"ಕ್ರಾಂತಿಯ ಹರಿಕಾರ ಭಗತ್ ಸಿಂಗ್"
"ಕ್ರಾಂತಿಯ ಹರಿಕಾರ ಭಗತ್ ಸಿಂಗ್"
ದೇಶಭಕ್ತರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲಬಲ್ಲ ಅಪ್ರತಿಮ ದೇಶಭಕ್ತ, ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್ ರ ಜನನವಾಗಿದ್ದು ೧೯೦೭ ರ ಸೆಪ್ಟೆಂಬರ್ ೨೮ ರಂದು, ತಂದೆ ಕಿಶನ್ ಸಿಂಗ್ ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿದ್ದವರು,ಭಗತ್ ನ ಚಿಕ್ಕಪ್ಪ ಅಜಿತ್ ಸಿಂಗ್ ಆಗಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ದೇಶಪ್ರೇಮಿಗಳನ್ನು ಹುರಿದುಂಬಿಸಿದ್ದರು,ಇಂತಹ ದೇಶಭಕ್ತರ ವಂಶದಲ್ಲಿ ಜನಿಸಿದ ಭಗತನಿಗೆ ರಕ್ತದಲ್ಲೇ ದೇಶಭಕ್ತಿ ಹರಿಯುತ್ತಿತ್ತು, ಜಲಿಯನ್ ವಾಲಾಬಾಗ್ ನಲ್ಲಿ ನಡೆದ ಘೋರ ಕೃತ್ಯದಿಂದ ಅಪಾರವಾಗಿ ನೊಂದಿದ್ದ ಲಕ್ಷಾಂತರ ಭಾರತೀಯರಲ್ಲಿ ಭಗತ್ ಕೂಡ ಒಬ್ಬ, ಜಲಿಯನ್ ವಾಲಾಬಾಗ್ ನಲ್ಲಿ ನೆಡೆದ ಅಮಾನವೀಯ ದುಷ್ಕೃತ್ಯದಲ್ಲಿ ಡಯರ್ ಎಂಬ ರಾಕ್ಷಸಿಯ ಪ್ರವೃತ್ತಿಯುಳ್ಳ ನೀಚ ಬ್ರಿಟಿಷ್ ಅಧಿಕಾರಿ ಸಾವಿರಾರು ಅಮಾಯಕ ಭಾರತೀಯರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದ,ಇದರಿಂದ ಪೆಟ್ಟು ತಿಂದ ಭಾರತೀಯರು ಬ್ರಿಟಿಷರ ವಿರುದ್ಧ ಉಗ್ರವಾಗಿ ಹೋರಾಡಲು ಸನ್ನದ್ಧರಾದರು.ಚಿಕ್ಕಂದಿನಿಂದ ದೇಶಭಕ್ತಿಯನ್ನು ಬೆಳೆಸಿಕೊಂಡಿದ್ದ ಭಗತ್ ಸಿಂಗ್ ತಾರುಣ್ಯದಲ್ಲಿ ಕ್ರಾಂತಿಕಾರಿ ವಿಚಾರಧಾರೆಯೆಡೆಗೆ ಸೆಳೆಯಲ್ಪಟ್ಟಿದ್ದ, ಸುಖ್ ದೇವ್ ಹಾಗೂ ಗೆಳೆಯರ ಜೊತೆಗೂಡಿ ಬ್ರಿಟಿಷರ ವಿರುದ್ಧ ತೊಡೆ ತಟ್ಟಲು ಸಮಾನಮನಸ್ಕರ ಗುಂಪನ್ನು ಹುಟ್ಟು ಹಾಕಿದ್ದ, ಕ್ರಾಂತಿಕಾರಿ ರಾಮ ಪ್ರಸಾದ್ ಬಿಸ್ಮಿಲ್ಲರ ಜೊತೆಗೂಡಿ ಕಾಕೋರಿ ದರೋಡೆ ಮಾಡುವಲ್ಲಿ ಯಶಸ್ವಿಯಾಗಿದ್ದ, ಭಾರತೀಯರಿಂದ ಲೂಟಿ ಮಾಡಿದ್ದ ಹಣವನ್ನು ಆಂಗ್ಲರಿಂದ ಕಸಿಯುವುದು ಈ ದರೋಡೆಯ ಹಿಂದಿನ ಉದ್ದೇಶವಾಗಿತ್ತು.ಇಷ್ಟಲ್ಲದೆ ಬಂದೂಕು ಹಾಗೂ ಬಾಂಬ್ ಗಳನ್ನೂ ಲೂಟಿ ಮಾಡುವ ಮೂಲಕ ಕ್ರಾಂತಿಕಾರಿ ಹೋರಾಟಕ್ಕೆ ಅಣಿಯಾಗುವುದು ಅಂದಿನ ಸಮಯದ ಅನಿವಾರ್ಯವಾಗಿತ್ತು.
ಕ್ರಾಂತಿಕಾರಿ ರಾಮ್ ಪ್ರಸಾದ್ ಬಿಸ್ಮಿಲ್ಲರ ಪರಿಚಯವಾಗಿದ್ದ ಭಗತ್ ನಿಗೆ ನಂತರ ಪರಿಚಿತರಾಗಿದ್ದು ಪಂಡಿತ್ ಚಂದ್ರಶೇಖರ್ ತಿವಾರಿ( ಚಂದ್ರಶೇಖರ್ ಅಜಾದ್), ದೈಹಿಕವಾಗಿ ಕಟ್ಟುಮಸ್ತಾಗಿದ್ದ ಆಜಾದರು ಭೌದ್ಧಿಕವಾಗಿಯೂ ಅಷ್ಟೇ ತೀಕ್ಷ್ಣರಾಗಿದ್ದರು. ಭಗತ್,ರಾಜಗುರು ,ಸುಖ್ ದೇವ್ & ಬಟುಕೇಶ್ವರ ದತ್ತರನ್ನು ಒಳಗೊಂಡ ಕ್ರಾಂತಿಕಾರಿ ಯುವಕರ ಸೈನ್ಯ ಆಜಾದರ ಮಾರ್ಗದರ್ಶನದಲ್ಲಿ ಸಶಕ್ತವಾಗಿತ್ತು. ಪಂಜಾಬ್ ನ ಕೇಸರಿ ಎಂದೇ ಪ್ರಖ್ಯಾತರಾಗಿದ್ದ ಲಾಲಾ ಲಜಪತ ರಾಯರು ಬ್ರಿಟಿಷರ ವಿರುದ್ಧ ಸಿಡಿದೆದ್ದು ಬೃಹತ್ ಮಟ್ಟದ ಪ್ರತಿಭಟನೆಗೆ ಸಿದ್ಧರಾಗಿದ್ದರು, ಪ್ರತಿಭಟನೆಯಯಲ್ಲಿ ಕ್ರಾಂತಿಕಾರಿಗಳ ಗುಂಪಿನೊಂದಿನಿಗೆ ಭಗತ್ ಸಿಂಗ್ ಸಹ ಪಾಲ್ಗೊಂಡಿದ್ದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಯನ್ನು ತಡೆಯಲಾರದ ನೀಚ ಪರಂಗಿಗಳ ಪಡೆ ಲಾಲಾ ಲಜಪತ ರಾಯರನ್ನು ಕೊಂದೇ ಬಿಟ್ಟಿತ್ತು, ಲಜಪತ ರಾಯರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯಿತು,ಸೇಡನ್ನು ತೀರಿಸಿಕೊಳ್ಳಲು ಸಿದ್ಧರಾಗಿದ್ದ ಅಜಾದ್, ಭಗತ್, ರಾಜಗುರು ಹಾಗೂ ಕ್ರಾಂತಿಕಾರಿಗಳ ಬಳಗ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ಹತ್ಯೆಗೆ ಸಂಚು ರೂಪಿಸಿತ್ತು, ಲಜಪತ ರಾಯರನ್ನು ಕೊಂದ ಪಾಪಿ ಸ್ಯಾಂಡರ್ಸ್ ನನ್ನ ಕೊಲ್ಲಲ್ಲು ತೆರಳಿದ್ದ ಕ್ರಾಂತಿಕಾರಿಗಳ ಸೈನ್ಯ ಸ್ಯಾಂಡರ್ಸ್ ಬದಲಿಗೆ ಸ್ಕಾಟ್ನನ್ನು ಕೊಂದಿತ್ತು, ಸ್ಕಾಟ್ ಹತ್ಯೆಯ ಬಳಿಕ ಸಿಟ್ಟಾದ ಬ್ರಿಟಿಷರ ಪಾಳಯ ಅಜಾದ್ ಹಾಗೂ ಭಗತ್ ರ ಗುಂಪಿನ ಮೇಲೆ ಹದ್ದಿನ ಕಣ್ಣಿಟ್ಟಿತ್ತು.ಒಡೆದು ಆಳುವ ನೀತಿಯಲ್ಲಿ ನಿಸ್ಸೀಮರಾಗಿದ್ದ ಬ್ರಿಟಿಷರು ದೇಶದ್ರೋಹಿಗಳಿಂದ ನೆರವು ಪಡೆದು ದೇಶಪ್ರೇಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು,ಬ್ರಿಟಿಷರಿಂದ ಹತನಾಗಲು ಇಚ್ಛಿಸದ ಅಜಾದ್ "ಮೈ ಅಜಾದ್ ಹ್ಞೂ ಅಜಾದ್ ಹೀ ರೆಹುಂಗ" ಎನ್ನುತ್ತಾ ತಾಯಿ ಭಾರತೀಯ ಮಡಿಲಲ್ಲಿ ಪ್ರಾಣ ಬಿಟ್ಟರು,೨೩ ರ ಹರೆಯದಲ್ಲಿ ನೇಣಿಗೆ ಶರಣಾದ ಭಗತ್, ರಾಜ್ ಗುರು, ಸುಖ್ ದೇವ್ ಹಾಗೂ ಕ್ರಾಂತಿಕಾರಿಗಳ ತ್ಯಾಗ ಹಾಗೂ ಬಲಿದಾನ ಎಂದೆಂದಿಗೂ ಅಮರ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ