"ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಕೇಸರಿ ಭಯೋತ್ಪಾದನೆ ಎಂಬ ಹುಸಿ ಪರಿಕಲ್ಪನೆ "
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಒಂದಿಲ್ಲೊಂದು ತಕರಾರು ನಡೆಯುತ್ತಲೇ ಬಂದಿದೆ, ಹಲವು ಬಾರಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿದ್ದರು ಸಹ ಉಭಯ ರಾಜ್ಯಗಳಿಗೆ ಅದರಿಂದ ಸಮಾಧಾನಕರವಾದ ಪರಿಹಾರ ದೊರೆತಿಲ್ಲ, ಕಾವೇರಿ ವಿಚಾರವಾಗಿ ಹಲವಾರು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಜನ ಸಾಮಾನ್ಯರ ಹಿತವನ್ನು ಬದಿಗಿಟ್ಟು ಜನಗಳನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದು ನಮ್ಮೆಲ್ಲರಿಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ,ಚುನಾ ವಣೆ ಸಮೀಪವಾಗುತ್ತಿದ್ದಂತೆ ಈ ಓರಾಟದ ಕಿಡಿ ಹೆಚ್ಚಾಗುತ್ತದೆ! ಕಳೆದ ವಾರ ಎಲ್ಲೆಡೆ ಐ ಪಿ ಲ್ ಪಂದ್ಯಾವಳಿ ಶುರುವಾಯಿತು, ತಮಿಳುನಾಡಿನ ಬಹುತೇಕ ರಾಜಕಾರಣಿಗಳು ಹಾಗೂ ಚಿತ್ರ ನಟರ ಗುಂಪೊಂದು ಐ ಪಿ ಲ್ ಪಂದ್ಯವನ್ನು ಚೆನ್ನೈ ನಲ್ಲಿ ಬಹಿಷ್ಕರಿಸಬೇಕೆಂದು ಒಟ್ಟಾಗಿ ಕೂಗಿದರು, ಚೆನ್ನೈ ಪರ ಆಡುವ ಆಟಗಾರರು ಕಪ್ಪು ಪಟ್ಟಿ ಧರಿಸಬೇಕೆಂದು, ಪಂದ್ಯ ನೋಡಲು ಹೋಗುವ ಅಭಿಮಾನಿಗಳು ಸಹ ಕಪ್ಪು ಪಟ್ಟಿ ಧರಿಸಬೇಕೆಂದು ಒತ್ತಾಯಿಸಿದರು, ಓರಾಟದ ನೇತೃತ್ವ ವಹಿಸಿದ್ದ ಕೆಲವರು ಅಭಿಮಾನಿಗಳೊಡನೆ ಅನುಚಿತವಾಗಿ ವರ್ತಿಸಿದ್ದ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿತ್ತು,ತಮಿಳುನಾಡಿನೆಗೆ ದೇಶದ ದೃಷ್ಟಿಯನ್ನು ತಿರುಗಿಸಬೇಕೆಂಬ ಹಂಬಲದಲ್ಲಿದ್ದ ಓರಾಟಗಾರರಿಗೆ ಐ ಪಿ ಲ್ ವರವಾಗಿ ಪರಿಣಮಿಸಿತು. ...