"ಕುತೂಹಲ ಮೂಡಿಸುತ್ತಿರುವ ಅರ್ನಬ್ ಗೋಸ್ವಾಮಿ ಪುನರಾಗಮನ"
"ಕುತೂಹಲ ಮೂಡಿಸುತ್ತಿರುವ ಅರ್ನಬ್ ಗೋಸ್ವಾಮಿ ಪುನರಾಗಮನ" ಪ್ರತಿ ದಿನ ರಾತ್ರಿ ೯ ಆಯಿತೆಂದರೆ "ಅರ್ನಬ್ ಗೋಸ್ವಾಮಿ" ಅವರ ಪ್ರಸಿದ್ಧ ಕಾರ್ಯಕ್ರಮ "ನೇಶನ್ ವಾಂಟ್ಸ್ ಟು ನೊವ್" ಟೈಮ್ಸ್ ನೌ ಸುದ್ಧಿವಾಹಿನಿಯ ಮೂಲಕ ದೇಶ ವಿದೇಶದಾದ್ಯಂತ ಬಿತ್ತರಿ ಆಗುತಿತ್ತು, ಈ ಕಾರ್ಯಕ್ರಮವನ್ನು ಜನ ಅತಿಯಾಗಿಯೇ ಮೆಚ್ಚಿದ್ದರು,ಬೇರೆ ಕಾರ್ಯಕ್ರಮಗಳನ್ನು ನೋಡದಿದ್ದಾಗ ಬೇಸರವಾಗದ ಜನ ಈ ಕಾರ್ಯಕ್ರಮವನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡವರಂತೆ ಭಾವುಕರಾಗುತ್ತಿದರು,ಕೆಲ ತಿಂಗಳುಗಳ ಹಿಂದೆ ನಾನಾ ಕಾರಣಗಳಿಂದ ಅರ್ನಬ್ ಟೈಮ್ಸ್ ನೌ ಸಮೂಹವನ್ನು ತೊರೆದರು, ಅರ್ನಬ್ ನಿರ್ಗಮನದ ಬಳಿಕ ಸುದ್ಧಿ ಮಾಧ್ಯಮದ ಅಭಿಮಾನಿಗಳಿಗಾದ ಬೇಸರವನ್ನು ಹೇಳತೀರದು,ದಿನಂಪ್ರತಿ ಅರ್ನಬ್ ಅನ್ನು ನೆನೆಯುತ್ತಿದ್ದ ಜನ ಟ್ವಿಟ್ಟರ್ ಹಾಗು ಫೇಸ್ ಬುಕ್ ಮೂಲಕ ಅರ್ನಾಬ್ ಕುರಿತಾದ ಮೆಮೆ ಗಳನ್ನು ಪ್ರಕಟ ಪಡಿಸುತ್ತಿದರು,ದೇಶದಲಾಗುತ್ತಿರುವ ದೇಶದ್ರೋಹಿ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಅರ್ನಬ್ ರಾಷ್ಟ್ರದ್ರೋಹಿಗಳನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು,ಅರ್ನಬ್ ರಂತೆ ನೇರವಾಗಿ ಹಾಗು ದಿಟ್ಟವಾಗಿ ಮಾತನಾಡಬಲ್ಲಂತಹ ನಿರೂಪಕರ ಸಂಖ್ಯೆ ಭಾರತೀಯ ಪತ್ರಿಕೋದ್ಯಮದಲ್ಲಿ ಅತಿ ವಿರಳವೆಂದರೆ ಅತಿಶಯೋಕ್ತಿಯೇನಾಗದು?? ಆದ ಕಾರಣವಾಗಿಯೇ ಭಾರತೀಯ ವೀಕ್ಷಕರು ಅರ್ನಬರನ್ನು ಈ ಪರಿ ನೆನೆಸಿಕೊಳ್ಳುತ್ತಿರುವುದು ಹಾಗೂ ಮಿಸ್ ಮಾಡಿಕೊಳ್ಳುತ್ತಿರುವು...