ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರನ್ನು ಶಿಕ್ಷಿಸಿದರೆ ತಪ್ಪೇನು?
ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರನ್ನು ಶಿಕ್ಷಿಸಿದರೆ ತಪ್ಪೇನು? ಒಂದು ತಿಂಗಳ ಹಿಂದೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಚುನಾವಣೆ ನಡೆಯುತಿತ್ತು, ಚುನಾವಣೆ ವೇಳೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಸಿ ಆರ್ ಪಿ ಎಫ್ ಯೋಧರ ಪಡೆಯನ್ನು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು, ಕಾಶ್ಮೀರದಲ್ಲಿ ಬಹುತೇಕ ಸಮಯ ಶಾಂತಿಯನ್ನು ಕದಡುವ ರಾಷ್ಟ್ರ ದ್ರೋಹಿಗಳ ಗುಂಪು ಸದಾ ಎಚ್ಚರವಾಗಿಯೇ ಇರುತ್ತದೆ, ಪ್ರತ್ಯೇಕವಾದಿಗಳಿಂದ ನೆರವು ಪಡೆಯುವ ಪುಂಡರು ಕಾಶ್ಮೀರದಲ್ಲಿ ಪುಂಡಾಟ ನಡೆಸುತ್ತಾರೆ, ಕಾಶ್ಮೀರಿ ಜನಗಳ ಸೇವೆಗೆಂದೇ ನಿಯೋಜಿತರಾಗಿರುವ ಸೈನಿಕರ ವಿರುದ್ಧ ತಿರುಗಿ ಬೀಳುವ ಈ ಗುಂಪು ಸೈನಿಕರರಿಗೆ ನಾನಾ ವಿಧದ ಕಾಟ ಕೊಡುತ್ತಾ ಬಂದಿದೆ,ಸೈನ್ಯದ ವಿರುದ್ಧ ಕಲ್ಲು ತೂರುವ ದೃಶ್ಯಗಳು ಸುದ್ಧಿ ವಾಹಿನಿಗಳಲ್ಲಿ ಬಿತ್ತರವಾಗಿದ್ದನ್ನು ಕಂಡು ಮರುಗದವರಿಲ್ಲ,ಇದೇ ರೀತಿಯ ಕಲ್ಲು ತೂರುವ ಹೇಡಿ ಕೃತ್ಯ ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ಜರುಗಿತ್ತು, ಕಲ್ಲು ತೂರಾಟ ತಡೆಯಲು "ಮೇಜರ್ ಗೊಗೋಯ್" ಅವರು ಒಂದು ಉಪಾಯ ಮಾಡುತ್ತಾರೆ, ಆ ಉಪಾಯವೇನೆಂದರೆ ಕಲ್ಲು ತೂರಾಟ ಮಾಡುತ್ತಿರುವ ಗುಂಪಿನಿಂದ ಒಬ್ಬನನ್ನು ಗುರುತಿಸುವುದು ಹಾಗೂ ಅವನನ್ನು ಸೇನಾ ವಾಹನವಾದ ಜೀಪಿನ ಮುಂಬದಿಯಲ್ಲಿ ಕಟ್ಟುವುದು, ಕಶ್ಮೀರ ಮತ್ತಷ್ಟು ಉದ್ವಿಗ್ನವಾಗದಿರಲೆಂದು ಈ ಉಪಾಯ ಮಾಡಿದ ಮೇಜರ್ ಗೊಗೋಯ್ ಅವರ ದಿಟ್ಟ ನಡೆಯನ್ನು ನಾವೆಲ್ಲಾ ಮೆಚ್ಚಲೇಬೇಕು, ಅವರ ಧೈರ್ಯಕ್ಕೆ ನಮ್ಮದೊಂ...