"ಕ್ರಾಂತಿಯ ಹರಿಕಾರ ಭಗತ್ ಸಿಂಗ್"
"ಕ್ರಾಂತಿಯ ಹರಿಕಾರ ಭಗತ್ ಸಿಂಗ್" ದೇಶಭಕ್ತರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲಬಲ್ಲ ಅಪ್ರತಿಮ ದೇಶಭಕ್ತ, ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್ ರ ಜನನವಾಗಿದ್ದು ೧೯೦೭ ರ ಸೆಪ್ಟೆಂಬರ್ ೨೮ ರಂದು, ತಂದೆ ಕಿಶನ್ ಸಿಂಗ್ ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿದ್ದವರು,ಭಗತ್ ನ ಚಿಕ್ಕಪ್ಪ ಅಜಿತ್ ಸಿಂಗ್ ಆಗಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ದೇಶಪ್ರೇಮಿಗಳನ್ನು ಹುರಿದುಂಬಿಸಿದ್ದರು,ಇಂತಹ ದೇಶಭಕ್ತರ ವಂಶದಲ್ಲಿ ಜನಿಸಿದ ಭಗತನಿಗೆ ರಕ್ತದಲ್ಲೇ ದೇಶಭಕ್ತಿ ಹರಿಯುತ್ತಿತ್ತು, ಜಲಿಯನ್ ವಾಲಾಬಾಗ್ ನಲ್ಲಿ ನಡೆದ ಘೋರ ಕೃತ್ಯದಿಂದ ಅಪಾರವಾಗಿ ನೊಂದಿದ್ದ ಲಕ್ಷಾಂತರ ಭಾರತೀಯರಲ್ಲಿ ಭಗತ್ ಕೂಡ ಒಬ್ಬ, ಜಲಿಯನ್ ವಾಲಾಬಾಗ್ ನಲ್ಲಿ ನೆಡೆದ ಅಮಾನವೀಯ ದುಷ್ಕೃತ್ಯದಲ್ಲಿ ಡಯರ್ ಎಂಬ ರಾಕ್ಷಸಿಯ ಪ್ರವೃತ್ತಿಯುಳ್ಳ ನೀಚ ಬ್ರಿಟಿಷ್ ಅಧಿಕಾರಿ ಸಾವಿರಾರು ಅಮಾಯಕ ಭಾರತೀಯರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದ,ಇದರಿಂದ ಪೆಟ್ಟು ತಿಂದ ಭಾರತೀಯರು ಬ್ರಿಟಿಷರ ವಿರುದ್ಧ ಉಗ್ರವಾಗಿ ಹೋರಾಡಲು ಸನ್ನದ್ಧರಾದರು.ಚಿಕ್ಕಂದಿನಿಂದ ದೇಶಭಕ್ತಿಯನ್ನು ಬೆಳೆಸಿಕೊಂಡಿದ್ದ ಭಗತ್ ಸಿಂಗ್ ತಾರುಣ್ಯದಲ್ಲಿ ಕ್ರಾಂತಿಕಾರಿ ವಿಚಾರಧಾರೆಯೆಡೆಗೆ ಸೆಳೆಯಲ್ಪಟ್ಟಿದ್ದ, ಸುಖ್ ದೇವ್ ಹಾಗೂ ಗೆಳೆಯರ ಜೊತೆಗೂಡಿ ಬ್ರಿಟಿಷರ ವಿರುದ್ಧ ತೊಡೆ ತಟ್ಟಲು ಸಮಾನಮನಸ್ಕರ ಗುಂಪನ್ನು ಹುಟ್ಟು ಹಾಕಿದ್ದ, ಕ್ರಾಂತಿಕಾರಿ ರಾಮ ಪ್ರಸಾದ್ ಬಿಸ್ಮಿಲ್ಲರ ಜೊತೆಗೂಡಿ ಕ...