ಆಧಾರಗಳಿಲ್ಲದೆ ಮೋದಿ ಹಾಗೂ ಸಂಘ ಪರಿವಾರವನ್ನು ದೂಷಿಸುವುದು ತರವೇ???
ಆಧಾರಗಳಿಲ್ಲದೆ ಮೋದಿ ಹಾಗೂ ಸಂಘ ಪರಿವಾರವನ್ನು ದೂಷಿಸುವುದು ತರವೇ???
ಪತ್ರಕರ್ತೆ ಗೌರಿ ಲಂಕೇಶ್ ಸೆಪ್ಟೆಂಬರ್ ೫ ರ ರಾತ್ರಿಯಂದು ಅಪರಿಚಿತರ ಗುಂಡಿನ ದಾಳಿಯಿಂದ ಕೊಲೆಗೀಡಾಗುತ್ತಾರೆ,ಕೊಲೆ ಆದ ಕೆಲವೇ ತಾಸಿನಲ್ಲಿ ಹಲವೆಡೆ ಪ್ರತಿಭಟನೆಗಳಾಗುತ್ತದೆ, ಕೊಲೆಯನ್ನು ಖಂಡಿಸಿ ಪ್ರತಿಭಟಿಸುವದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಆದರೆ ಘಟನೆಯ ಬಗ್ಗೆ ವರದಿ ಬರುವ ಮುನ್ನವೇ ನಿರ್ದಿಷ್ಟ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ದೂಷಿಸುವುದು ಎಷ್ಟು ಸರಿ?? ಗೌರಿ ಲಂಕೇಶ್ ಅವರ ವಿಚಾರಧಾರೆಗಳು ಹಾಗೂ ಇತರರ ವಿಚಾರಧಾರೆಗಳು ಒಂದೇ ಆಗಿರಬೇಕೆಂಬ ಬಗ್ಗೆ ಯಾವುದೇ ಕಾನೂನುಗಳಾಗಲಿ ನಮ್ಮ ಸಂವಿಧಾನದಲ್ಲಿಲ್ಲ, ಗೌರಿ ಲಂಕೇಶ್ ಅವರ ಸಿದ್ದಾಂತಗಳನ್ನು ಒಪ್ಪದವರು ಅದರ ವಿರುದ್ಧ ದನಿ ಎತ್ತಿದ್ದಾರೆ ಅದೇ ರೀತಿ ಗೌರಿ ಲಂಕೇಶ್ ಸಹ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಆಧಾರದ ಮೇಲೆ ಇತರರ ವಿರುದ್ಧ ದನಿ ಎತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪುಟಗಟ್ಟಲೆ ಮಾತನಾಡುವವರಿಗೆ ಇದರ ಬಗ್ಗೆ ಅರಿವಿಲ್ಲದಿರುತ್ತದೆಯೇ? ಗೌರಿ ಲಂಕೇಶ್ ಕೊಲೆಯಾದ ಮಾರನೆಯ ದಿವಸ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿ ಮಾತನಾಡುತ್ತಾ " ದೇಶದಲ್ಲಿ ಆರ್ ಎಸ್ ಎಸ್ ಹಾಗೂ ಭಾ ಜ ಪ ವಿರುದ್ಧ ಮಾತನಾಡುವದೇ ತಪ್ಪಾಗಿದೆ" ಎನ್ನುತ್ತಾರೆ, ಕೊಲೆಯ ಬಗ್ಗೆ ತನಿಖೆ ಈಗಷ್ಟೇ ಶುರುವಾಗಿದ್ದು ಪೊಲೀಸರ ಬಳಿ ಅಥವಾ ಸರ್ಕಾರದ ಬಳಿ ಯಾವುದೇ ರೀತಿಯ ಖಚಿತ ಮಾಹಿತಿ ಇಲ್ಲದಿರುವಾಗ ಏಕಾಏಕಿ ಸಂಘ ಪರಿವಾರವನ್ನು ಜರಿಯುವ ಉದ್ದಟತನ ತೋರುವುದು ನಾಚಿಕೆಗೇಡಿನ ಸಂಗತಿ.
ಗೌರಿ ಲಂಕೇಶ್ ಕೊಲೆಯನ್ನು ಖಂಡಿಸುವ ಭರದಲ್ಲಿ ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರನ್ನು ಬ್ಲಾಕ್ ಮಾಡುವ ಮೂಲಕ ತಮ್ಮ ಸಣ್ಣತನವನ್ನು ತೋರಿಸಿದ್ದಾರೆ, ಕಳೆದ ಮೂರು ವರ್ಷಗಳಿಂದ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ ಸರ್ಕಾರವನ್ನು ಮುನ್ನೆಡುಸುತ್ತಿರುವ ಮೋದಿಯವರನ್ನು ಹೇಗಾದರೂ ಮಾಡಿ ಹಳಿಯಬೇಕೆಂದು ಪ್ರಯತ್ನಿಸುತ್ತಿರುವ ವಿರೋಧಿಗಳ ಗುಂಪು ಈ ರೀತಿಯ ಅರ್ಥವಿಲ್ಲದ ಕೃತ್ಯಕ್ಕೆ ಕೈ ಹಾಕಿರುವುದು ದುಃಖಕರ ಸಂಗತಿ, ಮುಂದೊಂದು ದಿನ ಬೀದಿ ನಾಯಿ ಸತ್ತರೂ ಸಹ ಅದಕ್ಕೆ ಮೋದಿಯೇ ಕಾರಣ ಎನ್ನಬಲ್ಲ ಬುದ್ದಿ(ಲದ್ದಿ) ಜೀವಿಗಳ ಗುಂಪೊಂದು ಸೃಷ್ಟಿಯಾದರೆ ಅಚ್ಚರಿಯೇನಿಲ್ಲ.ಈ ಹಿಂದೆ ವಿಚಾರವಾದಿ ಕಲ್ಬುರ್ಗಿ ಅವರ ಕೊಲೆಯಾಗಿತ್ತು, ಅವರು ಕೊಲೆಯಾದ ಸಂದರ್ಭದಲ್ಲಿಯೂ ಸಹ ಈ ರೀತಿಯದೇ ಟೊಳ್ಳು ಆರೋಪಗಳನ್ನು ಮಾಡಲಾಗಿತ್ತು, ಇಲ್ಲಿಯವರೆಗೂ ಸಹ ಆ ಕೊಲೆಯಲ್ಲಿ ಭಾಗಿಯಾದವರನ್ನು ಕಂಡುಹಿಡಿಯಲಾಗಿಲ್ಲವೆಂಬುದು ವಿಪರ್ಯಾಸ. ಅಂದು ಕಿರುಚಾಡುತ್ತಿದ್ದ ಗುಂಪು ಇಂದು ಸಹ ಗಂಟಲು ಕಿತ್ತುಕೊಂಡು ಬರುವ ರೀತಿ ಕಿರುಚಾಡುತ್ತಿದೆ, ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ.ಚಿತ್ರನಟ ಪ್ರಕಾಶ್ ರೈ ಅವರೂ ಸಹ ಆಧಾರಗಳಿಲ್ಲದೆ ಆರೋಪ ಮಾಡುವದರಲ್ಲಿ ನಿಸ್ಸೀಮ, ಈ ಸಾವಿಗೆ ನಿರ್ದಿಷ್ಟ ಸಂಸ್ಥೆ/ವ್ಯಕ್ತಿಗಳೇ ಕಾರಣ ಎನ್ನುವ ಮೂಲಕ ಅಪ್ರಬುದ್ದತೆ ತೋರಿದ್ದಾರೆ, ಚಿತ್ರದಲ್ಲಿ ನಿರ್ದೇಶಕರು ಬರೆದುಕೊಡುವ ಡೈಲಾಗ್ ಗಳನ್ನೂ ಸುಲಭವಾಗಿ ಹೇಳಬಲ್ಲ ನಟನಿಗೆ ಸೂಕ್ಷ್ಮ ವಿಚಾರಗಳ ಕುರಿತಾಗಿ ಹೇಗೆ ಪ್ರತಿಕ್ರಿಯಸಬೇಕೆಂಬ ಸಾಮಾನ್ಯ ವಿವೇಚನೆ ಇರಬೇಕಲ್ಲವೇ?? ಕೊಲೆಯಾದ ತರುವಾಯ ಸುದ್ಧಿ ವಾಹಿನಿಗಳಲ್ಲಿ ಇದರ ಕುರಿತಾಗಿ ಚರ್ಚೆಗಳಾಗುತ್ತಿತ್ತು, ಚರ್ಚೆಯಲ್ಲಿ ಭಾಗವಹಿಸಿದ್ದ ಗೌರಿ ಲಂಕೇಶ್ ರ ಸಹೋದರ ಇಂದ್ರಜಿತ್ ಲಂಕೇಶ್ ಸಹ ರಾಜಕಾರಣಿಗಳ ನಿರಾಧಾರ ಆರೋಪಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು, ಸತ್ಯಾಸತ್ಯತೆ ಹೊರಬರುವ ಮುನ್ನ ಈ ರೀತಿಯ ಅಸಮಂಜಸ ಹೇಳಿಕೆ ನೀಡುವುದು ನಿಜಕ್ಕೂ ಬೇಸರದ ಸಂಗತಿ, ಆಧಾರಗಳಿಲ್ಲದೆ ಮೋದಿ ಹಾಗೂ ಸಂಘ ಪರಿವಾರದ ವಿರುದ್ಧ ಪ್ರತಿಭಟಿಸುತ್ತಿರುವ ಮೂರ್ಖರಿಗೆ ಇನ್ನಾದರೂ ಬುದ್ದಿ ಬರಲಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ