಯಂತ್ರ, ಹೀಗೆ ಹತ್ತು ಹಲವು ವಿಷಯಗಳಿಂದ ಜನಸಮಾನ್ಯರು ಆಗಿನ ಆಡಳಿತ ಪಕ್ಷದ ವಿರುದ್ಧ ರೋಸಿ ಹೋಗಿದ್ದರು, ಆಗ ಜನರ ಪಾಲಿಗೆ ಆಶಾಕಿರಣವಾಗಿ ಕಂಡಿದ್ದು ಗುಜರಾತಿನ ಯಶಸ್ವಿ ಮುಖ್ಯಮಂತ್ರಿ ಆಗಿದ್ದ ಮೋದಿ, ದಶಕಗಳ ಕಾಲ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಮೋದಿ ಅವರು ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದರು, ನೀರಿನ ಸಮಸ್ಯೆ ಇದ್ದ ಗುಜರಾತಿನ ಹಲವೆಡೆಗಳಲ್ಲಿ ನೂತನ ತಂತ್ರಜ್ಞಾನದ ಮೂಲಕ ಆ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿ ಆಗಿದ್ದರು, ಕೃಷಿಕರಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿ ರೈತರ ಪಾಲಿನ ಆಶಾಕಿರಣವಾದರು, ಗುಜರಾತ್ ಪ್ರವಾಸೋದ್ಯಮವನ್ನು ಅಭಿವೃದ್ದಿಸಿ ಜನ ಸಮೂಹವನ್ನು ಗುಜರಾತಿನೆಡೆಗೆ ಸೆಳೆದರು, ಉತ್ತಮ ರಸ್ತೆಗಳನ್ನು ಕಲ್ಪಿಸಿಕೊಡುವ ಮೂಲಕ ಜನರಿಗೆ ಹತ್ತಿರವಾದರು, ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ಪೂರೈಕೆ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿ ಭೇಷ್ ಎನಿಸಿಕೊಂಡರು,ಮೋದಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿರಲಿಲ್ಲ. ಭ್ರಷ್ಟಾಚಾರ ರಹಿತರಾಗಿದ್ದ ಹಾಗೂ ಅಭಿವೃದ್ಧಿಯ ಹರಿಕಾರರಾಗಿದ್ದ ಮೋದಿ ಅವರನ್ನು ಭಾ ಜ ಪ ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತು, ಧಣಿವರಿಯದೆ ನೂರಾರು ಕಡೆ ಪ್ರಚಾರ ಮಾಡಿದ ಮೋದಿ ಎಲ್ಲೆಡೆ ಮೋಡಿ ಮಾಡಿದ್ದರು, ತಮ್ಮ ಪ್ರಖರ ಭಾಷಣದ ಮೂಲಕ ಯುವಕರಿಂದ ಹಿಡಿದು ಹಿರಿಯರ ವರೆಗೂ ಎಲ್ಲ ವರ್ಗದ ಜನರನ್ನು ತಮ್ಮ ಕಡೆ ಸೆಳೆದಿದ್ದರು, ಜನಮನ್ನಣೆಯಿಂದ ಪ್ರಧಾನ ಸೇವಕನಾಗಿ ಆಯ್ಕೆಯಾದ ಮೋದಿ ಅವರು ಕಳೆದ ಮೂರು ವರ್ಷಗಳಲ್ಲಿ ಹತ್ತಾರು ಹೊಸ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ, 'ನಿರಂತರ ವಿದ್ಯುತ್ ಸಂಪರ್ಕ, ಬಡವರಿಗೆ ಎಲ್ ಪಿ ಜಿ ಸಿಲಿಂಡರ್ ವಿತರಣೆ,ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ,ಕಾಲಧನದ ವಿರುದ್ಧ ಸಮಾರ ಸಾರಿ ನೋಟು ಅಪನಗದೀಕರಣ,ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ, ಖಾದಿ ಉದ್ಯಮಕ್ಕೆ ಪ್ರೋತ್ಸಾಹ,ಮೇಕ್ ಇನ್ ಇಂಡಿಯಾ,ಭಯೋತ್ಪಾದಕರ ನಿರ್ಮೂಲನೆಗೆ ಸರ್ಜಿಕಲ್ ಸ್ಟ್ರೈಕ್ ' ಅಂತಹ ದಿಟ್ಟ ನಡೆಯನ್ನು ಕೈಗೊಂಡು ಮತ್ತಷ್ಟು ಜನಪ್ರಿಯರಾಗಿದ್ದಾರೆ, '೨೦೨೨' ರ ಹೊತ್ತಿಗೆ ಭಾರತವನ್ನು ಬಲಿಷ್ಠ ಹಾಗೂ ಶ್ರೇಷ್ಠ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಮೋದಿ ಅವರಿಗೆ ಕೋಟ್ಯಂತರ ಭಾರತೀಯರ ಸಹಕಾರ ಅತ್ಯಗತ್ಯ.ಮೋದಿ ಪ್ರಧಾನಿ ಆಗಿ ಆಯ್ಕೆ ಆದ ನಂತರ ಭಾರತದ ಬಗ್ಗೆ ವಿದೇಶಗಳಲ್ಲಿ ಉತ್ತಮ ಅಭಿಪ್ರಾಯ ಮೂಡುತ್ತಿದೆ, ಸಮರ್ಥ ವ್ಯಕ್ತಿಯ ಆಯ್ಕೆ ರಾಷ್ಟ್ರದ ಸರ್ವೋನ್ನತಿಗೆ ಅಡಿಗಲ್ಲಾಗಿದೆ.
ಅಮೇರಿಕಾದಲ್ಲಿ ಕಳೆದ ಹತ್ತು ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದವರು 'ಬರಾಕ್ ಒಬಾಮ', ಹಲವರಾರು ಯಶಸ್ವಿ ಯೋಜನೆಗಳಿಗೆ ಕಾರಣೀಭೂತರಾಗಿದ್ದ ಒಬಾಮ ಅವರು ಕೆಲ ಸಂಗತಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದರು, ಕೆಲವೇ ತಿಂಗಳುಗಳ ಹಿಂದೆ ನಡೆದ ಅದ್ಯಕ್ಷೀಯ ಚುನಾವಣೆ ವಿಶ್ವದಾದ್ಯಂತ ಭಾರೀ ಸಂಚಲನವನ್ನೇ ಉಂಟು ಮಾಡಿತ್ತು, ಚುನಾವಣೆಯ ಕಣದಲ್ಲಿದ್ದ ಡೊನಾಲ್ಡ್ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ನಾನಾ ಬಗೆಯ ಪ್ರಚಾರಗಳನ್ನು ಮಾಡುವಲ್ಲಿ ನಿಸ್ಸೀಮರಾಗಿದ್ದರು, ಸಮೀಕ್ಷೆಗಳು ಕ್ಲಿಂಟನ್ ಪರವಾಗಿದ್ದರು ಸಹ 'ಡೊನಾಲ್ಡ್ ಟ್ರಂಪ್' ಗೆಲುವಿನ ನಗೆ ಬೀರಿ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆ ಆದರು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ 'ವಲಸೆ ನೀತಿಗಳ' ಬಗ್ಗೆ ಮಾರ್ಪಾಡು ತರಲು ಹೋಗಿ ಪೇಚಿಗೆ ಸಿಲುಕಿ ಕೊಂಡರು, ಇತರರ ಸಲಹೆಯ ಮೇರೆಗೆ ಕೆಲ ಮಾರ್ಪಾಡುಗಳನ್ನು ತರಬೇಕಾದ ಅನಿವಾರ್ಯತೆ ಸೃಷ್ಟಿ ಆಯಿತು, ಅಮೆರಿಕನ್ನರಿಗೆ ಹೆಚ್ಚೆಚ್ಚು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲ ನಿರ್ಧಾರ ಕೈಗೊಂಡರು, 'ವೀಸಾ' ನೀತಿಗಳು ಬಿಗಿಯಾದ ಕಾರಣ ಇತರ ರಾಷ್ಟ್ರಗಳ ಜನರು ಟ್ರಂಪ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು,ಶತ್ರು ರಾಷ್ಟ್ರದ ವಿರುದ್ಧ ಕೈಕೊಂಡ ಕಾರ್ಯಾಚರಣೆಯು ಸಹ ಇತರರ ಆಕ್ರೋಶಕ್ಕೆ ಕಾರಣವಾಯಿತು,ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಟ್ರಂಪ್ ತೆಗೆದುಕೊಂಡ ಬಹುತೇಕ ನಿರ್ಧಾರಗಳು ವಿರೋಧಕ್ಕೆ ತುತ್ತಾದವು,ಬಲಿಷ್ಠ ರಾಷ್ಟ್ರದ ಅಧ್ಯಕ್ಷರ ಆಯ್ಕೆ ಇತರ ರಾಷ್ಟ್ರಗಳ ಮೇಲೂ ಸಹ ಅಗಾಧ ಪ್ರಭಾವ ಬೀರುತ್ತದೆ ಎನ್ನುವದಕ್ಕೆ ಇದು ಒಂದು ಉದಾಹರಣೆ.
ನೆನ್ನೆಯಷ್ಟೇ ಫ್ರಾನ್ಸ್ ನ ಅಧ್ಯಕ್ಷರಾಗಿ 'ಇಮ್ಯಾನ್ಯುಯೆಲ್ ಮಾರ್ಕೋನ್' ನಿಯೋಜಿತರಾಗಿದ್ದರೆ, ಬಲಪಂಥೀಯ, ಎಡಪಂಥೀಯ ಹಾಗೂ ಸಮಾಜವಾದದಂತಹ ಸಿದ್ದಾಂತಗಳಿಂದ ದೂರ ಕಾಯ್ದುಕೊಂಡಿರುವ ತಟಸ್ಥ ಅಭ್ಯರ್ಥಿ ಫ್ರಾನ್ಸ್ ನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ರೋಚಕ ಸಂಗತಿ,ಐರೋಪ್ಯ ಒಕ್ಕೂಟದಲ್ಲಿ ಉಳಿಯಲು ಸಮ್ಮತಿಸಿದ್ದ ಮಾರ್ಕೊನ್ ಅವರ ನಿರ್ಧಾರ ಅವರ ಪಾಲಿಗೆ ವರದಾನವಾಯಿತು,ಎದುರಾಳಿಯ ಪರವಿದ್ಧ ವಿರೋಧ ಇವರಿಗೆ ಇಂಬು ನೀಡಿತು ಹಾಗೂ ಗೆಲುವಿನನ ನಾಗಾಲೋಟಕ್ಕೆ ಆಡಳಿತ ವಿರೋಧಿ ಆಲೆಯು ಒಂದು ಬಲವಾದ ಕಾರಣವಾಗಿತ್ತು,'ಭಯೋತ್ಪಾದನೆಯ' ವಿರುದ್ಧದ ಹೋರಾಟಕ್ಕೆ 'ಸೈ' ಎಂದಿರುವ ಅಧ್ಯಕ್ಷರ ನಡೆಗೆ ಇತರ ರಾಷ್ಟ್ರದ ನಾಯಕರು 'ಜೈ' ಎನ್ನುತ್ತಿದ್ದಾರೆ.
ಸುಪ್ರೀತ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ